ಭಾನುವಾರ, ಆಗಸ್ಟ್ 14, 2022
20 °C

ಕೆರಗೋಡು ಪಂಚಾಯಿತಿ: ಡಿ.ಸಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆರಗೋಡು: ಗ್ರಾಮ ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಕೆರಗೋಡು ಗ್ರಾಮ ಪಂಚಾಯಿತಿ ಕಚೇರಿಗೆ ಮಂಗಳವಾರ ಭೇಟಿ ನೀಡಿ ಚುನಾವಣಾ ಕಾರ್ಯಗಳನ್ನು ಪರಿಶೀಲಿಸಿದರು.

ನೀರಾವರಿ ನಿಗಮದ ಆವರಣದಲ್ಲಿ ನಡೆಯುತ್ತಿರುವ ನಾಡಕಚೇರಿ ಕಟ್ಟಡ ಕಾಮಗಾರಿ ಪರಿಶೀಲನೆ ನಡೆಸಿದರು.

ಪಂಚೇಗೌಡನದೊಡ್ಡಿ ಗ್ರಾಮದಲ್ಲಿ ತಹಶೀಲ್ದಾರ್ ಒಬ್ಬರು ತಮ್ಮ ಪತ್ನಿಯನ್ನು ಗ್ರಾಮಪಂಚಾಯಿತಿ ಸದಸ್ಯರಾಗಿ ಅವಿರೋಧವಾಗಿ ಆಯ್ಕೆ ಮಾಡಿದರೆ ₹ 25 ಲಕ್ಷ ಆಮಿಷ ಒಡ್ಡಿದ ಪ್ರಕರಣದ ಕುರಿತು ನೀಡಿ ಗ್ರಾಮಸ್ಥರು ಹಾಗೂ ಮುಖಂಡರ ಜತೆ ಚರ್ಚಿಸಿದರು.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮಸ್ಥರು, ಗ್ರಾಮದಲ್ಲಿ ಹಲವು ವರ್ಷಗಳಿಂದಲೂ ಅವಿರೋಧ ಆಯ್ಕೆ ಮಾಡುತ್ತಿದ್ದು, ಈ ವರ್ಷವೂ ಚರ್ಚಿಸಿದ್ದು ನಿಜ. ಆದರೆ, ಆಕಾಂಕ್ಷಿಗಳಲ್ಲಿ ಒಮ್ಮತ ಮೂಡಿಲ್ಲ. ಯಾವುದೇ ಹಣಕಾಸು ಆಮಿಷ ಒಡ್ಡಿಲ್ಲ. ಇದೆಲ್ಲಾ ಕಪೋಲ ಕಲ್ಪಿತ ಎಂದರು.

ಬಳಿಕ ಮಾತನಾಡಿದ ಡಾ.ಎಂ.ವಿ.ವೆಂಕಟೇಶ್, ಪ್ರಜಾಪ್ರಭುತ್ವದಲ್ಲಿ ಯಾರು ಬೇಕಾದರೂ ಚುನಾವಣೆಗಳಲ್ಲಿ ಸ್ಪರ್ಧೆ ಮಾಡಬಹುದು. ಸ್ಪರ್ಧಾಕಾಂಕ್ಷಿಗಳನ್ನು ನಿರಾಕರಿಸುವುದು ಸಲ್ಲದು ಎಂದರು.

ತಹಶೀಲ್ದಾರ್ ಚಂದ್ರಶೇಖರ್ ಶಂ ಗಾಳಿ, ತಾಲ್ಲೂಕು ಪಂಚಾಯಿತಿ ಇಒ ಗಂಗಣ್ಣ, ಉಪತಹಶೀಲ್ದಾರ್ ಗಣೇಶ್, ರಾಜಸ್ವ ನಿರೀಕ್ಷಕ ಮೂಗೂ ರೇಗೌಡ, ಗ್ರಾಮಲೆಕ್ಕಿಗ ಗೋವರ್ಧನ್, ಪಿಡಿಒ ಪೂರ್ಣಿಮಾ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು