ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಖಾದಿ ಅರ್ಬನ್ ಹಾತ್

ಸ್ಥಳ ಪರಿಶೀಲನೆ ನಡೆಸಿದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪ ಗೌಡ
Last Updated 31 ಜನವರಿ 2021, 3:22 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ವಿಜಯನಗರದ 3ನೇ ಹಂತದಲ್ಲಿ ಖಾದಿ ಅರ್ಬನ್ ಹಾತ್ ನಿರ್ಮಾಣ ಮಾಡಲು ಉದ್ದೇಶಿ ಸಿರುವ ಸ್ಥಳವನ್ನು ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿ ಅಧ್ಯಕ್ಷ ಎನ್.ಆರ್.ಕೃಷ್ಣಪ್ಪಗೌಡ ಶನಿವಾರ ಪರಿಶೀಲನೆ ನಡೆಸಿದರು.

ಇಲ್ಲಿನ 37 ಗುಂಟೆ ಪ್ರದೇಶದಲ್ಲಿ ₹ 4.17 ಕೋಟಿ ವೆಚ್ಚದಲ್ಲಿ ಖಾದಿ ಅರ್ಬನ್ ಹಾತ್ ನಿರ್ಮಾಣ ಮಾಡಲು ಮಂಡಳಿ ಉದ್ದೇಶಿಸಿದೆ.

ಈ ವೇಳೆ ಸುದ್ದಿಗಾರರಿಗೆ ಪ್ರತಿಕ್ರಿಯಿ ಸಿದ ಕೃಷ್ಣಪ್ಪಗೌಡ, ‘ಈ ಬಗೆಯ ಖಾದಿ ಅರ್ಬನ್ ಹಾತ್ ರಾಜ್ಯದಲ್ಲೇ ಮೊದಲನೆಯದಾಗಿದೆ. ಖಾದಿ ಬಟ್ಟೆ, ಆಹಾರ ಪದಾರ್ಥಗಳು ಸೇರಿದಂತೆ ಒಟ್ಟು 200ಕ್ಕೂ ಹೆಚ್ಚು ವಸ್ತುಗಳು ಇಲ್ಲಿ ಸಿಗಲಿವೆ’ ಎಂದು ತಿಳಿಸಿದರು.

‘ಮಂಡಳಿ ವ್ಯಾಪ್ತಿಯಲ್ಲಿ 200 ಸಂಘ-ಸಂಸ್ಥೆಗಳಿವೆ. 17 ಸಾವಿರ ಕುಶಲಕರ್ಮಿಗಳು ಸದಸ್ಯತ್ವ ಪಡೆದಿದ್ದಾರೆ. ಅವರಲ್ಲಿ 2 ಸಾವಿರ ಮಂದಿ ಸಕ್ರಿಯರಾಗಿದ್ದಾರೆ. ಅವರು ಸಿದ್ಧಪಡಿಸಿದ ಉತ್ಪನ್ನಗಳನ್ನು ಮಂಡಳಿ ಏರ್ಪಡಿಸುವ ವಸ್ತುಪ್ರದರ್ಶನದಲ್ಲಿ ಮಾತ್ರ ಇದುವರೆಗೂ ಮಾರಾಟ ಮಾಡುತ್ತಿದ್ದರು. ಅರ್ಬನ್ ಹಾತ್ ಸ್ಥಾಪನೆಯಾದರೆ ನಿರಂತರವಾಗಿ ಅವರು ತಮ್ಮ ಉತ್ಪನ್ನಗಳನ್ನು ವ್ಯಾಪಾರ ಮಾಡಬಹುದು’ ಎಂದು ತಿಳಿಸಿದರು.

ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಒಂದು ವೇಳೆ ಸರ್ಕಾರ ದಿಂದ ಈ ಯೋಜನೆಗೆ ಅನುಮೋದನೆ ದೊರೆಯದೆ ಹೋದರೆ ಮಂಡಳಿಯ ಹಣದಿಂದಲೇ ಯೋಜನೆಯನ್ನು ಆರಂಭಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೈಸೂರಿನಲ್ಲಿ ಈ ಪ್ರಯೋಗ ಯಶಸ್ವಿಯಾದರೆ ಪ್ರಮುಖ ಜಿಲ್ಲೆಗಳಲ್ಲಿ ಇದೇ ಬಗೆಯ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸಿಕೊಡಲಾಗುವುದು ಎಂದರು.

ಹಳೆಯ ಮಾದರಿಯ ಖಾದಿ ಉತ್ಪನ್ನದಿಂದ ಹೊಸ ತಲೆಮಾರನ್ನು ಸೆಳೆಯುವುದು ಕಷ್ಟ. ಅದಕ್ಕಾಗಿಯೇ ಕುಶಲಕರ್ಮಿಗಳಿಗೆ ತರಬೇತಿ ನೀಡ ಲಾಗಿದ್ದು, ಯುವಪೀಳಿಗೆಯನ್ನು ಸೆಳೆಯು ವಂತಹ ವಿನ್ಯಾಸಗಳನ್ನು ರೂಪಿಸಲು ಯತ್ನಿಸಲಾಗಿದೆ ಎಂದು ತಿಳಿಸಿದರು.

ಖಾದಿ ಉತ್ಪನ್ನಗಳ ಮಾರಾಟಕ್ಕೆ ಆನ್‌ಲೈನ್‌ ವೇದಿಕೆ: ಮಂಡಳಿಯ ಕಾರ್ಯನಿರ್ವಹಣಾಧಿಕಾರಿ ಜಯವಿಭ ವಸ್ವಾಮಿ ಮಾತನಾಡಿ, ‘ಖಾದಿ ಉತ್ಪನ್ನ ಗಳ ಮಾರಾಟಕ್ಕೆಂದೇ ಆನ್‌ಲೈನ್‌ ವೇದಿಕೆಯನ್ನು ಕಲ್ಪಿಸಿಕೊಡುವ ಕಾರ್ಯ ಪ್ರಗತಿಯಲ್ಲಿದೆ. ಇದಕ್ಕೆಂದೇ ಪ್ರತ್ಯೇಕ ವೆಬ್‌ಸೈಟ್‌ ರೂಪಿಸಲಾಗುತ್ತಿದೆ’ ಎಂದು ತಿಳಿಸಿದರು.

ಹೊರರಾಜ್ಯ ಮತ್ತು ವಿದೇಶಗಳಲ್ಲಿ ರಾಜ್ಯದ ಖಾದಿ ಉತ್ಪನ್ನಗಳಿಗೆ ಬೇಡಿಕೆ ಇದೆ. ಇವರನ್ನು ತಲುಪುವ ಸದ್ಯದ ಏಕೈಕ ಮಾರ್ಗ ಎಂದರೆ ಮಾರಾಟ ಮೇಳಗಳು. ಆದರೆ, ಈಗ ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಆನ್‌ಲೈನ್‌ ಮೂಲಕವೂ ಖರೀದಿಗೆ ಅವಕಾಶ ಇರುವ ಹಾಗೆ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT