ಕೊಡಗು ಮುಳುಗುವಾಗ ಸಂಸದರಿರಲಿಲ್ಲ: ವೈರಲ್‌ ಪೋಸ್ಟ್‌ ಎಷ್ಟು ನಿಜ?

7

ಕೊಡಗು ಮುಳುಗುವಾಗ ಸಂಸದರಿರಲಿಲ್ಲ: ವೈರಲ್‌ ಪೋಸ್ಟ್‌ ಎಷ್ಟು ನಿಜ?

Published:
Updated:

ಮೈಸೂರು: ‘ಪ್ರವಾಹದಿಂದ ಕೊಡಗು ಮುಳುಗುತ್ತಿದೆ, ಯಾರನ್ನೂ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ, ಊಟವಿಲ್ಲದೆ ಜನರು ನರಳುತ್ತಿದ್ದಾರೆ. ಕ್ಷೇತ್ರದ ಸಂಸದ ಪ್ರತಾಪಸಿಂಹ ಎಲ್ಲಿದ್ದಾರೆ? ಕೊಡಗು ರಕ್ಷಿಸಿ’ ಎಂಬ ಪೋಸ್ಟ್‌ವೊಂದು ಫೇಸ್‌ಬುಕ್‌ನಲ್ಲಿ ಹರಿದಾಡುತ್ತಿದೆ.

‘ರೋಸ್ಟ್‌ ಕಾರ್ಡ್‌’ ಹೆಸರಿನ ಖಾತೆಯಲ್ಲಿ ಹಾಕಿರುವ ಈ ಪೋಸ್ಟ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಡಗಿನ ಪ್ರವಾಹಪೀಡಿತ ಸ್ಥಳಗಳಿಗೆ ಸಂಸದರು ಭೇಟಿ ನೀಡಿರುವ ಚಿತ್ರಗಳನ್ನು ಅವರ ಬೆಂಬಲಿಗರು ಅಪ್‌ಲೋಡ್‌ ಮಾಡಿದ್ದಾರೆ.

ಕಳೆದ ಮೂರು ದಿನಗಳಿಂದ ಪ್ರವಾಹಪೀಡಿತ ಸ್ಥಳಗಳಿಗೆ ಸಂಸದರು ಭೇಟಿ ನೀಡುತ್ತಿದ್ದಾರೆ. ಕುಶಾಲನಗರದಲ್ಲಿ ನೀರು ತುಂಬಿರುವ ಬಡಾವಣೆಗಳಿಗೆ ಗುರುವಾರ ಅಧಿಕಾರಿಗಳೊಂದಿಗೆ ತೆರಳಿದ್ದರು. ಸುಂಟಿಕೊಪ್ಪ, ಮಡಿಕೇರಿಯಲ್ಲಿ ಸ್ಥಾಪಿಸಿರುವ ಗಂಜಿಕೇಂದ್ರಗಳಿಗೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಬರಹ ಇಷ್ಟವಾಯಿತೆ?

 • 17

  Happy
 • 4

  Amused
 • 1

  Sad
 • 3

  Frustrated
 • 7

  Angry

Comments:

0 comments

Write the first review for this !