ಮೈ ನವಿರೇಳಿಸಿದ ‘ಕೆಟಿಎಂ ರೇಸಿಂಗ್’

ಮಂಗಳವಾರ, ಜೂನ್ 18, 2019
24 °C
ಲಲಿತಮಹಲ್ ಎದುರು ನಿರ್ಮಿಸಿದ್ದ ಸಾಹಸ ಟ್ರ್ಯಾಕ್‌ನಲ್ಲಿ ಅಬ್ಬರಿಸಿದ ಬೈಕ್‌ಗಳು

ಮೈ ನವಿರೇಳಿಸಿದ ‘ಕೆಟಿಎಂ ರೇಸಿಂಗ್’

Published:
Updated:
Prajavani

ಮೈಸೂರು: ‘ಕೆಟಿಎಂ ಎಂದರೆ ರೇಸಿಂಗ್‌’ ಎನ್ನುವ ಮಾತು ಈಗ ಪ್ರಚಲಿತದಲ್ಲಿದೆ. ‘ಕೆಟಿಎಂ’ ಬೈಕ್‌ ಹೊಂದಿರುವ ಪ್ರತಿಯೊಬ್ಬ ಮಾಲೀಕನ ಆಸೆಯೂ ರೇಸ್‌ ಮಾಡಬೇಕು ಎನ್ನುವುದೇ ಆಗಿರುತ್ತದೆ. ಅಂತಹದೊಂದು ವಿಶೇಷ ಅವಕಾಶ ಭಾನುವಾರ ಮೈಸೂರಿನ ಯುವಕರದ್ದಾಗಿತ್ತು. ಕಿವಿಗಡಚಿಕ್ಕುವ ಶಬ್ದದೊಂದಿಗೆ ಮೈನವಿರೇಳಿಸುವಂತೆ ಬೈಕ್‌ ಚಲಾಯಿಸಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು.

ಲಲಿತಮಹಲ್‌ ಹೋಟೆಲ್‌ ಎದುರು ನಿರ್ಮಿಸಿದ್ದ ಸಾಹಸ ಟ್ರ್ಯಾಕ್‌ನಲ್ಲಿ ಕೆಟಿಎಂನ ನಾಲ್ಕು ಮಾದರಿಯ ಬೈಕ್‌ಗಳು ಪ್ರದರ್ಶನ ತೋರಿದವು. ಕೆಟಿಎಂ ಡ್ಯೂಕ್ 200, ಡ್ಯೂಕ್ 390, ಡ್ಯೂಕ್ 250, ಆರ್‌ಸಿ 200 ಆರ್‌ಸಿ 125 ಬೈಕುಗಳ ಚಾಲಕರು ಬೈಕ್‌ ಚಾಲನೆ ಮಾಡಿದರು. ನೂರಾರು ಕಿಲೋ ಮೀಟರ್ ವೇಗದಲ್ಲಿ ಎಡ–ಬಲ ತಿರುವುಗಳಲ್ಲಿ ವೇಗವಾಗಿ ಚಲಿಸಿ ಟ್ರ್ಯಾಕ್‌ ಆಚೆ ಸೇರಿದ್ದ ಬೈಕ್‌ ಪ್ರಿಯರನ್ನು ಬೆರಗುಗೊಳಿಸಿದರು.

ದೇಶದ 100ಕ್ಕೂ ಹೆಚ್ಚು ನಗರಗಳಲ್ಲಿ ವರ್ಷಪೂರ್ತಿ ನಡೆಯುವ ಈ ಸ್ಟಂಟ್‌ ರೇಸಿಂಗ್‌ ಕಾರ್ಯಕ್ರಮದಲ್ಲಿ ಮೈಸೂರಿನ 64 ಕೆಟಿಎಂ ಮಾಲೀಕರು ಭಾಗವಹಿಸಿದ್ದರು. ಇಷ್ಟೂ ಬೈಕರ್‌ಗಳನ್ನು 5 ತಂಡಗಳಾಗಿ ವಿಭಜಿಸಿ ರೇಸಿಂಗ್‌ ನಡೆಸಲಾಯಿತು. ಅಂತಿಮ ಹಂತಕ್ಕೆ ಬಂದವರನ್ನು ಕೊನೆಯ ಸುತ್ತಿನ ರೇಸ್‌ಗೆ ಅವಕಾಶ ಕಲ್ಪಿಸಿಕೊಡಲಾಯಿತು.

ಕೆಟಿಎಂ ಡ್ಯೂಕ್ 200 ವಿಭಾಗದಲ್ಲಿ 26, ಡ್ಯೂಕ್ 390 ವಿಭಾಗದಲ್ಲಿ 17, ಡ್ಯೂಕ್ 250 ವಿಭಾಗದಲ್ಲಿ 5, ಆರ್‌ಸಿ 200 ವಿಭಾಗದಲ್ಲಿ 12 ಹಾಗೂ ಆರ್‌ಸಿ 125 ವಿಭಾಗದಲ್ಲಿ 4 ಸವಾರರು ಬೈಕ್‌ ಚಾಲನೆ ಮಾಡಿದರು. ಈ ಐದು ವಿಭಾಗಗಳಲ್ಲಿ ಮುಂಚೂಣಿಯಲ್ಲಿ ಬಂದ ಇಬ್ಬರನ್ನು ಆಯ್ಕೆ ಮಾಡಿ ಅಂತಿಮ ಸುತ್ತಿನಲ್ಲಿ ರೇಸ್ ಮಾಡಿಸಲಾಯಿತು.

ಯುವತಿಯರೂ ಭಾಗಿ: ಬೈಕ್‌ ಚಾಲನೆಯಲ್ಲಿ ಇದೇ ಮೊದಲ ಬಾರಿಗೆ ಯುವತಿಯರು ಭಾಗವಹಿಸಿದ್ದು ಪ್ರೇಕ್ಷಕರ ಮೆಚ್ಚುಗೆ ಗಳಿಸಿತು. ನಗರದ ತ್ರೀಜಾ ಜೇಸುದಾಸ್ ಹಾಗೂ ಮಾನಸಾ ಬೈಕ್ ಚಾಲನೆ ಮಾಡಿ ಚಪ್ಪಾಳೆ, ಸಿಳ್ಳೆ ಗಿಟ್ಟಿಸಿದರು.

ಈ ಕಾರ್ಯಕ್ರಮದ ಮುಖ್ಯ ಆಕರ್ಷಣೆ ಇಬ್ಬರು ವೃತ್ತಿಪರ ರೇಸರ್‌ಗಳ ಸಾಹಸ ಪ್ರದರ್ಶನ. ‌‘ವೀಲಿಂಗ್‌’, ‘ಸ್ಟಾಪಿ’ ಭಂಗಿಗಳನ್ನು ಪ್ರದರ್ಶಿಸಿ ಚಪ್ಪಾಳೆ ಗಿಟ್ಟಿಸಿದರು. ಹವ್ಯಾಸಿ ಬೈಕ್ ಚಾಲಕರಿಗೆ ಈ ರೀತಿಯ ಬೈಕ್‌ ಚಾಲನೆಗೆ ಅವಕಾಶ ಇರಲಿಲ್ಲ.

‘ಇದು ಸ್ಪರ್ಧೆಯಲ್ಲ. ಬದಲಿಗೆ, ‘ಕೆಟಿಎಂ’ ಸಮುದಾಯವನ್ನು ಬಲ‍ಪಡಿಸುವ ಒಂದು ಕಾರ್ಯಕ್ರಮ. ಕೆಟಿಎಂ ಅದ್ಭುತವಾದ ಬೈಕ್‌. ಅದರ ಶಕ್ತಿ, ಸಾಮರ್ಥ್ಯವನ್ನು ಮಾಲೀಕರಿಗೆ ತಿಳಿಸುವುದು ನಮ್ಮ ಉದ್ದೇಶ’ ಎಂದು ‘ಕೆಟಿಎಂ’ ಪ್ರಾದೇಶಿಕ ಮಾರುಕಟ್ಟೆ ವ್ಯವಸ್ಥಾಪಕ ಪ್ರಣವ್ ‘ಪ್ರಜಾವಾಣಿ’ಗೆ ತಿಳಿಸಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !