ಬುಧವಾರ, ಜುಲೈ 28, 2021
23 °C
ಡ್ರಾಪ್ ಕೊಡಿ ಎಂದು ಸುಲಿಗೆ ಮಾಡಿದ ತೃತೀಯ ಲಿಂಗಿ

ಚಟ ಬಿಡಿಸುತ್ತೇವೆ ಎಂದು ಕೊಂದೇ ಬಿಟ್ಟರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಇಲ್ಲಿನ ಮದ್ಯಪಾನ ಮತ್ತು ಮಾದಕ ವ್ಯಸನಿಗಳ ಪುನರ್ವಸತಿ ಕೇಂದ್ರ ಉಸಿರು ಫೌಂಡೇಷನ್‌ಗೆ ದಾಖಲಾಗಿದ್ದ ಎನ್.ಆರ್.ಮೊಹಲ್ಲಾ ನಿವಾಸಿ ಅಲ್ತಾಫ್ ಪಾಷಾ (35) ಅವರು ಮೃತಪಟ್ಟಿದ್ದು, ಕೊಲೆ ಆರೋಪದ ಮೇರೆಗೆ ಫೌಂಡೇಷನ್ನಿನ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.‌

‘ವಿಪರೀತ ಮದ್ಯ ಸೇವಿಸುತ್ತಿದ್ದ ಇವರನ್ನು ಮದ್ಯ ಸೇವನೆ ಚಟ ಬಿಡಿಸಿ ಎಂದು ಕುಟುಂಬದವರು ಫೌಂಡೇಷನ್ನಿಗೆ ಗುರುವಾರವಷ್ಟೇ ದಾಖಲಿಸಿದ್ದರು. ಆದರೆ, ಇವರು ರಂಪಾಟ ಮಾಡುತ್ತಿದ್ದರು ಎಂಬ ಕಾರಣಕ್ಕೆ ಫೌಂಡೇಷನ್ನಿನ ಸಿಬ್ಬಂದಿ ಹೊಡೆದಿದ್ದಾರೆ. ಈ ಏಟಿಗೆ ಇವರು ಮೃತಪಟ್ಟಿದ್ದಾರೆ ಎಂದು ಆರೋಪಿಸಿ ಮೃತರ ಸೋದರ ನಾದಿಲ್ ಪಾಷಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಒಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ತಿಳಿಯಲಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಕುವೆಂಪುನಗರ ಠಾಣೆಯಲ್ಲಿ ದಾಖಲಾಗಿದೆ.

ಡ್ರಾಪ್ ಕೊಡಿ ಎಂದು ಸುಲಿಗೆ ಮಾಡಿದರು!

ಮೈಸೂರು: ಮಲೆಮಹದೇಶ್ವರಬೆಟ್ಟದ ಮಲಿಯೂರು ಗ್ರಾಮದ ನಿವಾಸಿ ಸುರೇಶ್‌ ಎಂಬುವವರು ಕಾರಿನಲ್ಲಿ ಬರುವಾಗ ಹುಣಸೂರು ತಾಲ್ಲೂಕಿನ ಚಿಕ್ಕಾಡನಹಳ್ಳಿ ಬಳಿ ಕಾರನ್ನು ತಡೆದ ತೃತೀಯ ಲಿಂಗಿಯೊಬ್ಬರು ಡ್ರಾಪ್ ಕೇಳಿದ್ದಾರೆ. ಮಾರ್ಗಮಧ್ಯದಲ್ಲಿ ಲೈಂಗಿಕವಾಗಿ ಪ್ರಚೋದಿಸಿ 20 ಗ್ರಾಂ ತೂಕದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದಾರೆ. ಪ್ರಕರಣ ಬಿಳಿಕೆರೆ ಠಾಣೆಯಲ್ಲಿ ದಾಖಲಾಗಿದೆ.

ಸೆಲ್ಫಿ ವಿಡಿಯೊ ಮಾಡಿಟ್ಟು ಮಹಿಳೆ ಆತ್ಮಹತ್ಯೆ

ಮೈಸೂರು: ಮಹಿಳೆಯೊಬ್ಬರು ಸೆಲ್ಫಿ ವಿಡಿಯೊ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯಿಂದ ದೂರವಿದ್ದ ಮಹಿಳೆಯು ಸ್ನೇಹಿತ ವೆಂಕಟೇಶ್ ಅವರೊಂದಿಗೆ ವ್ಯಾಪಾರ ಆರಂಭಿಸಿದ್ದರು. ಆದರೆ, ಹಣಕಾಸು ವಿಚಾರಕ್ಕೆ ಇಬ್ಬರ ಮಧ್ಯೆ ಜಗಳವಾಗಿತ್ತು. ಇದೇ ಕಾರಣ ನೀಡಿ ಸೆಲ್ಫಿ ವಿಡಿಯೊ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವೆಂಕಟೇಶ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸರಸ್ವತಿಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು