ಶನಿವಾರ, ಆಗಸ್ಟ್ 13, 2022
24 °C
2029ರಲ್ಲಿ ಗೆದ್ದು, ಸ್ವಯಂ ನಿವೃತ್ತಿ ಪಡೆಯಲು ಸಲಹೆ

ಮೋದಿಯಂತಹ ಪ್ರಧಾನಿ ಇದುವರೆಗೆ ಹುಟ್ಟಿರಲಿಲ್ಲ: ಎಸ್‌.ಎಲ್‌.ಭೈರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: 'ನರೇಂದ್ರ ಮೋದಿ ರೀತಿಯಲ್ಲಿ ಗುರಿ, ಹಟ ಇಟ್ಟುಕೊಂಡು ಕೆಲಸ ಮಾಡಿದವರು ಯಾರೂ ಇಲ್ಲ. ದೇಶದ ಏಳಿಗೆಗಾಗಿ ಈ ರೀತಿ ಜೀವನ ಮುಡಿಪಾಗಿಟ್ಟಂತಹ ಪ್ರಧಾನಿ ನಮ್ಮ ದೇಶದಲ್ಲಿ ಇದುವರೆಗೂ ಹುಟ್ಟಿರಲಿಲ್ಲ' ಎಂದು ಸಾಹಿತಿ ಎಸ್‌.ಎಲ್‌.ಭೈರಪ್ಪ ಶ್ಲಾಘಿಸಿದರು.

ಪ್ರಧಾನಿ ಅವರ ಜನ್ಮದಿನದ ಪ್ರಯುಕ್ತ ಶಾಸಕ ಎಸ್‌.ಎ.ರಾಮದಾಸ್‌ ಅವರು ಗುರುವಾರ ಇಲ್ಲಿ ಆಯೋಜಿಸಿದ್ದ ‘ನಮೋ ದಿವಸ್‌’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ನರೇಂದ್ರ ಮೋದಿ ಅವರು 2024 ಮತ್ತು 2029ರ ಚುನಾವಣೆಗಳಲ್ಲಿ ಪೂರ್ಣ ಬಹುಮತದೊಂದಿಗೆ ಗೆದ್ದು ಬರಲಿ. 2029ರಲ್ಲಿ ಕೆಲವು ಸಮಯ ಹುದ್ದೆಯಲ್ಲಿ ಮುಂದುವರಿದು, ತಮ್ಮ ಉತ್ತರಾಧಿಕಾರಿಗೆ ಅಧಿಕಾರ ವಹಿಸಿಕೊಟ್ಟು ಸ್ವಯಂ ನಿವೃತ್ತಿ ಪಡೆಯಲಿ’ ಎಂದು ಹೇಳಿದರು.

‘2019ರ ಚುನಾವಣೆಗೆ ಮುನ್ನ ಪತ್ರಕರ್ತರೊಬ್ಬರು ಕೇಳಿದ್ದ ಪ್ರಶ್ನೆಗೆ ಇದೇ ರೀತಿ ಉತ್ತರಿಸಿದ್ದೆ. ಸ್ವಯಂ ನಿವೃತ್ತಿ ಪಡೆಯುವ ವೇಳೆಗೆ ಅವರು ಸಮರ್ಥ ಉತ್ತರಾಧಿಕಾರಿಯೊಬ್ಬರನ್ನು ತಯಾರು ಮಾಡಬೇಕೆಂಬುದು ನನ್ನ ಅಪೇಕ್ಷೆ’ ಎಂದರು.

ಜಿಎಸ್‌ಟಿ ಪಾಲು ಬೇರೆ ರೂಪದಲ್ಲಿ ಕೊಟ್ಟಿದ್ದಾರೆ: ಕೇಂದ್ರವು ರಾಜ್ಯದ ಪಾಲಿನ ಜಿಎಸ್‌ಟಿಯನ್ನು ಬಾಕಿ ಉಳಿಸಿರುವ ಕುರಿತ ಪ್ರಶ್ನೆಗೆ, ‘ಜಿಎಸ್‌ಟಿ ಪಾಲನ್ನು ಬೇರೆ ರೂಪದಲ್ಲಿ ಕೊಟ್ಟಿರುತ್ತಾರೆ. ಅದಕ್ಕೆ ಬೇರೆ ಬೇರೆ ಲೆಕ್ಕಾಚಾರಗಳು ಇರುತ್ತವೆ’ ಎಂದು ಪ್ರತಿಕ್ರಿಯಿಸಿದರು.

‘ಮೋದಿ ಏನು ಮಾಡಿದರೂ ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ಅವರ ಕೆಲಸ ಟೀಕೆ ಮಾಡುವುದಕ್ಕಷ್ಟೇ ಸೀಮಿತವಾಗಬಾರದು. ಬೇರೆ ದೇಶಗಳಲ್ಲಿ ವಿರೋಧ ಪಕ್ಷದವರು ಈ ರೀತಿ ವರ್ತಿಸುವುದಿಲ್ಲ. ಇಲ್ಲಿನವರ ವರ್ತನೆ ನಿಜಕ್ಕೂ ಅಸಹ್ಯ ಹುಟ್ಟಿಸುತ್ತದೆ’ ಎಂದು ಕಿಡಿಕಾರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು