ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾ ಸಾಮಗ್ರಿ ಶುದ್ಧೀಕರಣ ಶುಭಾರಂಭ

ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ
Last Updated 2 ಫೆಬ್ರುವರಿ 2018, 20:10 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪೂರ್ವ ಸಿದ್ಧತಾ ಧಾರ್ಮಿಕ ವಿಧಿ ವಿಧಾನಗಳು ಜೈನ ಮಠದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶುಕ್ರವಾರ ಆರಂಭಗೊಂಡವು.

ಕ್ಷೇತ್ರದ ಪರಂಪರೆಯಂತೆ ಬೆಳಿಗ್ಗೆ ಪಟ್ಟಣದ ಚಾವುಂಡರಾಯ ಸಭಾ ಮಂಟಪದಲ್ಲಿ ಶ್ರಾವಕ, ಶ್ರಾವಕಿಯರು ಪೂಜಾ ಸಾಮಗ್ರಿಗಳ ತಯಾರಿ ಹಾಗೂ ಪೂಜಾ ಸಾಮಗ್ರಿಗಳ ಶುದ್ಧೀಕರಣ ಮಾಡಿದರು.

ಕಾರ್ಯಕ್ರಮಕ್ಕೂ ಮುನ್ನ ಬಾಹುಬಲಿ ಮೂರ್ತಿಯನ್ನು ಮಠದ ಬಸದಿಯಿಂದ ಚಾವುಂಡರಾಯ ಮಂಟಪಕ್ಕೆ ಮಂಗಳ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ತಂದು ರಜತ ಪೀಠದಲ್ಲಿ ಸ್ಥಾಪಿಸಲಾಯಿತು. ಮಹಾಮಸ್ತಕಾಭಿಷೇಕದ ರಾಷ್ಟ್ರೀಯ ಅಧ್ಯಕ್ಷೆ ಸರಿತಾ ಎಂ.ಕೆ.ಜೈನ್‌ ಅವರು ಲವಂಗ, ಅರಿಷಿಣದ ಕೊನೆ, ನವಧಾನ್ಯಗಳನ್ನು ಅರೆಯುವುದರ ಮೂಲಕ ಚಾಲನೆ ನೀಡಿದರು.

ನಂತರ ವರ್ಧಮಾನ ಸಾಗರ ಮಹಾರಾಜರು ಮತ್ತು ಎಲ್ಲ ಸಂಘಸ್ಥ ತ್ಯಾಗಿಗಳಿಗೂ ಅರ್ಘ್ಯಗಳನ್ನು ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಪಂಚಕಲ್ಯಾಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಸೌಧರ್ಮ ಇಂದ್ರ ಇಂದ್ರಾಣಿಯರಾದ ಗುವಾಹಟಿಯ ಭಾಗ್‌ಚಂದ್, ಸುನಿತಾ ದೇವಿ ಚೂಡಿವಾಲಾ ಅವರು ಶುದ್ಧೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಮಹೋತ್ಸವದ ನಿಮಿತ್ತ ನಾಂದಿ ಮಂಗಲ, ಪಟ್ಟಣ, ಚಂದ್ರಗಿರಿ, ವಿಂಧ್ಯಗಿರಿ ಹಾಗೂ ಹೊರವಲಯದ ಎಲ್ಲಾ ಬಸದಿಗಳಲ್ಲಿನ ತೀರ್ಥಂಕರರಿಗೆ ಪಂಚಾಮೃತ ಅಭಿಷೇಕ, ಪೂಜೆ ನೆರವೇರಿಸಲಾಯಿತು.

ಕ್ಷೇತ್ರದ ಪ್ರತಿಷ್ಠಾಚಾರ್ಯರಾದ ಡಿ.ಪಾರ್ಶ್ವನಾಥ್‌ ಶಾಸ್ತ್ರಿ, ಎಸ್‌.ಪಿ.ಉದಯಕುಮಾರ್‌ ಶಾಸ್ತ್ರಿ, ಎಸ್‌.ಡಿ.ನಂದ ಕುಮಾರ್‌ ಹಾಗೂ ತಂಡದವರು ಶುದ್ಧೀಕರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT