ಎಲ್‌ಐಸಿ ಪ್ರತಿನಿಧಿಗಳಿಂದ ಪ್ರೆತಿಭಟನೆ

7

ಎಲ್‌ಐಸಿ ಪ್ರತಿನಿಧಿಗಳಿಂದ ಪ್ರೆತಿಭಟನೆ

Published:
Updated:
Deccan Herald

ಮೈಸೂರು: ಪಾಲಿಸಿದಾರರಿಗೆ ಬೋನಸ್ ಹೆಚ್ಚಿಸಬೇಕು, ಕಂತಿನ ಮೇಲೆ ವಿಧಿಸಿರುವ ಜಿಎಸ್‌ಟಿ ತೆಗೆಯಬೇಕು ಎನ್ನುವ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಗಳ ಸಂಘಟನೆ ನೇತೃತ್ವದಲ್ಲಿ ಭಾರತೀಯ ಜೀವ ವಿಮಾ ನಿಗಮ ಕಚೇರಿ ಮುಂದೆ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.

ಸಂಘಟನೆಯ ಮೈಸೂರು ವಿಭಾಗದ ಸಂಚಾಲಕ ಯೋಗೇಶ್‌ ಮಾತನಾಡಿ, ಜೀವ ವಿಮಾ ನಿಗಮವು ಈಚೆಗೆ ತಂದಿರುವ ಮಾರ್ಪಾಟುಗಳು ಪಾಲಿಸಿದಾರರಿಗೆ ಹಾಗೂ ಪ್ರತಿನಿಧಿಗಳಿಗೆ ಮಾರಕವಾಗಿದೆ ಎಂದರು.

ಈ ಕೂಡಲೇ ಪಾಲಿಸಿದಾರರು ಕಟ್ಟುವ ಕಂತಿನ ಮೇಲೆ ವಿಧಿಸಿರುವ ಜಿಎಸ್‌ಟಿ ತೆಗೆಯಬೇಕು. ಪಾಲಿಸಿದಾರರು ಕಟ್ಟುವ ಕಂತು ತಡವಾದರೆ ಅಥವಾ ಪಾಲಿಸಿ ನಿಷ್ಕ್ರಿಯವಾದರೆ ಈ ಮೊದಲು ನವೀಕರಿಸಲು 5 ವರ್ಷ ಸಮಯವಿತ್ತು. ಈಗ ಅದು 2 ವರ್ಷಕ್ಕೆ ಇಳಿದಿದ್ದು, ಮುಂಚಿನಂತೆಯೇ 5 ವರ್ಷಕ್ಕೆ ಮುಂದುವರಿಸಬೇಕು. ಪ್ರತಿನಿಧಿಗಳಿಗೆ ಗುಂಪು ವಿಮಾ ಯೋಜನೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘಟನೆಯ ವಿಭಾಗೀಯ ಅಧ್ಯಕ್ಷ ಮಂಜುನಾಥ್, ಸಹ ಸಂಚಾಲಕರಾದ ಕೃಷ್ಣಮೂರ್ತಿ, ಎನ್‌.ಜಿ.ಚಂದ್ರಶೇಖರ್, ಎಸ್‌.ಎನ್.ಗುರುಸ್ವಾಮಿ, ಆರ್.ಬಿ.ಮುತ್ತುರಾಜು, ಸಿ.ಎನ್‌.ಧನಪಾಲಶೆಟ್ಟಿ, ಕೆ.ಕೆಂಪರಾಜು, ಎನ್‌.ಪ್ರಭಾಕರ, ಎಚ್.ಟಿ.ರವಿ, ಎ.ಎನ್.ಹನುಮೇಗೌಡ, ಐಶ್ವರನಾಯಕ್, ಬಿ.ಎಸ್.ಅರವಿಂದ ಕುಮಾರ್, ಜಯರಾಮು, ವಿ.ಬಸವರಾಜು, ಸಿ.ಶಿವಣ್ಣ, ಎಂ.ಎಸ್.ಸುರೇಶ್, ಆರ್‌.ಟಿ.ರವಿ, ನಾಗರಾಜು ಚಾಕನಕೆರೆ, ಶಿವನಂಜೇಗೌಡ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !