ಹುಣಸೂರು ನಗರಸಭೆಗೆ ಎಚ್‌.ವೈ.ಮಹದೇವ್‌ ಅಧ್ಯಕ್ಷ

7

ಹುಣಸೂರು ನಗರಸಭೆಗೆ ಎಚ್‌.ವೈ.ಮಹದೇವ್‌ ಅಧ್ಯಕ್ಷ

Published:
Updated:
Deccan Herald

ಹುಣಸೂರು: ಹುಣಸೂರು ನಗರಸಭೆ ನೂತನ ಅಧ್ಯಕ್ಷರಾಗಿ 17ನೇ ವಾರ್ಡ್‌ ಸದಸ್ಯ ಎಚ್‌.ವೈ. ಮಹದೇವ್ ಅವಿರೋಧವಾಗಿ ಆಯ್ಕೆಗೊಂಡರು.

ನಗರಸಭೆಯಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾದ ಕೂಡಲೇ ಜೆಡಿಎಸ್‌ ಪಕ್ಷದ ಎಚ್.ವೈ.ಮಹದೇವ್‌ ನಾಮಪತ್ರ ಸಲ್ಲಿಸಿದರು. ಇದರಿಂದ ಚುನಾವಣಾಧಿಕಾರಿ ಕೆ.ನಿತೀಶ್‌ ಆಯ್ಕೆಯನ್ನು ಘೋಷಿಸಿದರು.

ಬಲಾಬಲ: ನಗರಸಭೆಯಲ್ಲಿ ಒಟ್ಟು 27 ಸದಸ್ಯರಿದ್ದು, ಈ ಪೈಕಿ ಕಾಂಗ್ರೆಸ್‌ ಬೆಂಬಲಿತ 10, ಜೆಡಿಎಸ್‌ 14 ಮತ್ತು 3 ಪಕ್ಷೇತರ ಸದಸ್ಯರಿದ್ದಾರೆ. ಕಾಂಗ್ರೆಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ವಾರ್ಡ್‌ ನಂ 2ರ ಸದಸ್ಯ ನರಸಯ್ಯ, ವಾರ್ಡ್ ನಂ 16ರ ಧನಲಕ್ಷ್ಮಿ , ವಾರ್ಡ್ ನಂ 4 ರ ವೆಂಕಟೇಶ್‌, ಜೆಡಿಎಸ್‌ ಅಭ್ಯರ್ಥಿ ಪರವಾಗಿ ಕೈ ಎತ್ತಿ ಜೆಡಿಎಸ್‌ ಗದ್ದುಗೆ ಏರಲು ಮೆಟ್ಟಿಲಾದರು.

ವಿಪ್: ಕಾಂಗ್ರೆಸ್‌ ಪಕ್ಷದ ನಗರ ಘಟಕದ ಅಧ್ಯಕ್ಷರು ಪಕ್ಷದ 10 ಸದಸ್ಯರಿಗೂ ವಿಪ್ ಜಾರಿಗೊಳಿಸಿ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ಸೂಚಿಸಿ ವಿಪ್‌ ಜಾರಿಗೊಳಿಸಿದ್ದರು. ಹೀಗಿದ್ದರೂ ಪಕ್ಷದ ಸೂಚನೆಗೆ ಕವಡೆ ಕಾಸಿನ ಗೌರವ ನೀಡದ ಸದಸ್ಯರು ಬಹಿರಂಗವಾಗಿ ಜೆಡಿಎಸ್‌ ಬೆಂಬಲಿಸಿದ್ದರು. ಕೈ ಹೆಣೆದ ಕಡೆ ಪ್ರಯತ್ನವೂ ವಿಫಲವಾಗಿದ್ದರಿಂದ ಚುನಾವಣೆ ಪ್ರಕ್ರಿಯೆಯಿಂದಲೇ ಕಾಂಗ್ರೆಸ್‌ ಉಳಿಯಿತು.

ನಗರಸಭೆ ಚುನಾವಣೆ 2019 ಮಾರ್ಚ್‌ನಲ್ಲಿ ನಡೆಯಲಿದ್ದು, ಉಳಿದ 6 ತಿಂಗಳ ಅವಧಿಗೆ ಪಕ್ಷದ ಆಂತರಿಕ ಒಪ್ಪಂದ ಮೇಲೆ ಅಧ್ಯಕ್ಷರಾಗಿದ್ದ ಎಂ.ಶಿವಕುಮಾರ್‌ ಶಾಸಕ ಎಚ್.ವಿಶ್ವನಾಥ್ ಅವರ ಸೂಚನೆಯಂತೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಸ್ಥಾನಕ್ಕೆ ಜೆಡಿಎಸ್‌ ಪಕ್ಷದ ಸತೀಶ್‌ಕುಮಾರ್‌ ಮತ್ತು ಎಚ್‌.ವೈ. ಮಹದೇವ್ ತೀವ್ರ ಪೈಪೋಟಿ ನಡೆಸಿದ್ದರು. ನಂತರ ಸಂಧಾನದಿಂದಾಗಿ ಮಹದೇವ್‌ ಒಬ್ಬರೇ ಕಣದಲ್ಲಿ ಉಳಿದಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !