ಸೋಮವಾರ, ಜನವರಿ 20, 2020
22 °C
ವಿಡಿಯೊ ಸುದ್ದಿ

ಮೈಸೂರಿನಲ್ಲಿ ಮಕರ ಸಂಕ್ರಾಂತಿ: ಸುಗ್ಗಿ ಹಬ್ಬದಲ್ಲಿ ಸಂಭ್ರಮಿಸಿದ ವಿದೇಶಿಯರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸುಗ್ಗಿ ಹಬ್ಬ ಎಂದೇ ಹೆಸರಾದ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ಇಲ್ಲಿನ ಕೋಟೆ ಆಂಜನೇಯಸ್ವಾಮಿ ದೇಗುಲದ ಆವರಣದಲ್ಲಿ ಬುಧವಾರ ಆಚರಿಸಲಾಯಿತು. ಇದರಲ್ಲಿ ವಿದೇಶಿಯರೂ ಭಾಗಿಯಾಗುವ ಮೂಲಕ ಹಬ್ಬದ ಸಂಭ್ರಮವನ್ನು ಇಮ್ಮಡಿಸಿದರು.

ರಾಮಚಂದ್ರಾಪುರಮಠದ ಭಾರತೀಯ ಗೋಪರಿವಾರ ಹಾಗೂ ಹನುಮಂತೋತ್ಸವ ಸಮಿತಿ ವತಿಯಿಂದ ಇಲ್ಲಿ ಭತ್ತ ಮತ್ತು ರಾಗಿಯ ಕಣವನ್ನು ಹಾಕಲಾಗಿತ್ತು. ಸಿಂಗರಿಸಿದ ಗೋವುಗಳನ್ನು ಕರೆ ತಂದು ವಿಶೇಷ ಪೂಜೆ ಸಲ್ಲಿಸಲಾಯಿತು. ಹಲವು ವಿದೇಶಿಯರೂ ಕಣಕ್ಕೆ ಪೂಜೆ ಸಲ್ಲಿಸಿದರು. ಗೋವುಗಳಿಗೆ ಕಬ್ಬು ಮತ್ತು ಬೆಲ್ಲವನ್ನು ತಿನ್ನಿಸುವ ಮೂಲಕ ಸಂಭ್ರಮಿಸಿದರು.

ಕಾರ್ಯಕರ್ತರು ಎಲ್ಲರಿಗೂ ಎಳ್ಳು ಮತ್ತು ಬೆಲ್ಲವನ್ನು ವಿತರಿಸಿದರು. ವಿನೂತನ ಎನಿಸುವ ಈ ಕಾರ್ಯಕ್ರಮವನ್ನು ನೂರಾರು ಮಂದಿ ವೀಕ್ಷಿಸಿದರು.

ಈ ವೇಳೆ ಮಾತನಾಡಿದ ಭಾರತೀಯ ಗೋಪರಿವಾರದ ಜಿಲ್ಲಾ ಸಂಯೋಜಕ ರಾಕೇಶ್‌ಭಟ್, ‘ಸಂಕ್ರಾಂತಿ ಎನ್ನುವುದು ಸುಗ್ಗಿ ಹಬ್ಬ. ಕಣ ಮತ್ತು ಗೋವುಗಳ ಪೂಜೆ ಮಾಡುವ ಮೂಲಕ ಪ್ರಕೃತಿಗೆ ಗೌರವ ಸಲ್ಲಿಸುವುದು ಹಿಂದಿನ ಆಚರಣೆ. ಈ ಆಚರಣೆ ಇತ್ತೀಚಿನ ದಿನಗಳಲ್ಲಿ ಅಳಿದು ಹೋಗುತ್ತಿದೆ. ಇದನ್ನು ಉಳಿಸುವ ಸಲುವಾಗಿ ಸಾಂಪ್ರದಾಯಿಕವಾಗಿ ಹಬ್ಬವನ್ನು ಆಚರಿಸಲಾಯಿತು’ ಎಂದು ತಿಳಿಸಿದರು.

ಈ ವೇಳೆ ಪ್ರತಿಕ್ರಿಯಿಸಿದ ಬ್ರಿಟನ್ ಮಹಿಳೆ ಮೇರಿ, ‘ಈ ಹಬ್ಬ ಸಂತಸ ತಂದಿತು. ವಿಶೇಷ ಎನಿಸಿತು’ ಎಂದು ತಿಳಿಸಿದರು.

ಇದನ್ನೂ ಓದಿ: ಮಕರ ಸಂಕ್ರಾಂತಿ: ದ್ವಾದಶ ರಾಶಿಗಳ ಮೇಲೆ ಏನೇನು ಪರಿಣಾಮ?

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು