ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾಲಿರೈಡ್‌; ಮಂಜುನಾಥ್ ಜೈಲಿಗೆ

Last Updated 16 ಆಗಸ್ಟ್ 2019, 10:42 IST
ಅಕ್ಷರ ಗಾತ್ರ

ಮೈಸೂರು: ಬಾಲಕನ ಜಾಲಿರೈಡ್‌ನಿಂದ ಮಂಗಳವಾರ ಘಟಿಸಿದ ಸರಣಿ ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿ ಪ್ರಕರಣಕ್ಕೆ ಸಂಬಂಧಿಸಿದಂತೆ, ವಾಹನವನ್ನು ಬಾಡಿಗೆ ಕೊಡಿಸಿದ್ದ ಮಂಜುನಾಥ್ ಎಂಬಾತನನ್ನು ನಗರದ ಕೆ.ಆರ್.ಸಂಚಾರ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

ಬಾಲಕನಿಗೆ ಮಂಜುನಾಥ್ ತನ್ನ ಡ್ರೈವಿಂಗ್‌ ಲೈಸನ್ಸ್‌ ನೀಡಿ ಸ್ಕಾರ್ಪಿಯೋ ಜೀಪನ್ನು ಬಾಡಿಗೆಗೆ ಕೊಡಿಸಿದ್ದರು. ಬಾಲಕ ಜಾಲಿರೈಡ್‌ ನಡೆಸಿ, ಸರಣಿ ಅಪಘಾತ ಎಸಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನೂ ಬಂಧಿಸಲಾಗಿದೆ ಎಂದು ಕೆ.ಆರ್. ಸಂಚಾರ ಪೊಲೀಸರು ತಿಳಿಸಿದರು.

ಹುಕ್ಕಾ ಬಾರ್ ಮೇಲೆ ದಾಳಿ

ಮೈಸೂರು ನಗರದಲ್ಲಿರುವ ಅನಧಿಕೃತ ಹುಕ್ಕಾ ಬಾರ್‌ಗಳ ಮೇಲೆ ಸಿಸಿಬಿ ಪೊಲೀಸರು ದಾಳಿ ಮುಂದುರೆಸಿದ್ದಾರೆ.

ವಿ.ವಿ. ಮೊಹಲ್ಲಾದ 5ನೇ ಮೇನ್‍ನಲ್ಲಿರುವ ‘ಹೌಸ್ ಆಫ್ ಪಾಟ್ಸ್ ರೆಸ್ಟೋ ಕೆಫೆ’ ಮೇಲೆ ದಾಳಿ ಮಾಡಿದ ಪೊಲೀಸರು ಪರಿಶೀಲನೆ ನಡೆಸಿದಾಗ, ಕೋಟ್ಪಾ ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗಿ ಅಪ್ರಾಪ್ತರಿಗೆ ಮತ್ತು ಪ್ರಾಪ್ತರಿಗೆ ಹುಕ್ಕಾ ಮತ್ತು ಸಿಗರೇಟ್ ಸೇವನೆಗೆ ಅವಕಾಶ ಮಾಡಿಕೊಟ್ಟಿದ್ದು ಗೋಚರಿಸಿದೆ.

ಈ ಸಂಬಂಧ ಕೆಫೆಯ ಮಾಲೀಕ ಹರೀಶ್ ವಿರುದ್ಧ ಕೋಟ್ಪಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ₹ 20,200 ದಂಡ ವಿಧಿಸಿ, ಪರಿಕರಗಳನ್ನು ಜಪ್ತಿ ಮಾಡಿ, ಹುಕ್ಕಾ ಬಾರ್ ಮುಚ್ಚಿಸಲಾಗಿದೆ ಎಂದು ಸಿಸಿಬಿ ಪೊಲೀಸ್ ಪ್ರಕಟಣೆ ತಿಳಿಸಿದೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT