ಮೈಸೂರು: ಸೌಹಾರ್ದಕ್ಕೆ ಸಾಕ್ಷಿಯಾದ ಮದುವೆ

ಮೈಸೂರು: ನಗರದಲ್ಲಿ ಶುಕ್ರವಾರ ಎಐಡಿಎಸ್‌ಓ ಜಿಲ್ಲಾ ಉಪಾಧ್ಯಕ್ಷೆ ಆಸಿಯಾ ಬೇಗಂ ಮತ್ತು ಎಐಡಿವೈಓ ಜಿಲ್ಲಾ ಉಪಾಧ್ಯಕ್ಷ ನಿರಂಜನ್ ಎಸ್.ಹಿರೇಮಠ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಕೋಮು ಸೌಹಾರ್ದಕ್ಕೆ ಸಾಕ್ಷಿಯಾದರು.
ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ಮಧ್ಯಾಹ್ನ ನೋಂದಣಿ ಮಾಡಿಕೊಂಡ ಈ ಇಬ್ಬರ ಮದುವೆಯ ಔತಣಕೂಟದಲ್ಲಿ ಪಾಲ್ಗೊಂಡ ವಿವಿಧ ಸಂಘಟನೆಗಳ ಮುಖಂಡರು, ‘ಸೌಹಾರ್ದ ಪರಂಪರೆ ಮುಂದುವರಿಯಲಿ’ ಎಂದು ಶುಭ ಹಾರೈಸಿದರು.
‘ಕೋಮು ಸಾಮರಸ್ಯಕ್ಕೆ ಹಲವು ಅಡೆತಡೆಗಳು ಎದುರಾಗುತ್ತಿರುವ ಹೊತ್ತಿನಲ್ಲಿ ನಡೆದಿರುವ ಮದುವೆ ಕರ್ನಾಟಕದ ಮಟ್ಟಿಗೆ ಪ್ರಮುಖ ಘಟನೆ. ಸಾಮಾಜಿಕ ಸಾಮರಸ್ಯ ಮತ್ತು ದಾಂಪತ್ಯ ಸಾಮರಸ್ಯಕ್ಕೆ ದಂಪತಿಯು ಮಾದರಿಯಾಗಲಿ. ಅವರಿಗೆ ಎಲ್ಲರ ಬೆಂಬಲ ದೊರಕಲಿ’ ಎಂದು ಕನ್ನಡ ಪರ ಹೋರಾಟಗಾರ ಪ.ಮಲ್ಲೇಶ್, ಎಐಯುಟಿಯುಸಿ ಮುಖಂಡ ಶೇಷಾದ್ರಿ, ಲೇಖಕಿ ಲತಾ, ರೈತ ಸಂಘದ ಮುಖಂಡ ಹೊಸಕೋಟೆ ಬಸವರಾಜ್ ಪ್ರತಿಪಾದಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.