ಮಂಗಳವಾರ, ಅಕ್ಟೋಬರ್ 4, 2022
26 °C
ದಸರಾಗೆ ಕೆಲವೇ ದಿನ ಬಾಕಿ: ರಸ್ತೆ ಗುಂಡಿಗಳ ಮುಚ್ಚಲು ಶಿವಕುಮಾರ್‌ ಸೂಚನೆ

ದಸರಾಗೆ ಕೆಲವೇ ದಿನ ಬಾಕಿ– ಹೊಸ ಮೇಯರ್ ನಗರ ಸಂಚಾರ, ದೂರಿನ ಸುರಿಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಒಳಚರಂಡಿ ನೀರು ರಸ್ತೆಗೆ ಹರಿದು ಬರುತ್ತಿದೆ... ರಸ್ತೆಗಳಿಗೆ ಡಾಂಬರು ಹಾಕಿಸದೇ ಮಳೆಗಾಲದಲ್ಲಿ ಕೆಸರುಮಯವಾಗುತ್ತಿದೆ... ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸು ತ್ತಿವೆ... 

ನಗರದ ವಿವಿಧೆಡೆ ಮಂಗಳವಾರ ಮೊದಲ ನಗರ ಸಂಚಾರ ನಡೆ ಸಿದ ಮೇಯರ್‌ ಶಿವಕುಮಾರ್‌ಗೆ ಸ್ಥಳೀಯರಿಂದ ತೂರಿಬಂದ ಪ್ರಶ್ನೆಗಳಿವು. 

ಬೆಂಗಳೂರು ರಸ್ತೆಯ ಫೈವ್‌ಲೈಟ್‌ ವೃತ್ತದಿಂದ ಮೊದಲ ‘ನಗರ ಪರಿ ಶೀಲನಾ ಯಾತ್ರೆ’ ಆರಂಭಿಸಿದ ‌ಶಿವ ಕುಮಾರ್‌, ಎಫ್‌ಟಿಎಸ್‌ ವೃತ್ತ, ಸಬ್‌ ಅರ್ಬನ್‌ ಬಸ್‌ನಿಲ್ದಾಣ, ಛತ್ರಿ ಮರ, ಸಂಗಮ್‌ ಟಾಕೀಸ್‌ ರಸ್ತೆ, ಗಾಂಧಿಚೌಕ, ಪುರಭವನ, ಸಿದ್ಧಪ್ಪ ವೃತ್ತ, ನಂಜುಮಳಿಗೆ, ಅಶೋಕ ವೃತ್ತದವರೆಗೂ ಸಾಗಿ ಜನರ ಸಮಸ್ಯೆಗಳನ್ನು ಆಲಿಸಿದರು. 

ರಸ್ತೆ ಡಾಂಬರು, ಸ್ವಚ್ಛತೆ, ಒಳ ಚರಂಡಿ ಸಮಸ್ಯೆಗಳ ಬಗ್ಗೆ ಜನರಿಂದ ದೂರು ಬಂದವು. ಕೂಡಲೇ ಪರಿಹರಿಸು ವಂತೆ ವಾಣಿವಿಲಾಸ ನೀರು ಸರಬರಾಜು ಮಂಡಳಿ, ಪಾಲಿಕೆ ಅಧಿಕಾರಿಗಳಿಗೆ ಮೇಯರ್‌ ಸೂಚನೆ ನೀಡಿದರು.  

‘ಗಾಂಧಿ ಚೌಕದಲ್ಲಿ ಪಾದ ಚಾರಿ ಮಾರ್ಗದಲ್ಲಿ ಬೀದಿ ಬದಿ ವ್ಯಾಪಾರಿಗಳಿಂದ ಜನ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಪಾದಚಾರಿ ಮಾರ್ಗ ನಿರ್ಮಾ ಣಕ್ಕೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿ ದ್ದೇನೆ. ಚಾಮರಾಜ ಜೋಡಿ ರಸ್ತೆ, ಝಾನ್ಸಿರಾಣಿ ಲಕ್ಷ್ಮಿಬಾಯಿ ರಸ್ತೆ, ಸಯ್ಯಾಜಿರಾವ್ ರಸ್ತೆ ಹೊರತುಪಡಿಸಿ ಎಲ್ಲ ರಸ್ತೆಗಳು ಗುಂಡಿ ಬಿದ್ದಿವೆ. ಕೂಡಲೇ ಡಾಂಬರು ಆಗಬೇಕು’ ಎಂದು ಶಿವಕುಮಾರ್‌ ಹೇಳಿದರು. 

‘ನಾಡಹಬ್ಬ ದಸರೆ ಆರಂಭಕ್ಕೆ ಕೆಲವೇ ದಿನಗಳಿವೆ. ಜನರ ಸಮಸ್ಯೆ ಪರಿಹರಿಸಲು ‍ಪರಿಶೀಲನೆ ಕೈಗೊಂಡಿ ದ್ದೇನೆ. ಮೈಸೂರು ಸ್ವಚ್ಛ ನಗರ, ಪಾರಂಪರಿಕ ನಗರವೆಂಬ ಶ್ರೇಯಕ್ಕೆ ಧಕ್ಕೆ ಬಾರದಂತೆ ಕ್ರಮ ಕೈಗೊಳ್ಳಲು ಪಾಲಿಕೆ ಬದ್ಧವಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ‌’ ಎಂದರು. 

‘ಶಾಸಕ ಎಲ್‌.ನಾಗೇಂದ್ರ ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನ ತಂದಿದ್ದಾರೆ. ಕಾಮಗಾರಿಗಳ ಟೆಂಡರ್‌ ಪೂರ್ಣವಾಗಿದ್ದು, ಮಳೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ದಸರಾ ವೇಳೆಗೆ ಗುಂಡಿ ಮುಚ್ಚಲು ತುರ್ತು ಕ್ರಮವಹಿಸಲು ತಿಳಿಸಲಾಗಿದೆ. ಯುಜಿಡಿ ಕಾಮಗಾರಿ ನಡೆದ ನಂತರವೇ ರಸ್ತೆ ಅಭಿವೃದ್ಧಿ ನಡೆಯ ಬೇಕು. ಪುರಭವನ ಪಾರ್ಕಿಂಗ್‌ನಲ್ಲಿ 200 ವಾಹನ ನಿಲುಗಡೆಗೆ ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು. 

‘ಸಬ್‌ ಅರ್ಬನ್‌ ಬಸ್‌ ನಿಲ್ದಾಣದ ಹಿಂಭಾಗದಲ್ಲಿ ಒಳಚರಂಡಿ ಸಮಸ್ಯೆ ಯಿದ್ದು, ರಸ್ತೆ ಮೇಲೆಯೇ ಚರಂಡಿ ನೀರು ಹರಿಯುತ್ತಿದೆ. ಯುಜಿಡಿ ಲೇನ್‌ ಸಂಪರ್ಕ ಕಲ್ಪಿಸದವರಿಗೆ ನೋಟಿಸ್‌ ನೀಡಿ ದಂಡ ವಸೂಲು ಮಾಡಲಾಗುವುದು’ ಎಂದರು. 

 ಪಾಲಿಕೆ ಸದಸ್ಯರಾದ ಎಂ.ಸತೀಶ್, ಎಂ.ಬಿ.ನಾಗರಾಜ್, ಎಂಜಿನಿಯರ್‌ ಗಳಾದ ಸಿಂಧು, ಮಂಜುನಾಥ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು