ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಗಾಭ್ಯಾಸಕ್ಕೆ ಪಾಲಿಕೆ ಸಿಬ್ಬಂದಿ–ಸದಸ್ಯರ ಗೈರು..!

Last Updated 19 ಜೂನ್ 2019, 15:42 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದಲ್ಲಿ ‘ಯೋಗ ನಗರಿ’ ಎಂಬ ಗರಿಯನ್ನು ತನ್ನ ಮುಡಿಗೇರಿಸಿಕೊಳ್ಳುವ ತವಕದಲ್ಲಿರುವ ಅರಮನೆ ನಗರಿ ಮೈಸೂರು ಜೂನ್‌ 21ರ ವಿಶ್ವ ಯೋಗ ದಿನಕ್ಕೆ ಸಜ್ಜಾಗಿದೆ.

ಇದಕ್ಕೆ ಪೂರ್ವಭಾವಿಯಾಗಿ ನಡೆದ ಹಲವು ತಾಲೀಮುಗಳಲ್ಲಿ ಸಹಸ್ರ, ಸಹಸ್ರ ಸಂಖ್ಯೆಯ ಜನರು ಭಾಗಿಯಾಗಿ ಯೋಗದ ವಿವಿಧ ಆಸನಗಳ ಪ್ರದರ್ಶನ ನೀಡಿದ್ದರು.

ಮಹಾನಗರ ಪಾಲಿಕೆ ಆಡಳಿತ ಬುಧವಾರ ನಸುಕಿನಲ್ಲಿ ಆಯೋಜಿಸಿದ್ದ ಯೋಗಾಭ್ಯಾಸದ ಪೂರ್ವಭಾವಿ ತಾಲೀಮಿಗೆ ಪಾಲಿಕೆಯ ಬಹುತೇಕ ಸದಸ್ಯರು, ಸಿಬ್ಬಂದಿಯೇ ಗೈರಾಗಿದ್ದು, ಅಭಾಸದ ಜತೆಗೆ ಯೋಗ ಪ್ರಿಯರ ಕಟು ಟೀಕೆಗೆ ಗುರಿಯಾಗಿದೆ.

ಬೆಳಿಗ್ಗೆ 6 ಗಂಟೆಗೆ ಪೂರ್ವಾಭ್ಯಾಸ ನಿಗದಿಯಾಗಿತ್ತು. ದೀಪ ಬೆಳಗಿಸುವ ಮೂಲಕ ಮೇಯರ್ ಪುಷ್ಪಲತಾ ಜಗನ್ನಾಥ್‌ ತಾಲೀಮಿಗೆ ಚಾಲನೆ ನೀಡಿದ್ದು 6.35ಕ್ಕೆ. ಮೂರು ಬಾರಿಯ ಶಂಖನಾದದೊಂದಿಗೆ ಯೋಗಭ್ಯಾಸ ಆರಂಭಗೊಂಡಿತು.

ಉಪ ಮೇಯರ್ ಶಫಿ ಅಹಮದ್‌, ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್‌ ಸೇರಿದಂತೆ ಬೆರಳೆಣಿಕೆಯ ಸದಸ್ಯರು, ಆಯುಕ್ತೆ ಶಿಲ್ಪಾನಾಗ್‌ ಸೇರಿದಂತೆ ಕೆಲವೇ ಅಧಿಕಾರಿಗಳು, ನಾಗರಿಕರು ಸೇರಿ ಒಟ್ಟು 29 ಮಂದಿ ಜಗನ್ಮೋಹನ ಅರಮನೆ ಮುಂಭಾಗದ ಆವರಣದಲ್ಲಿ ಯೋಗದ ತಾಲೀಮು ನಡೆಸಿದರು.

ಪ್ರಾರ್ಥನೆಯಿಂದ ಆರಂಭಗೊಂಡ ತಾಲೀಮು, ಯೋಗಾಭ್ಯಾಸಕ್ಕೆ ಚಾಲನ ಕ್ರಿಯೆ, 19 ಯೋಗಾಸನಗಳ ಪಟ್ಟು, ಪ್ರಾಣಾಯಾಮ, ಧ್ಯಾನ, ಸಂಕಲ್ಪದೊಂದಿಗೆ ಪೂರ್ಣಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT