ಮಂಗಳವಾರ, ಆಗಸ್ಟ್ 20, 2019
27 °C
ಬೆಂಗಳೂರು–ಮೈಸೂರು ಪ್ರಯಾಣ ದರ ₹ 30

ವಾರದ ಆರು ದಿನವೂ ಮೆಮೊ ರೈಲು ಸಂಚಾರ

Published:
Updated:

ಮೈಸೂರು: ಬೆಂಗಳೂರು–ಮೈಸೂರು ನಡುವೆ ವಾರದಲ್ಲಿ ನಾಲ್ಕು ದಿನ ಸಂಚರಿಸುತ್ತಿರುವ ಮೆಮೊ ರೈಲು ಜುಲೈ 27ರಿಂದ, ಭಾನುವಾರ ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲೂ ಸಂಚರಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಮೆಮೊ ರೈಲು ಸಂಚಾರದ ವೇಳಾಪಟ್ಟಿಯಲ್ಲೂ ಬದಲಾವಣೆಯಾಗಿದೆ. ಇದರ ಜತೆಗೆ ಬೆಂಗಳೂರು–ಮೈಸೂರು ನಡುವಿನ ಪ್ರಯಾಣ ದರ ₹ 30. ಇದು ಕೂಲಿ ಕಾರ್ಮಿಕರು, ಬಡವರು, ಮಧ್ಯಮ ವರ್ಗದ ಜನರ ಪ್ರಯಾಣಕ್ಕೆ ತುಂಬಾ ಅನುಕೂಲಕಾರಿಯಾಗಲಿದೆ ಎನ್ನಲಾಗಿದೆ.

ಸಂಜೆ 5.20ಕ್ಕೆ ಬೆಂಗಳೂರು ಬಿಡುವ ಮೆಮೊ ರೈಲು ರಾತ್ರಿ 8 ಗಂಟೆಗೆ ಮೈಸೂರು ತಲುಪಲಿದೆ. 8.30ಕ್ಕೆ ಇಲ್ಲಿಂದ ಹೊರಡುವ ರೈಲು 11.25ಕ್ಕೆ ಬೆಂಗಳೂರು ತಲುಪಲಿದೆ ಎಂದು ರೈಲ್ವೆ ಪ್ರಕಟಣೆ ತಿಳಿಸಿದೆ.

ಮೆಮೊ ರೈಲು ಸಂಚಾರದ ಬದಲಾವಣೆ ಬಗ್ಗೆ ಸಂಸದ ಪ್ರತಾಪ್ ಸಿಂಹ ಸಹ ಟ್ವೀಟ್‌ ಮಾಡಿದ್ದಾರೆ.

Post Comments (+)