ಶನಿವಾರ, ನವೆಂಬರ್ 28, 2020
26 °C

ಸಚಿವ ಸ್ಥಾನ –ಏನಾಗುತ್ತೋ ನೋಡೋಣ: ಎಚ್‌.ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಸಂಪುಟದಲ್ಲಿ ನನಗೂ ಸ್ಥಾನ ನೀಡಲು ಅವಕಾಶವಿದೆ. ಸ್ಥಾನ ಕೊಡುವ ಬಯಕೆಯೂ ಅವರಿಗಿದೆ. ಏನಾಗುತ್ತೆ ನೋಡೋಣ’ ಎಂದು ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್ ಹೇಳಿದರು.

‘ಸಂಪುಟ ಪುನಾರಚನೆಯೋ, ವಿಸ್ತರಣೆಯೋ, ಅದು ಯಾವಾಗ ಆಗುತ್ತದೋ ಎಂಬುದು ಅಮಿತ್‌ ಶಾ, ಮೋದಿ ಮತ್ತು ಆ ದೇವರಿಗೆ ಮಾತ್ರ ಗೊತ್ತು' ಎಂದು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪರಿಪೂರ್ಣ ಸಂಪುಟ ರಚನೆಯಾಗಬೇಕು. ಜನರು ಮೆಚ್ಚುವಂತಹ ಮಂತ್ರಿ ಮಂಡಲ ಬೇಕು. ಆ ಮಂತ್ರಿ ಮಂಡಲ ಮತ್ತು ಪಕ್ಷದ ರಾಜ್ಯ ಸಮಿತಿಯು ಜತೆಯಾಗಿ ಕೆಲಸ ಮಾಡಬೇಕು ಎಂದರು.

17 ಮಂದಿ ಪಕ್ಷಾಂತರಿ ಶಾಸಕರು ಬಿಜೆಪಿ ಪಕ್ಷ ಕಟ್ಟಿಲ್ಲ ಎಂಬ ಕೇಂದ್ರ ಸಚಿವ ಸದಾನಂದಗೌಡ ಹೇಳಿಕೆಗೆ ಪ್ರತಿಕ್ರಿಯಿಸಿ, ‘ರಾಜಕೀಯದ ಲೆಕ್ಕಾಚಾರ ಬೇರೆಯದೇ ಆಗಿರುತ್ತದೆ. ರಾಜಕೀಯ ಲೆಕ್ಕಾಚಾರದಲ್ಲಿ 51 ದೊಡ್ಡದೇ ಹೊರತು, 49 ದೊಡ್ಡದಲ್ಲ. ಅವರು ತಪ್ಪಿ ಮಾತನಾಡುತ್ತಾ ಇದ್ದಾರೆ ಎಂಬುದು ನನ್ನ ಅನಿಸಿಕೆ’ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು