ಗುರುವಾರ , ಮಾರ್ಚ್ 23, 2023
30 °C

ಟೀಕಿಸುವವರು ಬಿಎಸ್‌ವೈ ಕಾಲಿನ ದೂಳಿಗೂ ಸಮನಲ್ಲ: ಸೋಮಶೇಖರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ಟೀಕೆ ಮಾಡುವವರು ಅವರ ಕಾಲಿನ ದೂಳಿಗೂ ಸಮನಲ್ಲ’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌, ನಾಯಕತ್ವ ಬದಲಾವಣೆ ಬಯಸಿರುವ ಸ್ವಪಕ್ಷೀಯ ಶಾಸಕರ ವಿರುದ್ಧವೇ ಕಿಡಿಕಾರಿದರು.

ಮೈಸೂರಿನ ಸುತ್ತೂರು ಮಠದಲ್ಲಿ ಸೋಮವಾರ ಮಾಧ್ಯಮದವರ ಜತೆ ಮಾತನಾಡಿ, ‘ಯಡಿಯೂರಪ್ಪ ಹುಟ್ಟು ಹೋರಾಟಗಾರ. ಅವರ ವಿರುದ್ಧ ಒಂದೆರಡು ಸಲ ಏನಾದರೂ ಟೀಕೆ ಮಾಡಬಹುದು. ಪ್ರತಿದಿನವೂ ಮಾಧ್ಯಮಗಳ ಮುಂದೆ ನಿಂತು ಅವರ ವಿರುದ್ಧ ಮಾತನಾಡುವುದೆಂದರೆ ಏನಿದರ ಅರ್ಥ? ಸ್ವಲ್ಪನಾದರೂ ಕಾಮನ್‌ಸೆನ್ಸ್‌ ಇರಬೇಕು. ಮುಖ್ಯಮಂತ್ರಿ ವಿರುದ್ಧ ಹಾದಿ ಬೀದಿಯಲ್ಲಿ ಮಾತನಾಡುವುದು ಸರಿಯಲ್ಲ. ಅಸಮಾಧಾನ ಇದ್ದರೆ ಪಕ್ಷದ ಸಭೆಯಲ್ಲಿ ಮಾತನಾಡಲಿ’ ಎಂದು ತಿರುಗೇಟು ನೀಡಿದರು.

ಇದನ್ನೂ ಓದಿ: 

‘ಕೆಲವು ಸ್ವಯಂ ಘೋಷಿತ ನಾಯಕರು ‘ನಾವೇ ಸರ್ಕಾರ ತಂದೆವು, ನಮ್ಮಿಂದಾಗಿಯೇ ಸರ್ಕಾರ ರಚನೆಯಾಗಿದೆ’ ಎಂದು ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರು 104 ಸ್ಥಾನಗಳನ್ನು ಗೆದ್ದು ತರದೇ ಇದ್ದಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುತ್ತಿತ್ತಾ? ನಾವು ಇವರ ಯಾರನ್ನೂ ನಂಬಿಕೊಂಡು ಬಂದಿಲ್ಲ. ಯಡಿಯೂರಪ್ಪ ನಾಯಕತ್ವದಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು