ಪ್ರಧಾನಿ ಮೋದಿ ಕಾರಿಗೆ ಅಡ್ಡ ಬಂದಿದ್ದ ಯುವಕ ವಶಕ್ಕೆ

ಮಂಗಳವಾರ, ಏಪ್ರಿಲ್ 23, 2019
31 °C

ಪ್ರಧಾನಿ ಮೋದಿ ಕಾರಿಗೆ ಅಡ್ಡ ಬಂದಿದ್ದ ಯುವಕ ವಶಕ್ಕೆ

Published:
Updated:

ಮೈಸೂರು: ಕಳೆದ ಬಾರಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಗರಕ್ಕೆ ಭೇಟಿ ನೀಡಿದ್ದ ವೇಳೆ ಕಾರಿಗೆ ಅಡ್ಡವಾಗಿ ಬಂದಿದ್ದ ಯುವಕನನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಮೈಸೂರಿನಲ್ಲಿ ಇಂದು ಪ್ರಧಾನಿ ಮೋದಿ ಚುನಾವಣಾ ಪ್ರಚಾರ

ಮಹಾರಾಜ ಕಾಲೇಜು ಮೈದಾನದಲ್ಲಿ 2016ರ ಜನವರಿಯಲ್ಲಿ ನಡೆದ ಸುತ್ತೂರು ಕ್ಷೇತ್ರದ ಶಿವರಾತ್ರಿ ರಾಜೇಂದ್ರ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ಮುಗಿಸಿಕೊಂಡು ಮೋದಿ ಅವರು ವಾಪಸ್ ತೆರಳುವಾಗ ವಿನಯ್ ಎಂಬಾತ ರಕ್ಷಣಾ ವ್ಯವಸ್ಥೆ ಬೇಧಿಸಿ ಕಾರಿಗೆ ಅಡ್ಡವಾಗಿ ಬಂದಿದ್ದ. ಇದರಿಂದ ಸುಮಾರು 20 ಸೆಕೆಂಡ್‌ಗಳಷ್ಟು ಕಾಲ ಪ್ರಧಾನಿಯವರ ಸಂಚಾರದಲ್ಲಿ ವಿಳಂಬವಾಗಿತ್ತು. ಸದ್ಯ, ಈತನನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 18

  Happy
 • 11

  Amused
 • 0

  Sad
 • 1

  Frustrated
 • 19

  Angry

Comments:

0 comments

Write the first review for this !