ಮಂಗಳವಾರ, ನವೆಂಬರ್ 12, 2019
28 °C

ಕೈಗೊಡಲಿಯಿಂದ ವೃದ್ಧನ ಭೀಕರ ಕೊಲೆ: ರುಂಡದೊಂದಿಗೆ ಪೊಲೀಸ್ ಠಾಣೆಗೆ ಬಂದ ಆರೋಪಿಗಳು

Published:
Updated:

ಮೈಸೂರು: ತಿ.ನರಸೀಪುರ ತಾಲ್ಲೂಕಿನ ಚಾಮನಹಳ್ಳಿಯಲ್ಲಿ ಶನಿವಾರ ತಡರಾತ್ರಿ ವೃದ್ಧರೊಬ್ಬರನ್ನು ಕ್ಷುಲ್ಲಕ ಕಾರಣಕ್ಕೆ ಕೈಗೊಡಲಿಯಿಂದ ಭೀಕರವಾಗಿ ಕೊಲೆಗೈಯಲಾಗಿದೆ.

ಕೆಂಪೇಗೌಡ (60) ಎಂಬುವರೇ ಕೊಲೆಯಾದವರು. ಚಾಮನಹಳ್ಳಿಯ ಚೇತನ್‌, ಬನ್ನೂರಿನ ಮಧು ಎಂಬಾತರೇ ಕೊಲೆಗೈದವರು.

ಕೆಂಪೇಗೌಡ ಹಾಗೂ ಚೇತನ್‌ ಸಂಬಂಧಿಕರು. ಹಲವು ವರ್ಷಗಳಿಂದಲೂ ಇವರಿಬ್ಬರ ಕುಟುಂಬಗಳ ನಡುವೆ ನಿವೇಶನಕ್ಕೆ ಸಂಬಂಧಿಸಿದಂತೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಶನಿವಾರ ರಾತ್ರಿಯೂ ಕೆಂಪೇಗೌಡ ತಕರಾರು ತೆಗೆದಿದ್ದಾರೆ.

ಇದರಿಂದ ಸಿಟ್ಟಿಗೆದ್ದ ಚೇತನ್‌, ತನ್ನ ಗೆಳೆಯ ಮಧು ಜತೆ ಮದ್ಯ ಸೇವಿಸಿ ಬಂದು, ಆಕ್ರೋಶದಿಂದ ಕೈಗೊಡಲಿಯಿಂದ ಕೆಂಪೇಗೌಡನ ರುಂಡ ಚೆಂಡಾಡಿ, ಮುಂಡದಿಂದ ಬೇರ್ಪಡಿಸಿಕೊಂಡು ತಿ.ನರಸೀಪುರ ಪೊಲೀಸ್ ಠಾಣೆಗೆ ಕೈಯಲ್ಲಿ ಹಿಡಿದು ಬರುವ ಸಂದರ್ಭ, ಆರೋಪಿಗಳಿಬ್ಬರನ್ನು ಬಂಧಿಸಿ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದರು.

ಪ್ರತಿಕ್ರಿಯಿಸಿ (+)