ಬುಧವಾರ, ಆಗಸ್ಟ್ 21, 2019
25 °C

5 ರೋಗಿಗಳ ಬಾಳಿಗೆ ಬೆಳಕಾದ ಯುವಕ

Published:
Updated:

ಮೈಸೂರು: ರಸ್ತೆ ಅಪಘಾತದಲ್ಲಿ ಮಿದುಳು ನಿಷ್ಕ್ರಿಯಗೊಂಡಿದ್ದ ನಗರದ ನಿವಾಸಿ ಧರ್ಮ (29) ಎಂಬುವರ ಅಂಗಾಂಗಳನ್ನು 5 ಮಂದಿ ರೋಗಿಗಳಿಗೆ ದಾನ ಮಾಡಲಾಯಿತು.

ಹೃದಯವನ್ನು ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ, ಒಂದು ಮೂತ್ರಪಿಂಡವನ್ನು ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ, ಶ್ವಾಸಕೋಶವನ್ನು ಕೆಂಗೇರಿಯ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ, ಮತ್ತೊಂದು ಮೂತ್ರಪಿಂಡ ಹಾಗೂ ಕಾರ್ನಿಯಾವನ್ನು ಮೈಸೂರಿನ ಜೆಎಸ್ಎಸ್ ಆಸ್ಪತ್ರೆಗೆ ದಾನ ಮಾಡಲಾಯಿತು.

ಅಂಗಾಂಗಗಳನ್ನು ಭಾನುವಾರ ಬೆಳಿಗ್ಗೆ ಶೂನ್ಯ ಸಂಚಾರ ವ್ಯವಸ್ಥೆಯಲ್ಲಿ ಸಾಗಿಸಲಾಯಿತು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

Post Comments (+)