ಮೈಸೂರು ಮಹಾನಗರ ಪಾಲಿಕೆ–ಮತ್ತೆ ಅತಂತ್ರ

7

ಮೈಸೂರು ಮಹಾನಗರ ಪಾಲಿಕೆ–ಮತ್ತೆ ಅತಂತ್ರ

Published:
Updated:

ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಮತ್ತೆ ಅತಂತ್ರ ಪರಿಸ್ಥಿತಿ ಎದುರಾಗಿದೆ. ಯಾವುದೇ ಪಕ್ಷಕ್ಕೆ ಬಹುಮತ ಲಭಿಸಿಲ್ಲ.

ಸದ್ಯದ ಫಲಿತಾಂಶದ ಪ್ರಕಾರ 22 ಸ್ಥಾನ ಪಡೆದಿರುವ ಬಿಜೆಪಿ ಮುನ್ನಡೆಯಲ್ಲಿದೆ. ಕಾಂಗ್ರೆಸ್‌ 19 ಹಾಗೂ ಜೆಡಿಎಸ್‌ 18 ಸ್ಥಾನಗಳು ಪಡೆದಿವೆ. 1 ಬಿಎಸ್‌ಪಿ ಸೇರಿದಂತೆ ಇತರರು ಆರು ಸ್ಥಾನ ಗಳಿಸಿದ್ದಾರೆ. ಬಹುಮತಕ್ಕೆ 33 ಸ್ಥಾನ ಗಳಿಸಬೇಕು.

ಹಿಂದಿನ ಚುನಾವಣೆಯಲ್ಲಿ ಜೆಡಿಎಸ್‌ ಹಾಗೂ ಬಿಜೆಪಿ ಪಾಲಿಕೆಯ ಗದ್ದುಗೆ ಏರಿದ್ದವು. ಈ ಬಾರಿ ರಾಜ್ಯದಲ್ಲಿ ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿ ಸರ್ಕಾರ ಇರುವುದರಿಂದ ಮೈಸೂರು ಮಹಾನಗರ ಪಾಲಿಕೆಯಲ್ಲೂ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿಯುವ ಸಾಧ್ಯತೆ ಇದೆ.

56ನೇ ವಾರ್ಡ್‌ನಲ್ಲಿ ಬಿಎಸ್‌ಪಿಯಿಂದ ಸ್ಪರ್ಧಿಸಿದ್ದ ಅಂಗನವಾಡಿ ಕಾರ್ಯಕರ್ತೆ ಬೇಗಂ (ಪಲ್ಲವಿ) 4,108 ಮತಗಳಿಂದ ಗೆಲುವು ಸಾಧಿಸಿದ್ದಾರೆ.  ಎಸ್‌ಎಸ್‌ಎಲ್‌ಸಿ ಓದಿರುವ ಇವರು 27 ವರ್ಷಗಳಿಂದ ಮೈಸೂರು ತಾಲ್ಲೂಕಿನ ಜಟ್ಟಿಹುಂಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿದ್ದಾರೆ.

ಜೆಡಿಎಸ್‌ ಅಧ್ಯಕ್ಷರಿಗೆ ಮುಖಭಂಗ

ಪಾಲಿಕೆ ಚುನಾವಣೆಯಲ್ಲಿ ಜೆಡಿಎಸ್‌ ನಗರ ಘಟಕದ ಅಧ್ಯಕ್ಷ ಕೆ.ಟಿ.ಚೆಲುವೇಗೌಡ ಅವರ ವಿರುದ್ಧ ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಪೈಲ್ವಾನ್‌ ಶ್ರೀನಿವಾಸ್ ಜಯ ಗಳಿಸಿದ್ದಾರೆ. ಸೋತ ವಿಚಾರವನ್ನು ಕೇಳಿ ಚೆಲುವೇಗೌಡ ಆಘಾತಕ್ಕೆ ಒಳಗಾಗಿದ್ದಾರೆ. ಶ್ರೀನಿವಾಸ್‌ ಜೆಡಿಎಸ್‌ನ ಬಂಡಾಯ ನಾಯಕ ಕೆ.ಹರೀಶ್‌ ಗೌಡ ಬೆಂಬಲ ನೀಡಿದ್ದರು.

42ನೇ ವಾರ್ಡ್‌ನಿಂದ (ಕೆ.ಜಿ.ಕೊಪ್ಪಲು) ಸ್ಪರ್ಧಿಸಿದ್ದ ಪಕ್ಷೇತರ ಅಭ್ಯರ್ಥಿ ಎಂ.ಶಿವಕುಮಾರ್‌, ಬಿಜೆಪಿ ಅಭ್ಯರ್ಥಿ ಕೆ.ದೇವರಾಜು ಅವರ ವಿರುದ್ಧ 1446 ಮತಗಳನ್ನು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ, ಈ ವಾರ್ಡ್‌ನಲ್ಲಿ ಕೊನೆಯ ಕ್ಷಣದಲ್ಲಿ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು.

ಮೈಸೂರು ಮಹಾನಗರ ಪಾಲಿಕೆಯ 21ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಬಿಜೆಪಿಯ ಸಿ.ವೇದಾವತಿ 1,293 ಮತಗಳಿಂದ ಗೆಲುವು ಸಾಧಿಸಿದ್ದಾರೆ.

ವಿರೋಧ ಪಕ್ಷದಲ್ಲಿರಲು ಸೈ : ಪ್ರತಾಪ ಸಿಂಹ

‘ವಿರೋಧ ಪಕ್ಷದಲ್ಲಿ ಕೂರಲು ನಾವು ಸಿದ್ಧರಿದ್ದೇವೆ. ರಾಜ್ಯದಲ್ಲಿ ಜೆಡಿಎಸ್‌. ಕಾಂಗ್ರೆಸ್ ಮೈತ್ರಿ ಸರ್ಕಾರವಿದೆ. ಪಾಲಿಕೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಜೆಡಿಎಸ್ ಮೇಲೆ‌ ನಿಂತಿದೆ. ಈ ಹಿಂದೆಯೂ ಬಿಜೆಪಿ - ಜೆಡಿಎಸ್ ಮೈತ್ರಿ ಆಡಳಿತವೇ ಇಲ್ಲಿ ಇತ್ತು’  ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !