ಗುರುವಾರ , ಸೆಪ್ಟೆಂಬರ್ 19, 2019
24 °C

ಮೈಸೂರು: ಅರಮನೆ ತಲುಪಿದ ಗಜಪಡೆ

Published:
Updated:

ಮೈಸೂರು: ದಸರಾ ಮೆರವಣಿಗೆಯಲ್ಲಿ ಭಾಗಿಯಾಗುವ ಗಜಪಡೆ ಸೋಮವಾರ ಅರಮನೆ ಪ್ರವೇಶಿಸಿದೆ.

ಅರಣ್ಯ ಭವನದಿಂದ ರಸ್ತೆ ಮೂಲಕ ಅರಮನೆಯತ್ತ ದಸರಾ ಆನೆಗಳು ಹೆಜ್ಜೆ ಹಾಕಿದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಕುತೂಹದಿಂದ ಗಜಪಡೆಯನ್ನು ಕಣ್ತುಂಬಿಕೊಂಡರು.

ಈಗ ಮೊದಲ ಹಂತದಲ್ಲಿ ಆರು ಆನೆಗಳು ಅರಮನೆ ಆವರಣ ಪ್ರವೇಶಿಸಿವೆ. ಅರಮನೆ ಆವರಣಕ್ಕೆ ಬಂದ ಗಜಪಡೆಗೆ ಜಿಲ್ಲಾಡಳಿತ ಸ್ವಾಗತ ಕೋರಿದೆ. ಜಿಲ್ಲಾ ಉಸ್ತುವಾರಿ ವಿ.ಸೋಮಣ್ಣ ಉಪಸ್ಥಿತರಿದ್ದರು. 

Post Comments (+)