ಮೈಸೂರು: ಜಯಕ್ಕನ ಶವಕ್ಕೆ ಹೆಗಲು ಕೊಟ್ಟು ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಮರು
ಮೈಸೂರು: ಇಲ್ಲಿನ ಗೌಸಿಯಾನಗರ ಬಡಾವಣೆಯ ಫಾರಂ ಕಾಲೊನಿ ನಿವಾಸಿ ಜಯಕ್ಕ (60) ಎಂಬುವವರ ಅಂತ್ಯಸಂಸ್ಕಾರಕ್ಕೆ ಮುಸ್ಲಿಮರು ಶುಕ್ರವಾರ ಹೆಗಲು ಕೊಟ್ಟು ಕೋಮು ಸೌಹಾರ್ದ ಮೆರೆದರು.
ಮೃತದೇಹವನ್ನು ಹೆಗಲಿನಲ್ಲಿ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ಅವರೇ ಗುಂಡಿ ತೆಗೆದು ಹಿಂದೂ ಧರ್ಮದ ವಿಧಿವಿಧಾನಗಳ ಪ್ರಕಾರ ಅಂತ್ಯಸಂಸ್ಕಾರ ಮಾಡಿದರು. ಮಹಿಳೆ ವಾಸವಿದ್ದ 6ನೇ ಕ್ರಾಸ್ ಬೀದಿಯ ಎಲ್ಲ ಮುಸ್ಲಿಮರೂ ಪಾಲ್ಗೊಂಡಿದ್ದರು.
ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಈ ಭಾಗದ ಪಾಲಿಕೆ ಸದಸ್ಯೆ ಶಾಂತಕುಮಾರಿ, ‘ಎಲ್ಲಿಯೇ ಕೋಮು ಗಲಭೆಯಾದರೂ ಈ ಬೀದಿಯಲ್ಲಿ ಮಾತ್ರ ಶಾಂತಿ ನೆಲೆಸಿರುತ್ತದೆ. ಇಲ್ಲಿ ಕೆಲವೇ ಹಿಂದೂ ಕುಟುಂಬಗಳು ವಾಸವಿದ್ದು, ಉಳಿದವರೆಲ್ಲರೂ ಮುಸ್ಲಿಮರೇ. ಹಿಂದಿನಿಂದಲೂ ಎರಡೂ ಧರ್ಮದವರ ನಡುವೆ ಸಾಮರಸ್ಯವಿದೆ. ಯಾವುದೇ ಸಮಾರಂಭವಿದ್ದರೂ ಎಲ್ಲರೂ ಒಟ್ಟಾಗಿಯೇ ಆಚರಿಸುತ್ತಾರೆ’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.