ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಬಿರುಸಿನ ಮಳೆ: ತಗ್ಗು ಪ್ರದೇಶಗಳ ಮನೆಗಳಿಗೆ ನೀರು

Last Updated 16 ಮೇ 2022, 8:07 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಸೋಮವಾರ ನಸುಕಿನಿಂದಲೇ ಮಳೆ ಸುರಿಯುತ್ತಿದೆ‌. ಹಲವು ಬಡಾವಣೆಗಳಲ್ಲಿ ಬಿರುಸಿನಿಂದ ಸುರಿದಿರುವ ಮಳೆಗೆ ಮರಗಳು ಬುಡಮೇಲಾಗಿವೆ, ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿದೆ.

ಇಲ್ಲಿನ ಸಿದ್ದಾರ್ಥ‌ನಗರದ ಸನ್ಮಾರ್ಗ, ಗಾಯತ್ರಿಪುರಂನ ಪೆಟ್ರೋಲ್ ಬಂಕ್ ಹಾಗೂ ಜಯನಗರದ ಬೇಡರ ಕಣ್ಣಪ್ಪ ದೇಗುಲದ ಸಮೀಪ ಮರಗಳು ಧರೆಗುರುಳಿವೆ.

ಪಡುವಾರಹಳ್ಳಿ, ವಿಜಯಶ್ರೀಪುರ,ಆಲನಹಳ್ಳಿ ಹಾಗೂ ಜಲಪುರಿಗಳ ಕೆಲವು ಮನೆಗಳಿಗೆ ನೀರು ನುಗ್ಗಿದೆ‌.

ಮೈಸೂರಿನ ಸಿದ್ದಾರ್ಥ ನಗರದ ವಿನಯ ಮಾರ್ಗ 8 ನೇ ಕ್ರಾಸ್ ನಲ್ಲಿ ಉರುಳಿದ ಮರವನ್ನು ಪಾಲಿಕೆಯ ರಕ್ಷಣಾ ತಂಡ ಅಭಯ್ -3 ರ ಸಿಬ್ಬಂದಿ ತೆರವುಗೊಳಿಸುತ್ತಿದ್ದಾರೆ. ಮೈಸೂರಿನಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT