ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಗಿಗಳಿಲ್ಲದೆ ಭಣಗುಡುತ್ತಿರುವ ಕೆ.ಆರ್.ಆಸ್ಪತ್ರೆ

Last Updated 31 ಮಾರ್ಚ್ 2020, 8:40 IST
ಅಕ್ಷರ ಗಾತ್ರ

ಮೈಸೂರು: ಸದಾ ರೋಗಿಗಳಿಂದ ಗಿಜಿಗುಡುತ್ತಿದ್ದ ಕೆ.ಆರ್.ಆಸ್ಪತ್ರೆ ಮಂಗಳವಾರ ರೋಗಿಗಳಿಲ್ಲದೆ ಬಿಕೊ ಎನ್ನುತ್ತಿತ್ತು.

ಕೋವಿಡ್ -19 ಕಾಯಿಲೆಗೆ ಒಳಗಾದ ರೋಗಿಗಳ ಪೈಕಿ ಇಬ್ಬರಷ್ಟೆ ಇಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ. ಉಳಿದವರನ್ನು ಹೊಸ ಜಿಲ್ಲಾಸ್ಪತ್ರೆ ಕಟ್ಟಡದಲ್ಲಿ ದಾಖಲಿಸಲಾಗಿದೆ. ಸದ್ಯ ಕೆ.ಆರ್.ಆಸ್ಪತ್ರೆಯಲ್ಲಿ ಕೊರೊನಾ ಶಂಕಿತ ರೋಗಿಗಳಷ್ಟೆ ಬಂದು ಚಿಕಿತ್ಸೆ ಹಾಗೂ ಸಲಹೆ ಪಡೆದು ಹೋಗುತ್ತಿದ್ದಾರೆ.

ಕೊರೊನಾ ಸೋಂಕು ಹರಡಬಹುದು ಎಂಬ ಭಯದಿಂದ ಆಸ್ಪತ್ರೆಗೆ ಬೇರೆ ರೋಗಿಗಳು ಬರುತ್ತಿಲ್ಲ. ತುರ್ತು ಚಿಕಿತ್ಸೆ ಅಗತ್ಯ ಇದ್ದವರೂ ಸುಳಿಯುತ್ತಿಲ್ಲ.ಹೀಗಾಗಿ ಇಡೀ ಆಸ್ಪತ್ರೆ ಬಿಕೊ ಎನ್ನುತ್ತಿದೆ.

ಇಲ್ಲಿಗೆ ಬರುತ್ತಿದ್ದ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುವ ಸಿಬ್ಬಂದಿ ಶೇ 50ರಷ್ಟು ಸಿಬ್ಬಂದಿ ಬರುತ್ತಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ನಂಜಂಡಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT