29 ರಿಂದ ಮೈಸೂರು ರೇಸ್‌ ಆರಂಭ

7
18 ರೇಸ್‌ ದಿನಗಳಲ್ಲಿ 130 ರೇಸ್‌ಗಳ ಆಯೋಜನೆ

29 ರಿಂದ ಮೈಸೂರು ರೇಸ್‌ ಆರಂಭ

Published:
Updated:

ಮೈಸೂರು: ಪ್ರಸಕ್ತ ಋತುವಿನ ಮೈಸೂರು ರೇಸ್‌ ಆಗಸ್ಟ್‌ 29 ರಿಂದ ಅಕ್ಟೋಬರ್‌ ಕೊನೆಯವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಒಟ್ಟು 18 ರೇಸ್‌ ದಿನಗಳನ್ನು ಏರ್ಪಡಿಸಲಾಗಿದೆ ಎಂದು ಮೈಸೂರು ರೇಸ್‌ ಕ್ಲಬ್‌ ಅಧ್ಯಕ್ಷ ಜಿ.ವೆಂಕಟೇಶ್ ತಿಳಿಸಿದರು.

ಆ.22 ರಿಂದ ರೇಸ್‌ಗಳನ್ನು ನಡೆಸಲು ಉದ್ದೇಶಿಸಲಾಗಿತ್ತು. ಆದರೆ ಮಳೆಯಿಂದಾಗ ರೇಸ್‌ಕೋರ್ಸ್‌ಅನ್ನು ಸೂಕ್ತ ಸಮಯದಲ್ಲಿ ಸಜ್ಜುಗೊಳಿಸಲು ಆಗಿಲ್ಲ. ಆ.22 ಮತ್ತು 23ರ ರೇಸ್‌ ದಿನಗಳನ್ನು ರದ್ದುಪಡಿಸಲಾಗಿದೆ. ಈ ರೇಸ್‌ಗಳನ್ನು ಮುಂದಿನ ದಿನಗಳಲ್ಲಿ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರಿನ 21 ಮತ್ತು ಹೊರಗಿನ 40 ತರಬೇತುದಾರರು ಹಾಗೂ 100 ಜಾಕಿಗಳು ಭಾಗವಹಿಸುವ ಸಾಧ್ಯತೆಯಿದೆ. ಒಟ್ಟು 200 ಬೆಟ್ಟಿಂಗ್‌ ಕೇಂದ್ರಗಳನ್ನು ತೆರೆಯಲಾಗುವುದು ಎಂದು ಹೇಳಿದರು.‌

ಸ್ಥಳೀಯ ಕುದುರೆಗಳ ಜತೆ ಹೊರರಾಜ್ಯಗಳ ಸುಮಾರು 400 ಕುದುರೆಗಳು ರೇಸ್‌ನಲ್ಲಿ ಪಾಲ್ಗೊಳ್ಳಲಿವೆ. 18 ದಿನಗಳಲ್ಲಿ ಸುಮಾರು 130 ರೇಸ್‌ಗಳು ನಡೆಯಲಿವೆ. ಕಳೆದ ವರ್ಷ ₹ 5.96 ಕೋಟಿಗಳನ್ನು ಸ್ಟೇಕ್ಸ್‌ ರೂಪವಾಗಿ ನೀಡಲಾಗಿತ್ತು. ಈ ಬಾರಿ ₹ 5.84 ಕೋಟಿ ಮೀಸಲಿಡಲಾಗಿದೆ.

ಸಾರ್ವಜನಿಕರಿಗೆ ರೇಸ್‌ ನೋಡಲು ಅನುಕೂಲವಾಗುವಂತೆ ರೇಸ್‌ ಕೋರ್ಸ್‌ ಬಳಿ 18X30 ಅಳತೆಯ ಪರದೆಯನ್ನು ಸ್ಥಾಪಿಸಲಾಗುವುದು ಎಂದು ಮಾಹಿತಿ ನೀಡಿದರು.

ಒಪ್ಪಂದ ನವೀಕರಣ: ಮೈಸೂರು ರೇಸ್‌ ಕ್ಲಬ್‌ ಗುತ್ತಿಗೆ ನವೀಕರಣ ಪ್ರಕ್ರಿಯೆ ಸರ್ಕಾರದ ಪರಿಗಣನೆಯಲ್ಲಿದೆ. ಶೀಘ್ರದಲ್ಲೇ ಭೋಗ್ಯದ ಒಪ್ಪಂದ ನವೀಕರಣಗೊಳ್ಳಲಿದೆ ಎಂದು ತಿಳಿಸಿದರು.

ಮೈಸೂರು ರೇಸ್‌ ಕ್ಲಬ್‌ ಕಾರ್ಯದರ್ಶಿ ಕೆ.ಜಿ.ಅನಂತರಾಜ್‌ ಅರಸ್‌, ಸಮಿತಿ ಸದಸ್ಯರಾದ ಬಿ.ಯು.ಚೆಂಗಪ್ಪ, ಡಾ.ಎನ್‌.ನಿತ್ಯಾನಂದರಾವ್, ವೈ.ಪಿ.ಉದಯಶಂಕರ್ ಪಾಲ್ಗೊಂಡಿದ್ದರು.

ಪ್ರಮುಖ ರೇಸ್‌ಗಳ ವಿವರ:

ಆಗಸ್ಟ್ 30: ಕೃಷ್ಣರಾಜ ಒಡೆಯರ್ ಮೆಮೊರಿಯಲ್ ಟ್ರೋಫಿ, ಸೆಪ್ಟೆಂಬರ್ 5: ಚಾಮರಾಜ ಒಡೆಯರ್ ಮೆಮೊರಿಯಲ್‌ ಟ್ರೋಫಿ, ಸೆ.12: ದಿ ಕರ್ನಾಟಕ ರೇಸ್‌ಹಾರ್ಸ್‌ ಓನರ್ಸ್‌ ಅಸೋಸಿಯೇಷನ್‌ನ ಮೈಸೂರು, ಸೆ.13: ಮಹಾರಾಜಾಸ್‌ ಕಪ್‌, ಸೆ.20: ದಿ ಮೇಯರ್ಸ್‌ ಕಪ್‌, ಸೆ.26: ಚೀಫ್‌ ಮಿನಿಸ್ಟರ್ಸ್‌ ಕಪ್, ಸೆ.27: ಜಯಚಾಮರಾಜ ಒಡೆಯರ್ ಗಾಲ್ಫ್‌ ಕ್ಲಬ್‌, ಅಕ್ಟೋಬರ್‌ 4: ದಿ ಕಂಟ್ರಿ ಸ್ಟಡ್ಸ್ ಮೈಸೂರು ದಸರಾ ಸ್ಪ್ರಿಂಟ್. ಅ.12: ಗವರ್ನರ್ಸ್‌ ಕಪ್‌, ಅ.20: ದಿ ಮೈಸೂರು ರೇಸ್ ಕ್ಲಬ್ ಗೋಲ್ಡನ್‌ ಜುಬ್‌ಲೀ ಕಪ್, ಅ.21: ದಿ ಮೈಸೂರು ಡರ್ಬಿ

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !