ಶುಕ್ರವಾರ, ನವೆಂಬರ್ 22, 2019
22 °C

27 ಜನರಿಗೆ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ

Published:
Updated:

ಮೈಸೂರು: ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ 27 ಜನರಿಗೆ 64ನೇ ಕರ್ನಾಟಕ ರಾಜ್ಯೋತ್ಸವದ ಜಿಲ್ಲಾ ಮಟ್ಟದ ಪ್ರಶಸ್ತಿ ಘೋಷಿಸಲಾಗಿದೆ.

ಕೀ ಬೋರ್ಡ್‌ ಕಲಾವಿದ ಗಣೇಶ ಈಶ್ವರಭಟ್ಟ, ಕಾಲಮಾಪನ ವಿಜ್ಞಾನ ಕ್ಷೇತ್ರದಿಂದ ಎಂ.ಎಸ್.ಚಂದ್ರಶೇಖರ ಅಯ್ಯರ್, ಕಾರ್ಮಿಕ ಸೇವೆ–ಎಂ.ಎಲ್.ಶಿವಪ್ರಕಾಶ್‌, ಸಮಾಜ ಸೇವೆ–ತಿಪ್ಪೇಕಾಳಿ ರಂಗನಾಥ್, ಎಂ.ಮಾದೇಶ್, ಚನ್ನೇಗೌಡ, ಡಾ.ಮಹೇಂದ್ರಸಿಂಗ್ ಕಾಳಪ್ಪ, ಜಾನಪದ–ಕಂಸಾಳೆ ಕುಮಾರಸ್ವಾಮಿ.

ವಿಶಿಷ್ಟ ಸೇವೆ–ಯು.ಎಸ್.ರಾಮಣ್ಣ, ಆರ್.ಮಲ್ಲಿಕಾರ್ಜುನ ಶೆಟ್ಟಿ, ಛಾಯಾಗ್ರಹಣ–ಕೆ.ಹೇಮಚಂದ್ರನಾಯಕ, ಸಂಘಟನೆ–ಡಾ.ಎಂ.ಪಿ.ವರ್ಷ, ಪತ್ರಿಕಾ ಛಾಯಾಗ್ರಹಣ–ಎಂ.ಎನ್.ಲಕ್ಷ್ಮೀನಾರಾಯಣ ಯಾದವ್, ಶಿಕ್ಷಣ ಸಮಾಜಸೇವೆ–ಎ.ಫಜ್ಹೀಲತ್, ಕಲಾ ಸೇವೆ–ಎಂ.ಎನ್.ಯದುಗಿರಿ.

ಸಾಹಿತ್ಯ ರಂಗಭೂಮಿ–ಕಿಕ್ಕೇರಿ ಕೆ.ಜೆ.ನಾರಾಯಣ, ವೈದ್ಯಕೀಯ–ಸಿ.ಜಿ.ನರಸಿಂಹನ್, ಸಾಹಿತ್ಯ–ಕೃಷ್ಣ ತಿಪ್ಪೂರು, ವೈದ್ಯಕೀಯ ಸಾಹಿತ್ಯ–ಡಾ.ಎಸ್.ಪಿ.ಯೋಗಣ್ಣ, ಜನಪದ ಗಾಯಕ–ಬಸವಯ್ಯ, ಮಾಧ್ಯಮ–ಜಿ.ಜಯಂತ್, ಕನ್ನಡ ಹೋರಾಟ–ಎಂ.ಜಯಪ್ರಕಾಶ್, ಆರ್.ಸೇತುರಾಮ್, ಗುರುಬಸಪ್ಪ, ರವಿಗೌಡ, ಚಿನ್ನಪ್ಪ, ಸಂಗೀತ ಕ್ಷೇತ್ರದಿಂದ ವಿದ್ವಾನ್ ರಘುನಾಥ್ ಅವರನ್ನು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)