ಶುಕ್ರವಾರ, ಅಕ್ಟೋಬರ್ 18, 2019
20 °C
ಅನ್ಯ ಮಾರ್ಗದಲ್ಲಿ ಪ್ರವೇಶ ನೀಡುವುದಿಲ್ಲ

ಮೈಸೂರು ದಸರ: ಯಾವ ಯಾವ ದ್ವಾರದಲ್ಲೇ ಪ್ರವೇಶ.. ಇಲ್ಲಿದೆ ಮಾಹಿತಿ

Published:
Updated:

ಮೈಸೂರು: ಅ. 8ರಂದು ಮೈಸೂರು ಅರಮನೆಯಲ್ಲಿ ನಡೆಯುವ ಜಂಬೂಸವಾರಿ ಹಾಗೂ ಬನ್ನಿಮಂಟಪದಲ್ಲಿ ನಡೆಯಲಿರುವ ದಸರಾ ಪಂಜಿನ ಕವಾಯತಿನಲ್ಲಿ ಭಾಗವಹಿಸುವ ಸಾರ್ವಜನಿಕರು ತಮ್ಮಲ್ಲಿರುವ ದಸರಾ ಗೋಲ್ಡ್‌ ಕಾರ್ಡ್, ಪಾಸ್ ಹಾಗೂ ಟಿಕೆಟ್‌ಗಳ ಮೇಲೆ ನಮೂದಿಸಿರುವ ಗೇಟ್‌ಗಳಲ್ಲೇ ಪ್ರವೇಶ ಪಡೆಯಬೇಕು. ಬೇರೆ ಗೇಟ್‌ಗಳಲ್ಲಿ ಪ್ರವೇಶ ನೀಡಲಾಗುವುದಿಲ್ಲ ಎಂದು ನಗರ ಪೊಲೀಸ್ ಕಮೀಷನರ್ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.

ಸಂಜೆ 5 ಗಂಟೆಯ ನಂತರ ಬನ್ನಿಮಂಟಪ ಪ್ರವೇಶಿಸಲು ಅವರು ಕೋರಿದ್ದಾರೆ. 

ಅಂಬಾವಿಲಾಸ ಪ್ರವೇಶದ್ವಾರ: ಸ್ಟ್ಯಾಂಡ್ (ಎನ್‌ಕ್ಲೋಸರ್‌) ಎ ಮತ್ತು ಬಿ (5ನೇ ಗೇಟ್‌) ಸಿ ಮತ್ತು ಡಿ (6ನೇ ಗೇಟ್) 

ವರಾಹ ಪ್ರವೇಶದ್ವಾರ: ಸ್ಟ್ಯಾಂಡ್ ‘ಎಫ್’ (4ನೇ ಗೇಟ್)

ಜಯಮಾರ್ತಾಂಡ ದ್ವಾರ: ಸ್ಟ್ಯಾಂಡ್ ‘ಇ’ (3ನೇ ಗೇಟ್), ‘ಜಿ’ (3 ಎ ಗೇಟ್), ‘ಎಚ್’ (2ನೇ ಗೇಟ್), ‘ಐ’ ಮತ್ತು  ಎನ್ (1ನೇ ಗೇಟ್)

ಕರಿಕಲ್ಲು ತೊಟ್ಟಿ ದ್ವಾರ: ಸ್ಟ್ಯಾಂಡ್ ‘ಎಲ್‘ (7ನೇ ಗೇಟ್)

ಬ್ರಹ್ಮಪುರಿ ದ್ವಾರ: ಸ್ಟ್ಯಾಂಡ್ ‘ಎಂ’ ಮತ್ತು ‘ಜೆ’ (8ನೇ ಗೇಟ್)

ಬನ್ನಿಮಂಟಪ

ಬಾಲಭವನ ಪ್ರವೇಶದ್ವಾರ: ಸ್ಟ್ಯಾಂಡ್ (ಎನ್‌ಕ್ಲೋಸರ್‌) ‘ಬಿ’ (2ನೇಗೇಟ್‌)– ವಾಹನ ನಿಲುಗಡೆ ಸಂಖ್ಯೆ –3

ನೆಲ್ಸನ್‌ ಮಂಡೇಲ ರಸ್ತೆಯ ದ್ವಾರ: ಸ್ಟ್ಯಾಂಡ್ ‘ಸಿ’ (3ನೇ ಗೇಟ್)– ವಾಹನ ನಿಲುಗಡೆ ಸಂಖ್ಯೆ – 3
ಸ್ಟ್ಯಾಂಡ್ ‘ಡಿ’ (4ನೇ ಗೇಟ್)– ವಾಹನ ನಿಲುಗಡೆ ಸಂಖ್ಯೆ– 5, ಸ್ಟ್ಯಾಂಡ್ ‘ಇ’ ಮತ್ತು ‘ಎಫ್’ (5ನೇ ಗೇಟ್)– ವಾಹನ ನಿಲುಗಡೆ 6 ಮತ್ತು 7), ಸ್ಟ್ಯಾಂಡ್ ‘ಜಿ’– (6ನೇ ಗೇಟ್)– ವಾಹನ ನಿಲುಗಡೆ ಸಂಖ್ಯೆ 12– ಸೇಂಟ್ ಫಿಲೊಮಿನಾ ಕಾಲೇಜು.

ಬೆಂಗಳೂರು– ಮೈಸೂರು ರಸ್ತೆ ಕಡೆಯ ದ್ವಾರ: ಸ್ಟ್ಯಾಂಡ್ ‘ಎಚ್’ (7ನೇ ಗೇಟ್)– ಸ್ಟ್ಯಾಂಡ್ ‘ಜೆ’ (9ಎ ಗೇಟ್) ಸ್ಟ್ಯಾಂಡ್ ‘ಕೆ’ (9ಬಿ ಗೇಟ್), ಸ್ಟ್ಯಾಂಡ್ ‘ಎಲ್‘ (9 ಸಿ ಗೇಟ್) – ವಾಹನ ನಿಲುಗಡೆ ಸಂಖ್ಯೆ 12–ಸೇಂಟ್ ಫಿಲೊಮಿನಾ ಕಾಲೇಜು. ಸ್ಟ್ಯಾಂಡ್ ‘ಎಂ’ (10ನೇ ಗೇಟ್), ಸ್ಟ್ಯಾಂಡ್ ‘ಎನ್’ (11 ಎ ಗೇಟ್) ವಾಹನ ನಿಲುಗಡೆ – 13 ಸೆಂಟ್ ಮಥೀಯ ಶಾಲೆ.

ಹನುಮಂತನಗರ ರಸ್ತೆ ಕಡೆಯ ದ್ವಾರ: ಸ್ಟ್ಯಾಂಡ್ ‘ಒ’ (11 ಬಿ ಗೇಟ್), ಸ್ಟ್ಯಾಂಡ್ ‘ಕ್ಯೂ’, ‘ಆರ್’ , ‘ಎಸ್’, (12ನೇ ಗೇಟ್) ವಾಹನ ನಿಲುಗಡೆ ಸಂಖ್ಯೆ 1 (ಗೇಟ್ 1ರ ಒಳಗೆ)

Post Comments (+)