ಮೈಸೂರು– ಊಟಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

7
9 ತಿಂಗಳಿನಿಂದ ನಡೆದಿದ್ದ 1.15 ಕಿಲೋಮೀಟರ್‌ ಉದ್ದದ ರಸ್ತೆ

ಮೈಸೂರು– ಊಟಿ ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

Published:
Updated:
Deccan Herald

ಮೈಸೂರು: ನಗರದ ಗನ್‌ಹೌಸ್‌ ವೃತ್ತದಿಂದ ನಂಜನಗೂಡು ಹೊರವರ್ತುಲ ರಸ್ತೆವರೆಗಿನ ರಸ್ತೆ ವಿಸ್ತರಣೆ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು.

1.15 ಕಿಲೋಮೀಟರ್‌ ಉದ್ದದ ಈ ರಸ್ತೆಯನ್ನು ಕಳೆದ 9 ತಿಂಗಳಿನಿಂದ ಕಾಮಗಾರಿಗಾಗಿ ಮುಚ್ಚಲಾಗಿತ್ತು. ಇದರೊಂದಿಗೆ ನಂಜನಗೂಡಿಗೆ ಹೋಗಬೇಕಾದ ವಾಹನಗಳು ಸುತ್ತಿ ಬಳಸಿ ಹೋಗಬೇಕಾದ ಅನಿವಾರ್ಯತೆ ಇದರೊಂದಿಗೆ ಕೊನೆಗೊಂಡಿದೆ.

ಸಂಚಾರದೊತ್ತಡಕ್ಕೂ ಅಂತ್ಯ:  ಈ ರಸ್ತೆಯು ಸಂಚಾರಕ್ಕೆ ಮುಕ್ತಗೊಳ್ಳುವುದರೊಂದಿಗೆ ದಶಕಗಳಿಂದ ಈ ಭಾಗದಲ್ಲಿದ್ದ ಸಂಚಾರ ದಟ್ಟಣೆ ಸಮಸ್ಯೆಗೂ ಪರಿಹಾರ ಸಿಗುತ್ತಿದೆ. ಮೈಸೂರು – ಊಟಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಪಡೆಯಲು ದೊಡ್ಡಕೆರೆ ಮೈದಾನದ ಮೂಲಕ ಬಸ್‌ಗಳು ಸಂಚರಿಸುತ್ತಿದ್ದವು. ಇವುಗಳಲ್ಲಿ ಬಹುತೇಕವು ಖಾಸಗಿ ಬಸ್‌ಗಳು. ಇದರಿಂದಾಗಿ ವಾಹನಗಳ ಸಂಖ್ಯೆ ಹೆಚ್ಚಾಗಿ ಅಪಘಾತಗೂ ಸಂಭವಿಸುತ್ತಿದ್ದವು. ಇದೇ ಕಾರಣಕ್ಕೆ 1.15 ಕಿಲೋಮೀಟರ್ ಉದ್ದದ ರಸ್ತೆಯನ್ನು ವಿಸ್ತರಿಸುವ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿತ್ತು.

ಲೋಕೋಪಯೋಗಿ ಇಲಾಖೆಯು ಒಟ್ಟು ₹ 17.1 ಕೋಟಿ ವೆಚ್ಚದಲ್ಲಿ ಈ ಕಾಮಗಾರಿ ನಡೆಸಿತ್ತು. ಇನ್ನುಮುಂದೆ ಈ ರಸ್ತೆಯಲ್ಲಿ ಏಕಮುಖ ಸಂಚಾರ ಇರಲಿದೆ. ನಂಜನಗೂಡು ಕಡೆಯಿಂದ ಬರುವ ವಾಹನಗಳು ಗನ್‌ಹೌಸ್‌ ವೃತ್ತದಲ್ಲಿ ಎಡಕ್ಕೆ ತಿರುಗಿ ನಗರ ಪ್ರವೇಶ ‍ಪಡೆಯಬಹುದಾಗಿದೆ.

ಶಾಸಕ ಎಸ್‌.ಎ.ರಾಮದಾಸ್ ಅವರು ಸೋಮವಾರ ವಿಶ್ವಮಾನವ ಉದ್ಯಾನದ ಬಳಿ ಹಸಿರು ನಿಶಾನೆ ತೋರಿ ವಾಹನ ಸಂಚಾರಕ್ಕೆ ಚಾಲನೆ ತೋರಿದರು. ನೆರೆ ರಾಜ್ಯಗಳಾದ ಕೇರಳ ಹಾಗೂ ತಮಿಳುನಾಡಿಗೆ ಸಂಪರ್ಕ ಪಡೆಯಲು ಈ ರಸ್ತೆ ಸೇತುವೆಯಾಗಿದೆ. ಈ ರಸ್ತೆಯ ಅಭಿವೃದ್ಧಿ ಆದ್ಯತೆಯಾಗಿದೆ ಎಂದರು.

ನಗರಪಾಲಿಕೆ ಸದಸ್ಯರಾದ ಬಿ.ವಿ.ಮಂಜುನಾಥ್, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರ ಅಶೋಕ್‌ ಭಾಗವಹಿಸಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !