ಕಾವೇರಿ ಸಿಲ್ಕ್ ಉದ್ಯೋಗ್ ಮಳಿಗೆಯ ಭೂವಿವಾದ: ಆತ್ಮಹತ್ಯೆಯ ಬೆದರಿಕೆ

7

ಕಾವೇರಿ ಸಿಲ್ಕ್ ಉದ್ಯೋಗ್ ಮಳಿಗೆಯ ಭೂವಿವಾದ: ಆತ್ಮಹತ್ಯೆಯ ಬೆದರಿಕೆ

Published:
Updated:

ಮೈಸೂರು: ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಕಾವೇರಿ ಸಿಲ್ಕ್ ಉದ್ಯೋಗ್ ಮಳಿಗೆಯ ಮಾಲೀಕರು ಚಾಕುಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆಯೊಡ್ಡಿದ ಘಟನೆ ಇಲ್ಲಿ ನಡೆದಿದೆ.

ಚಾಮುಂಡಿಬೆಟ್ಟದ ರಸ್ತೆಯಲ್ಲಿರುವ ಕಾವೇರಿ ಸಿಲ್ಕ್ ಉದ್ಯೋಗ್ ಮಳಿಗೆಯ ಭೂವಿವಾದ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. 

ನ್ಯಾಯಾಲಯದಲ್ಲಿ ಈ ವಿವಾದ ಇತ್ಯರ್ಥ ಆಗುವವರೆಗೂ ಅಂಗಡಿ ಬಂದ್ ಮಾಡಬೇಕು ಎಂಬ ಹಶಿಲ್ದಾರರ ಅವರ ಆದೇಶವನ್ನು ಜಾರಿಗೊಳಿಸಲು ಮುಂದಾದ ನಜರ್ ಬಾದ್ ಪೊಲೀಸರಿಗೆ ಅಂಗಡಿ ಮಾಲೀಕರು ಚಾಕು ಹಿಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಡೆಯೊಡ್ಡಿದರು.

ಈ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆಯದಂತೆ ತಡೆಯುವ ಸಲುವಾಗಿ ಮುನ್ನೆಚ್ಚರಿಕೆ ಕ್ರಮವಾಗಿ ನಗರದಲ್ಲಿ ತಹಶೀಲ್ದಾರ್ 145 ಸೆಕ್ಷನ್ ಜಾರಿ ಮಾಡಿದ್ದಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 1

  Angry

Comments:

0 comments

Write the first review for this !