ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹೌಸ್‌ ಆಫ್‌ ಬರ್ನಾಡಾ ಅಲ್ಬಾ’ ಪ್ರದರ್ಶನ ನಾಳೆಯಿಂದ

Last Updated 19 ಜುಲೈ 2019, 20:08 IST
ಅಕ್ಷರ ಗಾತ್ರ

ಮೈಸೂರು: ಸ್ಪ್ಯಾನಿಷ್ ಕವಿ ಫೆಡ್ರಿಕೊ ಗಾರ್ಸಿಯಾ ಲೋರ್ಕಾ ರಚಿತ ‘ಹೌಸ್‌ ಆಫ್‌ ಬರ್ನಾಡಾ ಅಲ್ಬಾ’ ನಾಟಕ ಜುಲೈ 21ರಿಂದ ಮೈಸೂರಿನ ರಂಗಾಯಣದಲ್ಲಿ ಪ್ರತಿ ಭಾನುವಾರ ಸಂಜೆ 6.30ಕ್ಕೆ ಪ್ರದರ್ಶನಗೊಳ್ಳಲಿದೆ ಎಂದು ರಂಗಾಯಣದ ನಿರ್ದೇಶಕಿ ಭಾಗೀರಥಿ ಬಾಯಿ ತಿಳಿಸಿದರು.

‘ಸ್ತ್ರೀಯೊಳಗಿನ ತಳಮಳ, ಆಂತರಿಕ ತುಮುಲ, ಹರೆಯದಿಂದ ನಲವತ್ತರವರೆಗಿನ ಆಕೆಯ ಕನಸು, ಕಲ್ಪನೆಗಳನ್ನು ಸಂಪ್ರದಾಯದ ಹೆಸರಿನಲ್ಲಿ ಕಟ್ಟಿ ಹಾಕಿದಾಗ ವ್ಯಕ್ತವಾಗುವ ಸ್ತ್ರೀ ಸಂವೇದನೆಗಳನ್ನು ಈ ನಾಟಕ ಬಿಂಬಿಸಲಿದೆ’ ಎಂದು ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಈ ನಾಟಕ ಒಂದು ಧರ್ಮ, ದೇಶಕ್ಕೆ ಸೀಮಿತವಾದುದಲ್ಲ. ಪ್ರತಿಯೊಬ್ಬರ ಮನೆಯಲ್ಲಿನ ತಳಮಳ ಬಿಂಬಿಸಲಿದೆ. ಚಿಕ್ಕ ಮಗುವಿನಿಂದ ತಾಯಿ, ಅಜ್ಜಿಯವರೆಗಿನ ಮೂರು ತಲೆಮಾರಿನ ಕತೆಗಳನ್ನು ಸೂಕ್ಷ್ಮವಾಗಿ ಅನಾವರಣಗೊಳಿಸಲಿದೆ’ ಎಂದರು.

‘ಪುರುಷ ಪ್ರಧಾನ ನಾಟಕಗಳೇ ಹೆಚ್ಚು ಪ್ರದರ್ಶನಗೊಂಡಿವೆ. ಸ್ತ್ರೀ ಪ್ರಧಾನ ನಾಟಕ ಇದೇ ಮೊದಲ ಬಾರಿಗೆ ರಂಗಾಯಣದಲ್ಲಿ ಪ್ರದರ್ಶಿತಗೊಳ್ಳುತ್ತಿದ್ದು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸಲು ಬರಬೇಕು’ ಎಂದು ಮನವಿ ಮಾಡಿಕೊಂಡರು.

ರಾಮಚಂದ್ರ ಜಿ.ಹಡಪದ, ವಿನಾಯಕ ಭಟ್‌ ಹಾಸಣಗಿ, ರಂಗ ನಟಿ ಪೂರ್ಣಿಮಾ, ನಾಟಕದಲ್ಲಿನ ಪಾತ್ರಧಾರಿಗಳು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT