ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಇಇಟಿ: ಮೈಸೂರು ವಿದ್ಯಾರ್ಥಿಗಳ ಸಾಧನೆ

Last Updated 8 ಸೆಪ್ಟೆಂಬರ್ 2022, 16:05 IST
ಅಕ್ಷರ ಗಾತ್ರ

ಮೈಸೂರು: ವೈದ್ಯಕೀಯ ವಿಜ್ಞಾನಗಳ ಕೋರ್ಸ್‌ಗಳ ಪ್ರವೇಶಕ್ಕೆ ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ)ಯಲ್ಲಿ ಮೈಸೂರಿನ ಆಕಾಶ್ ಬೈಜೂಸ್‌ ಸಂಸ್ಥೆಯಲ್ಲಿ ಮಾರ್ಗದರ್ಶನ ಪಡೆದ ವಿದ್ಯಾರ್ಥಿಗಳು ಉತ್ತಮ ಶ್ರೇಣಿ ಪಡೆದಿದ್ದಾರೆ.

ಎಂ.ಕೆ.ರಾಕೇಶ್, ಅರ್ನವ್‌ ರಂಜನ್, ಪುನರ್ವಸು ವಿ., ಪಿ.ಬಿ.ಸಿರಿ, ತನ್ಮಯ್‌ ಗೌಡರ್, ಅಭ್ಯದಯ್‌ ಜಿ.ಎಸ್., ಆಯಿಷಾ,ಮಯುರಾದಿತ್ಯಸಿ.,ಮಾನ್ಯಾಕೃಷ್ಣಹಾಗೂಶ್ರೀಯಾನಾಗರಾಜ್‌ ಆಕಾಶ್ ಬೈಜೂಸ್‌ನಲ್ಲಿ ತರಬೇತಿ ಗಳಿಸಿ ಮಿಂಚಿದ್ದಾರೆ.

720ಕ್ಕೆ 691 ಅಂಕಗಳನ್ನು ಗಳಿಸಿದ ಮಾನಸ್ 226ನೇ ಹಾಗೂ 720ಕ್ಕೆ 685 ಅಂಕಗಳನ್ನು ಗಳಿಸಿದ ಅರ್ನವ್ 606ನೇ ರ‍್ಯಾಂಕ್‌ ಪಡೆದಿದ್ದಾರೆ.

ಆಕಾಶ್ ಬೈಜೂಸ್‌ನ ವ್ಯವಸ್ಥಾಪಕ ನಿರ್ದೇಶಕ ಆಕಾಶ್ ಚೌಧರಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.

‘ದೇಶದಾದ್ಯಂತ ಒಟ್ಟು 16 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೀಟ್‌ಗೆ ಹಾಜರಾಗಿದ್ದರು. ಅವರ ಸಾಧನೆಯು ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಅವರ ಪೋಷಕರ ಬೆಂಬಲದ ಪರಿಮಾಣಗಳನ್ನು ಹೇಳುತ್ತದೆ’ ಎಂದು ಹೇಳಿದ್ದಾರೆ.

‘ಸಾಂಕ್ರಾಮಿಕ ಪೀಡಿತ ಶೈಕ್ಷಣಿಕ ವರ್ಷಗಳಲ್ಲಿ, ವಿದ್ಯಾರ್ಥಿಗಳು ಅತಿ ಹೆಚ್ಚಿನ ಅಂಕಗಳನ್ನು ಗಳಿಸಲು ಆಕಾಶ್ ಬೈಜೂಸ್‌ನಿಂದ ಹೆಚ್ಚು ಪ್ರಯತ್ನ ನಡೆಸಲಾಯಿತು’ ಎಂದು ತಿಳಿಸಿದ್ದಾರೆ.

ಕ್ಲಸ್ಟರ್‌ ಹೆಡ್ ಮನೀಶ್, ಹಿರಿಯ ಅಕಾಡೆಮಿಕ್ ಮುಖ್ಯಸ್ಥ ಅನಿಲ್‌ ಕುಮಾರ್‌ ಹಾಗೂ ಅಕಾಡೆಮಿಕ್ ಹೆಡ್ ಬಾಲಕೃಷ್ಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT