ಅರಮನೆಯೊಳಗೆ ನಿಧಿ ಸುಬ್ಬಯ್ಯ ಫೋಟೊ ಶೂಟ್‌

7

ಅರಮನೆಯೊಳಗೆ ನಿಧಿ ಸುಬ್ಬಯ್ಯ ಫೋಟೊ ಶೂಟ್‌

Published:
Updated:
Deccan Herald

ಮೈಸೂರು: ನಟಿ ನಿಧಿ ಸುಬ್ಬಯ್ಯ ಅವರು ವಿಶ್ವ ಪ್ರಸಿದ್ಧ ಮೈಸೂರು ಅರಮನೆಯೊಳಗೆ ವಿವಿಧ ಭಂಗಿಯಲ್ಲಿ ತೆಗಿಸಿಕೊಂಡಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.‌

ದರ್ಬಾರ್ ಸಭಾಂಗಣದಲ್ಲಿ ಕುಳಿತು ಪೋಸ್ ನೀಡಿದ್ದಾರೆ. ಅಲ್ಲದೇ, ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಂ ಖಾತೆಗೆ ಅಪ್‌ಲೋಡ್‌ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಿಷೇಧಿತ ಪ್ರದೇಶದಲ್ಲಿ ಚಿತ್ರ ತೆಗೆಸಿಕೊಂಡಿರುವುದು ತಪ್ಪು, ಭದ್ರತಾ ವಿಚಾರದಲ್ಲಿ ತೊಂದರೆ ಆಗುತ್ತದೆ ಎಂದು ಟೀಕಿಸಿದ್ದಾರೆ.

ಈ ಹಿಂದೆ ಅರಮನೆಯೊಳಗೆ ನಡೆದಿದ್ದ ನಿವೃತ್ತ ಐಎಎಸ್ ಅಧಿಕಾರಿಯೊಬ್ಬರ ಪುತ್ರನ ವಿವಾಹಪೂರ್ವ ಫೋಟೊ ಶೂಟ್ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಸಂಬಂಧ ಅರಮನೆ ಮಂಡಳಿ ಉಪನಿರ್ದೇಶಕರ ವಿರುದ್ಧ ವಿಚಾರಣೆ ನಡೆದಿತ್ತು.

‘ಅರಮನೆಯೊಳಗೆ ಫೋಟೊ ತೆಗೆದುಕೊಳ್ಳಲು ಯಾವುದೇ ನಿರ್ಬಂಧ ವಿಧಿಸಿಲ್ಲ. ಇದರಿಂದ ಬೇರೆಯವರಿಗೆ ಸಮಸ್ಯೆಯಾಗಬಾರದು. ನಿಷೇಧಿತ ಸ್ಥಳಕ್ಕೆ ಹೋಗಲು ಅನುಮತಿ ಇಲ್ಲದಿರುವುದರಿಂದ ಅಲ್ಲಿ ಫೋಟೊ ತೆಗೆಯುವ ಪರಿಸ್ಥಿತಿಯೇ ಉದ್ಭವಿಸುವುದಿಲ್ಲ’ ಎಂದು ಅರಮನೆ ಮಂಡಳಿ ಉಪನಿರ್ದೇಶಕ ಟಿ.ಎಸ್‌.ಸುಬ್ರಮಣ್ಯ ಪ್ರತಿಕ್ರಿಯಿಸಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !