ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಿಸ್ಥಾನ: ಅಸಮಾನತೆ ಹೋಗಲಿ: ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ

ಸಭೆಯಲ್ಲಿ ಆಗ್ರಹಿಸಿದ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ
Last Updated 30 ನವೆಂಬರ್ 2020, 1:28 IST
ಅಕ್ಷರ ಗಾತ್ರ

ಮೈಸೂರು: ಪಂಚಮಶಾಲಿ ಲಿಂಗಾಯತ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಅವರು ಪುನರುಚ್ಚರಿಸಿದರು.

ನಗರದ ಹೊಸಮಠ ಆವರಣ ದಲ್ಲಿರುವ ನಟರಾಜ ಸಭಾಭವನದಲ್ಲಿ ಭಾನುವಾರ ನಡೆದ ಕರ್ನಾಟಕ ಲಿಂಗಾ ಯತ ಗೌಡ ಮಹಾಸಭಾದ ಸಭೆಯ ಬಳಿಕ ಅವರು ಮಾಧ್ಯಮದವರ ಜತೆ ಮಾತನಾಡಿದರು.

‘ಲಿಂಗಾಯತರಲ್ಲಿ ಬಹಳಷ್ಟು ಒಳಪಂಗಡಗಳಿವೆ. ಲಿಂಗಾಯತರ ಶಾಸಕರಲ್ಲಿ 13 ಮಂದಿ ಪಂಚಮಸಾಲಿ ಸಮುದಾ ಯದವರು. ಆದರೆ ನಮ್ಮಲ್ಲಿ ಒಬ್ಬರಿಗೆ ಮಾತ್ರ ಮಂತ್ರಿ ಸ್ಥಾನ ಕೊಟ್ಟಿ
ದ್ದಾರೆ. ಇತರ ಒಳಪಂಗಡಗಳಲ್ಲಿ ಕಡಿಮೆ ಶಾಸಕರಿದ್ದರೂ, ಹೆಚ್ಚು ಮಂತ್ರಿಸ್ಥಾನ ಸಿಕ್ಕಿದೆ. ಈ ಅಸಮಾನತೆ ಹೋಗಬೇಕು’ ಎಂದರು.

‘ಸಚಿವ ಸ್ಥಾನ ನೀಡಬೇಕು ಎಂದು ಕಳೆದ ಹರಿಹರ ಜಾತ್ರೆಯಲ್ಲಿ ನೇರವಾಗಿ ಕೇಳಿದ್ದೆ. ಮುಂದಿನ ದಿನದಲ್ಲಿ ಮಂತ್ರಿ ಸ್ಥಾನ ನೀಡುವ ಭರವಸೆಯನ್ನು ಬಿಜೆಪಿ ವರಿಷ್ಠರು ನೀಡಿದ್ದರು. ಈಗ ಆ ಭರವಸೆಯನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.

ಸಿದ್ದರಾಮಯ್ಯ ಹಿಂದುಳಿದ ವರ್ಗ ಗಳ ನಾಯಕ. ಬಿ.ಎಸ್.ಯಡಿಯೂರಪ್ಪ ಅವರು ಲಿಂಗಾಯತ ಸಮುದಾಯದ ನಾಯಕ. ಯಡಿಯೂರಪ್ಪತಮ್ಮ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಬೇಕು. ಹಾಗಾದಲ್ಲಿ ಸಮುದಾಯದ ಜನಮಾನಸದಲ್ಲಿ ಉಳಿಯುವರು ಎಂದರು.

ರಾಜ್ಯದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಅವರ ಭಾವಚಿತ್ರವನ್ನು ಇಡಲು ಸಿದ್ದರಾಮಯ್ಯ ಬರಬೇಕಾಯಿತು. ಈಗ ಯಡಿಯೂರಪ್ಪ ಅವರು ಸಮುದಾ ಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸಿ ಬದ್ಧತೆ ಪ್ರದರ್ಶಿಸಬೇಕು ಎಂದರು.

ಸಭೆಯಲ್ಲಿ ನಿರ್ಣಯ: ಲಿಂಗಾಯತ ಗೌಡ ಜಾತಿಯನ್ನು ಹಿಂದುಳಿದ ವರ್ಗ ಗಳ ಪ್ರವರ್ಗ 2ಎ ಸೇರಿಸಬೇಕೆಂಬ ನಿರ್ಣ ಯವನ್ನು ಭಾನುವಾರ ನಡೆದ ಕರ್ನಾಟಕ ಲಿಂಗಾಯತ ಗೌಡ ಮಹಾಸಭಾದ ಸಭೆಯಲ್ಲಿ ಕೈಗೊಳ್ಳಲಾಗಿದೆ.

ಹಳೇ ಮೈಸೂರು ಭಾಗದಲ್ಲಿ ಲಿಂಗಾಯತ ಗೌಡ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈವರೆಗೂ ಸಂಘಟಿತರಾಗಿಲ್ಲ. ಈ ಸಮಾಜದ ಜನರು ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಮುಖ್ಯವಾಹಿನಿಗೆ ತರಲು ಸಂಘಟನೆ ಮಾಡಬೇಕಿದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ವಚನಾನಂದ ಸ್ವಾಮೀಜಿ ಮಾತ ನಾಡಿ ಮೈಸೂರು, ಚಾಮರಾಜನಗರ, ಮಂಡ್ಯ, ರಾಮನಗರ, ಹಾಸನ ಜಿಲ್ಲೆಯಲ್ಲಿ ಈ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಉತ್ತರ ಕರ್ನಾ ಟಕದಲ್ಲಿ ಪಂಚಮಸಾಲಿ ಲಿಂಗಾಯತರು ಇದ್ದಾರೆ. ಲಿಂಗಾಯತರಲ್ಲಿ 102 ಒಳ ಪಂಗಡಗಳಿವೆ. ಬಹುತೇಕ ಒಳ ಪಂಗಡಗಳು 2ಎ ಮೀಸಲಾತಿ ಪಡೆದುಕೊಂಡಿವೆ. ಆದರೆ ನಮಗೆ ಮೀಸಲಾತಿ ಅನ್ಯಾಯ ಆಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಹೊಸಮಠದ ಚಿದಾನಂದ ಸ್ವಾಮೀಜಿ, ಬಸವಕೇಂದ್ರದ ಬಸವ ಸ್ವಾಮೀಜಿ, ಬೆಂಗಳೂರಿನ ಬಸವ ಧರ್ಮ ಪೀಠದ ದಯಾನಂದ ಸ್ವಾಮೀಜಿ. ಮಹಾಸಭಾದ ಸಂಚಾಲಕ ಆನಲಹಳ್ಳಿ ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT