ಶನಿವಾರ, ಜುಲೈ 24, 2021
26 °C
ಇಲ್ಲಿದೆ ಬದಲಿ ಮಾರ್ಗದ ವಿವರ

ಮೈಸೂರು | 3 ತಿಂಗಳವರೆಗೆ ಇರ್ವಿನ್ ರಸ್ತೆಯಲ್ಲಿ ಸಂಚಾರ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ನಗರದ ಇರ್ವಿನ್ ರಸ್ತೆ ವಿಸ್ತರಣೆ ಕಾಮಗಾರಿಯಿಂದಾಗಿ ವಾಹನ ಸಂಚಾರವನ್ನು 3 ತಿಂಗಳ ಕಾಲ ನಿರ್ಬಂಧಿಸಿ ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ನೆಹರು ವೃತ್ತದಿಂದ ಪಶ್ಚಿಮಕ್ಕೆ ಸರ್‌ ಎಂ.ವಿಶ್ವೇಶ್ವರಯ್ಯ ವೃತ್ತದವರೆಗೆ ಎರಡೂ ದಿಕ್ಕುಗಳಲ್ಲಿ ಸಂಚರಿಸುವ ಎಲ್ಲಾ ಮಾದರಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಬದಲಿ ಮಾರ್ಗ: ಇರ್ವಿನ್ ರಸ್ತೆಯಲ್ಲಿ ನೆಹರೂ ವೃತ್ತದಿಂದ ಪಶ್ಚಿಮಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದವರೆಗೆ ಸಂಚರಿಸುತ್ತಿದ್ದ ಎಲ್ಲಾ ನಗರ ಸಾರಿಗೆ ಬಸ್‌ಗಳು ಬಿ.ಎನ್. ರಸ್ತೆಯಲ್ಲಿ ನೇರವಾಗಿ ನವಾಬ್ ಹೈದರಾಲಿಖಾನ್ ವೃತ್ತ (ಫೈವ್ ಲೈಟ್ ವೃತ್ತ) - ಚರ್ಚ್ ರಸ್ತೆ- ಸೇಂಟ್ ಫಿಲೋಮಿನಾ ಚರ್ಚ್ ವೃತ್ತ- ಅಶೋಕ ರಸ್ತೆ- ಗುಂಚಿ ಜಂಕ್ಷನ್-ಎಡತಿರುವು ಪಡೆದು ಪುಲಿಕೇಶಿ ರಸ್ತೆ ಮೂಲಕ ನ್ಯೂ ಎಸ್.ಆರ್ ರಸ್ತೆಯನ್ನು ತಲುಪಬೇಕು.

ಇರ್ವಿನ್ ರಸ್ತೆಯಲ್ಲಿ ನೆಹರು ವೃತ್ತದಿಂದ ಪಶ್ಚಿಮಕ್ಕೆ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದವರೆಗೆ ಸಂಚರಿಸುತ್ತಿದ್ದ ಭಾರಿ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಮಾದರಿಯ ವಾಹನಗಳು ನೆಹರೂ ವೃತ್ತದಲ್ಲಿ ಉತ್ತರಕ್ಕೆ ಅಶೋಕ ರಸ್ತೆ ಮೂಲಕ ಸಾಗಿ ಕಬೀರ್ ರಸ್ತೆ ಜಂಕ್ಷನ್‍ನಲ್ಲಿ ಪಶ್ಚಿಮಕ್ಕೆ ತಿರುವು ಪಡೆದು ಕಬೀರ್ ರಸ್ತೆ ಮೂಲಕ ನ್ಯೂ ಎಸ್.ಆರ್ ರಸ್ತೆಯನ್ನು ತಲುಪಬೇಕು.

ಇರ್ವಿನ್ ರಸ್ತೆಯಲ್ಲಿ ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಿಂದ ಪೂರ್ವಕ್ಕೆ ನೆಹರೂ ವೃತ್ತದವರೆಗೆ ಸಾಗುತ್ತಿದ್ದ ಎಲ್ಲಾ ಮಾದರಿಯ ವಾಹನಗಳು ಸರ್ ಎಂ.ವಿಶ್ವೇಶ್ವರಯ್ಯ ವೃತ್ತದಲ್ಲಿ ದಕ್ಷಿಣಕ್ಕೆ ತಿರುವು ಪಡೆದು ಎಸ್.ಆರ್ ರಸ್ತೆ- ಸರ್ದಾರ್ ವಲ್ಲಭಬಾಯಿ ಪಟೇಲ್ ರಸ್ತೆ- ಮಹಾತ್ಮ ಗಾಂಧಿ ವೃತ್ತ- ಮಹಾವೀರ ವೃತ್ತ- ಬಲತಿರುವು ಪಡೆದು (ದಕ್ಷಿಣಕ್ಕೆ) ಪುರಭವನದ ಮುಂಭಾಗದ ರಸ್ತೆಯಲ್ಲಿ ಸಾಗಬೇಕು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು