ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳುತ್ತಿರುವ ಶಿಶುವಿನೊಂದಿಗೆ ನರ್ಸ್‌ ಹಾಡು; ವಿಡಿಯೊ ವೈರಲ್

Last Updated 1 ಡಿಸೆಂಬರ್ 2021, 5:15 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಲುವಾಂಬ ಆಸ್ಪತ್ರೆಯಲ್ಲಿ ಅಳುತ್ತಿರುವ ನವಜಾತಶಿಶುವೊಂದನ್ನು ಎತ್ತಿಕೊಂಡು ನರ್ಸ್‌ವೊಬ್ಬರು ಮೊಬೈಲ್ ಆ್ಯಪ್‌ನಲ್ಲಿನ ಹಾಡೊಂದಕ್ಕೆ ಅಭಿನಯಿಸಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮಂಗಳವಾರ ವೈರಲ್ ಆಗಿತ್ತು.

ಟಿಕ್‌ಟಾಕ್‌ ಮಾದರಿಯ ಆ್ಯಪ್‌ನಲ್ಲಿ ಕೇಳಿ ಬರುವ ಎರಡು ಹಾಡುಗಳಿಗೆ ಮಗುವನ್ನು ಎತ್ತಿಕೊಂಡ ನರ್ಸ್‌ ಅಭಿನಯಿಸಿದ್ದಾರೆ. ಈ ವೇಳೆ ಮಗು ಅಳುತ್ತಿರುತ್ತದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚಲುವಾಂಬ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಕಾರಿ ಡಾ.ರಾಜೇಂದ್ರಕುಮಾರ್, ‘ಈ ವಿಡಿಯೊ ತುಂಬಾ ಹಳೆಯದು. ಈ ಕುರಿತು ಈಗಾಗಲೇ ತನಿಖೆ ನಡೆಸಲಾಗಿದೆ. ನರ್ಸ್‌ ಮಗುವನ್ನು ಎತ್ತಿಕೊಂಡಾಗ ಬೇರೆಯವರು ಆಕೆಯ ವಿಡಿಯೊ ತೆಗೆದು ವಿವಿಧ ತಂತ್ರಾಂಶಗಳಲ್ಲಿ ಹಾಕಿ ತಿರುಚಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಮಾಡಿದ್ದಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT