ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಡಿ ಬಿದ್ದ ವರುಣಾ ಕೆರೆ: ನೂರಾರು ಎಕರೆ ಬೆಳೆಗೆ ಹಾನಿ

50 ವರ್ಷಗಳ ಬಳಿಕ ಕೋಡಿ ಬಿದ್ದ ಕೆರೆ; ಭತ್ತ, ತರಕಾರಿ ಬೆಳೆ ನಾಶ, ಕುಸಿದ ಗೋಡೆಗಳು
Last Updated 27 ಅಕ್ಟೋಬರ್ 2021, 5:59 IST
ಅಕ್ಷರ ಗಾತ್ರ

ವರುಣಾ: ಸೋಮವಾರ ರಾತ್ರಿಯಿಂದ ನಿರಂತರವಾಗಿ ಬಿದ್ದ ಧಾರಾಕಾರ ಮಳೆಗೆ ವರುಣಾ ಕೆರೆ ಕೋಡಿ ಬಿದ್ದು, ನೂರಾರು ಎಕರೆ ಭತ್ತ ಹಾಗೂ ತರಕಾರಿ ಬೆಳೆಗೆ ಹಾನಿಯಾಗಿದೆ.

ಕಳೆದ 50 ವರ್ಷಗಳ ಹಿಂದೆ ವರುಣಾ ಕೆರೆ ಕೋಡಿ ಬಿದ್ದಿತ್ತು. ವರುಣಾ ವೀರಶೈವ ರುದ್ರಭೂಮಿ ಜಾಗದಲ್ಲಿ ಕೋಡಿ ಹರಿಯುತ್ತಿದ್ದು, ಕೆರೆಯ ಕೆಳಭಾಗದ ಅನೇಕ ಬೆಳೆಗಳು ಜಲಾವೃತಗೊಂಡಿವೆ.

ವರುಣಾ ಗ್ರಾಮದ ರೈತ ರಾಜಶೇಖರ ಅವರ ಎರಡು ಎಕರೆ ದಪ್ಪ ಮೆಣಸಿಕಾಯಿ ಬೆಳೆಗೆ ಹಾನಿಯಾಗಿದೆ.

ಸಮೀಪದ ಚೋರನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಗೆ ನೀರು ನುಗ್ಗಿದೆ. ಹೋಬಳಿಯಲ್ಲಿ ಐದು ಮನೆ ಹಾಗೂ ಚಿಕ್ಕಯ್ಯನ ಛತ್ರ ಹೋಬಳಿಯಲ್ಲಿ ಐದು ಮನೆಗಳ ಗೋಡೆಗಳು ಕುಸಿದಿವೆ. ಹಡಜನ, ವಾಜಮಂಗಲ, ಯಾನದಹಳ್ಳಿ, ಗೊದ್ದಲಪುರದಲ್ಲಿ ತಲಾ ಒಂದು ಮನೆ ಹಾಗೂ ಭೂಗತಹಳ್ಳಿ, ಹೊಸಕೋಟೆಯಲ್ಲಿ ಎರಡು ಮನೆ ಗೋಡೆಗಳು ಕುಸಿದಿವೆ. ವರುಣಾ ಹೋಬಳಿಯಲ್ಲಿ 47.5 ಮಿ.ಮೀ ಮಳೆ ಬಿದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT