ಭಾನುವಾರ, ಅಕ್ಟೋಬರ್ 20, 2019
28 °C

ಯುವ ದಸರಾ ಉದ್ಘಾಟಿಸಲು ಮೈಸೂರಿಗೆ ಬಂದರು ಪಿ.ವಿ.ಸಿಂಧು

Published:
Updated:

ಮೈಸೂರು: ಯುವ ದಸರಾ ಉದ್ಘಾಟಿಸಲು ಮಂಗಳವಾರ ಮಧ್ಯಾಹ್ನ ಮೈಸೂರಿಗೆ ಬಂದ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಅವರನ್ನು ಸಂಸದ ಪ್ರತಾಪ್‌ ಸಿಂಹ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು.

ಪಿ.ವಿ.ಸಿಂಧು ಅವರು ಇಂದು ಸಂಜೆ ಯುವ ದಸರಾ ಉದ್ಘಾಟಿಸಲಿದ್ದಾರೆ. ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ವಿ.ಸಿಂಧು ಹಾಗೂ ಗಾಯಕಿ ರಾನು ಮಂಡಲ್‌ ಈ ಬಾರಿಯ ಯುವ ದಸರೆಯಲ್ಲಿ ಪ್ರಮುಖ ಆಕರ್ಷಣೆಯಾಗಿದ್ದಾರೆ.

ಸಿಂಧು ಜೊತೆಗೆ ಪೋಷಕರಾದ ರಮಣ ಹಾಗೂ ವಿಜಯಾ ಇದ್ದಾರೆ. ಹೈದರಾಬಾದ್ ನಿಂದ ವಿಮಾನದಲ್ಲಿ ಮೈಸೂರಿಗೆ  ಬಂದರು.

ದಸರಾ ಮಹೋತ್ಸವ ಅಂಗವಾಗಿ ಮಹಾರಾಜ ಕಾಲೇಜು ಮೈದಾನದಲ್ಲಿ ಮಂಗಳವಾರ ಸಂಜೆ ಯುವ ದಸರೆಗೆ ಸಿಂಧು ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.

ಹೊಟ್ಟೆಪಾಡಿಗಾಗಿ ಪಶ್ಚಿಮ ಬಂಗಾಳದ ರೈಲ್ವೆ ಪ್ಲಾಟ್‌ಫಾರಂನಲ್ಲಿ ಹಾಡುತ್ತಿದ್ದ ರಾನು ಅವರನ್ನು ಸನ್ಮಾನಿಸಲಾಗುತ್ತಿದೆ. ಅವರು ಗಾನಸುಧೆ ಹರಿಸಲಿದ್ದಾರೆ. ಬಾಲಿವುಡ್‌ ಗಾಯಕ ಗುರು ರಾಂಧವ ಅವರು ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

Post Comments (+)