ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌.ಆರ್‌.ನಗರ ಚುನಾವಣೆ: ಪೊಲೀಸ್‌, ಅರೆಸೇನಾಪಡೆ ಪಥಸಂಚಲನ

Last Updated 24 ಮೇ 2018, 14:29 IST
ಅಕ್ಷರ ಗಾತ್ರ

ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಬಿಗಿ ಬಂದೋಬಸ್ತ್‌ ಕಲ್ಪಿಸಲಾಗಿದ್ದು, ಪೊಲೀಸರು ಮತ್ತು ಅರೆಸೇನಾಪಡೆ ಗುರುವಾರ ಪಥಸಂಚಲನ ನಡೆಸಿತು.

ಶಾಂತಿಯುತ ಚುನಾವಣೆ ನಡೆಸಲು ನೆರವಾಗುವ ನಿಟ್ಟಿನಲ್ಲಿ ಬದೋಬಸ್ತ್‌ ಕಲ್ಪಿಸಿ, ಆರ್‌.ಆರ್‌. ನಗರ, ಎ.ಪಿ.ನಗರ, ಕಾಮಾಕ್ಷಿಪಾಳ್ಯ ಪೊಲೀಸರು ಹಾಗೂ ಅರೆಸೇನಾಪಡೆ ಈ ಪ್ರದೇಶದಲ್ಲಿ ಪಥಸಂಚಲನ ನಡೆಸಿತು ಎಂದು ಬೆಂಗಳೂರು ನಗರ ಪಶ್ಚಿಮ ವಿಭಾಗ ಉಪ ಪೊಲೀಸ್‌ ಆಯುಕ್ತ ರವಿ. ಡಿ. ಚನ್ನಣ್ಣವರ್‌ ಅವರು #ಶಾಂತಿಯುತಚುನಾವಣೆಯಕಡೆ #ನಮ್ಮಪಡೆಗಳನಡೆ ಹ್ಯಾಷ್‌ ಟ್ಯಾಗ್‌ಗಳೊಂದಿಗೆ ಟ್ವೀಟ್‌ ಮಾಡಿದ್ದಾರೆ.

ಆರ್‌.ಆರ್‌.ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜಾಲಹಳ್ಳಿ ಅಪಾರ್ಟ್‌ಮೆಂಟ್‌ವೊಂದರಲ್ಲಿ 9,746 ಗುರುತಿನ ಚೀಟಿಗಳು, ಗುರುತಿನ ಚೀಟಿಗಾಗಿ ಸಲ್ಲಿಸುವ ಸಾವಿರಾರು ಅರ್ಜಿಯ ನಮೂನೆಗಳು ಸಿಕ್ಕಿದ್ದರಿಂದ ಆಯೋಗ ಚುನಾವಣೆಯನ್ನು ಮೇ 28ಕ್ಕೆ ಮುಂದೂಡಿತ್ತು.

ಗುರುತಿನ ಚೀಟಿಗಳ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಕಾಂಗ್ರೆಸ್‌ ಶಾಸಕ ಮುನಿರತ್ನ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಈ ಪ್ರಕರಣವನ್ನು ಆಯೋಗವು ಗಂಭೀರವಾಗಿ ಪರಿಗಣಿಸಿದೆ. ಉಪ ಚುನಾವಣಾ ಆಯುಕ್ತ ಚಂದ್ರಭೂಷಣ ಕುಮಾರ್ ಅವರು ಗುರುತಿನ ಚೀಟಿಗಳು ಪತ್ತೆಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ಕೇಂದ್ರ ಚುನಾವಣಾ ಆಯೋಗಕ್ಕೆ ವರದಿ ಸಲ್ಲಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT