ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಮಾಸ್ಕ್ ಹಾಕದವರಿಂದ ಕೇವಲ ಮೂರೇ ದಿನಗಳಲ್ಲಿ ₹ 3.72 ಲಕ್ಷ ದಂಡ ವಸೂಲು

ಮಾಸ್ಕ್ ಇಲ್ಲದವರಿಂದ ದಂಡ ವಸೂಲು ಹೆಚ್ಚಳ
Last Updated 25 ಏಪ್ರಿಲ್ 2021, 10:29 IST
ಅಕ್ಷರ ಗಾತ್ರ

ಮೈಸೂರು: ಮಾಸ್ಕ್ ಇಲ್ಲದೇ ಸಂಚರಿಸುವ ಸಾರ್ವಜನಿಕರ ಮೇಲೆ ಹದ್ದಿನ ಕಣ್ಣು ನೆಟ್ಟಿರುವ ಪೊಲೀಸರು ಕಂಡ ಕಂಡಲ್ಲಿ ದಂಡ ಹಾಕುತ್ತಿದ್ದಾರೆ. ಸೂಕ್ತವಾದ ಮಾಸ್ಕ್ ಧರಿಸದವರಿಂದ ಕೇವಲ ಮೂರೇ ದಿನಗಳಲ್ಲಿ ₹ 3.72 ಲಕ್ಷ ದಂಡವನ್ನು ವಸೂಲು ಮಾಡಿದ್ದಾರೆ.

ಏಪ್ರಿಲ್ 21ರಂದು ಒಂದೇ ದಿನ ₹ 2.6 ಲಕ್ಷ ದಂಡವನ್ನು ವಸೂಲು ಮಾಡಲಾಗಿತ್ತು. 22ರಂದು 87,550, 23ರಂದು 77,850 ದಂಡವನ್ನು ವಸೂಲು ಮಾಡಲಾಗಿದೆ. ಕಳೆದ ವರ್ಷ ಜುಲೈ 8ರಿಂದ ಇಲ್ಲಿಯವರೆಗೆ ₹ 1.09 ಕೋಟಿ ದಂಡ ಸಂಗ್ರಹವಾಗಿದೆ.

ಕೋವಿಡ್‌ ವ್ಯಾಪಕವಾಗಿ ಹೆಚ್ಚುತ್ತಿರುವುದಕ್ಕೆ ಮಾಸ್ಕ್ ಧರಿಸದೇ ಇರುವುದು ಪ್ರಧಾನ ಕಾರಣ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿದ ಮೇಲೂ ಅನೇಕರು ಮಾಸ್ಕ್ ಧರಿಸುವುದರ ಕಡೆಗೆ ಒಲವು ತೋರಿಲ್ಲ. ಇದರಿಂದ ಕೋವಿಡ್ ವ್ಯಾಪಕವಾಗಿ ಹಬ್ಬುತ್ತಿದೆ.

ವಿಶೇಷವಾಗಿ ಜನಜಂಗುಳಿ ಹೆಚ್ಚಿರುವ ಕಡೆ ಮಾಸ್ಕ್ ಬಳಕೆ ಬೇಕೇ ಬೇಕು. ಇಲ್ಲಿ ಒಬ್ಬರು ಕೆಮ್ಮಿದರೆ ಅನೇಕ ಮಂದಿಗೆ ಕೊರೊನಾ ವೈರಸ್ ಹರಡುತ್ತದೆ. ಇದನ್ನು ತಡೆಯಲು ಪೊಲೀಸರು ಮಾಸ್ಕ್ ಧರಿಸದೇ ಇರುವವರ ಮೇಲೆ ಹದ್ದಿನ ಕಣ್ಣಿಡಲು ಆರಂಭಿಸಿದರು.

ಇದಕ್ಕೂ ಮುಂಚೆ ಎಲ್ಲ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲೂ ಮಾಸ್ಕ್ ಧರಿಸುವುದರ ಸಂಬಂಧ ವ್ಯಾಪಕವಾದ ಅರಿವು ಕಾರ್ಯಕ್ರಮಗಳನ್ನು ನಡೆಸಲಾಯಿತು. ಒಂದೊಂದು ಠಾಣಾ ವ್ಯಾಪ್ತಿಗಳಲ್ಲೂ ಸಾರ್ವಜನಿಕರಿಗೆ ಸುಮಾರು 1 ಸಾವಿರದಷ್ಟು ಮಾಸ್ಕ್‌ಗಳನ್ನು ಉಚಿತವಾಗಿ ಹಂಚಲಾಯಿತು. ಕೆಲವೆಡೆ ಹೂ ನೀಡಿ ಮಾಸ್ಕ್ ಧರಿಸಿ ಎಂದು ನಯವಾಗಿಯೇ ಹೇಳಲಾಯಿತು. ಇಷ್ಟಾದರೂ ಮಾಸ್ಕ್ ಧರಿಸುವ ಸಂಬಂಧ ಅರಿವು ಸಾರ್ವಜನಿಕರಿಲ್ಲಿ ಮೂಡಲಿಲ್ಲ.‌

ಎಲ್ಲ ವಿಧವಾದ ಸೌಮ್ಯ ವಿಧಾನಗಳ ನಂತರ ಪೊಲೀಸರು ದಂಡ ಹಾಕಲು ಆರಂಭಿಸಿದ್ದಾರೆ. ಈಗ ಖಡಕ್ಕಾಗಿಯೇ ಎಲ್ಲೆಂದರಲ್ಲಿ ದಂಡ ವಸೂಲು ಮಾಡುತ್ತಿದ್ದಾರೆ.

ಪೊಲೀಸರ ಭಯಕ್ಕೆ ಮಾಸ್ಕ್ ಧರಿಸುವ ಬಹಳಷ್ಟು ಮಂದಿ ಸಮರ್ಪಕವಾಗಿ ಮಾಸ್ಕ್ ಧರಿಸದೇ ಓಡಾಡುತ್ತಿದ್ದಾರೆ. ಮೂಗಿನಿಂದ ಕೆಳಗೆ, ಕೇವಲ ಗಡ್ಡಕ್ಕೆ ಮಾತ್ರವಷ್ಟೇ ಮಾಸ್ಕ್ ಹಾಕಿರುತ್ತಾರೆ. ಎಲ್ಲೆಂದರಲ್ಲಿ ಉಗುಳುವವರಿಗೇನೂ ಕಡಿಮೆ ಇಲ್ಲ. ಪೊಲೀಸರು ಇಂತಹವರ ಮೇಲೆಯೂ ನಿಗಾ ಇರಿಸಿ, ದಂಡ ಹಾಕುತ್ತಿದ್ದಾರೆ.

***

ಮಾಸ್ಕ್ ಧರಿಸದೇ ಸಂಚರಿಸಿ ದಂಡ ಪಾವತಿಸುವ ಬದಲು ಅದೇ ಹಣದಲ್ಲಿ ಉತ್ತಮ ಗುಣಮಟ್ಟದ ಮಾಸ್ಕ್ ಧರಿಸಬಹುದು. ಸಾರ್ವಜನಿಕರು ದಯವಿಟ್ಟು ಮಾಸ್ಕ್ ಧರಿಸಿಯೇ ಸಂಚರಿಸಬೇಕು.

– ಡಾ.ಎ.ಎನ್.ಪ್ರಕಾಶ್‌ಗೌಡ, ಡಿಸಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT