ಮಂಗಳವಾರ, ಮಾರ್ಚ್ 28, 2023
32 °C
₹ 13.85 ಲಕ್ಷ ಮೌಲ್ಯದ ಚಿನ್ನಾಭರಣ ವಶ

ಬಸ್‌ನಲ್ಲಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣಿಕರ ಬ್ಯಾಗ್‌ ಹಾಗೂ ಕಿಸೆಗಳಿಂದ ಚಿನ್ನಾಭರಣಗಳನ್ನು ಕದಿಯುತ್ತಿದ್ದ ಆರೋಪಿಯೊಬ್ಬನನ್ನು ಲಷ್ಕರ್ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮಡಿಕೇರಿಯ ಮಹಮ್ಮದ್ ಇಮ್ರಾನ್ (37) ಬಂಧಿತ ಆರೋಪಿ. ಈತನಿಂದ ₹ 13.85 ಲಕ್ಷ ಮೌಲ್ಯದ 277 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.

ಜನವರಿ 16ರಂದು ರಾಮನಗರದಿಂದ ಮಡಿಕೇರಿಗೆ ಮಹಿಳೆಯೊಬ್ಬರು ಪ್ರಯಾಣಿಸುವಾಗ ಇವರ ಲಗೇಜ್‌ ಬ್ಯಾಗ್‌ ಕಳವಾಗಿತ್ತು. ಇದರಲ್ಲಿ ಚಿನ್ನಾಭರಣಗಳಿದ್ದವು ಎಂದು ಅವರು ದೂರು ನೀಡಿದ್ದರು.

ಇದರ ಬೆನ್ನತ್ತಿದ ಪೊಲೀಸರು ಬಸ್‌ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಆರೋಪಿಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದರು. ಈ ವೇಳೆ ಈತ ಪ್ರಯಾಣಿಕರ ಬ್ಯಾಗ್‌ಗಳು ಹಾಗೂ ಕಿಸೆಗಳಿಂದ ಹಣ ಮತ್ತು ಚಿನ್ನಾಭರಣಗಳನ್ನು ಕದಿಯುತ್ತಿದ್ದ ಕುರಿತು ಒಪ್ಪಿಕೊಂಡ. ಚಿನ್ನಾಭರಣಗಳನ್ನು ನಗರದ ವಿವಿಧ ಆಭರಣದ ಅಂಗಡಿಗಳಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.‌

ಡಿಸಿಪಿಗಳಾದ ಪ್ರಕಾಶ್‌ಗೌಡ ಹಾಗೂ ಗೀತಾ ಪ್ರಸನ್ನ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎಸ್.ಡಿ.ಸುರೇಶ್‌ಕುಮಾರ್, ಪಿಎಸ್‌ಐಗಳಾದ ಗೌತಮ್‌ಗೌಡ, ಧನಲಕ್ಷ್ಮೀ, ಸಿಬ್ಬಂದಿಯಾದ ಕೆ.ಎನ್.ಲೋಕೇಶ್, ಮಹದೇವಸ್ವಾಮಿ, ಬೋಪಯ್ಯ, ಮಂಜುನಾಥ್, ಪ್ರತೀಪ್, ಚಿನ್ನಪ್ಪ, ಕಲ್ಲೋಳಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು