ಪ್ರಧಾನಿ ಭೇಟಿ; ಬಿಗಿ ಭದ್ರತೆ

ಶನಿವಾರ, ಏಪ್ರಿಲ್ 20, 2019
31 °C
1,500 ಮಂದಿ ಪೊಲೀಸರ ನಿಯೋಜನೆ, ಕೆಲವೆಡೆ ಸಂಚಾರ ನಿರ್ಬಂಧ

ಪ್ರಧಾನಿ ಭೇಟಿ; ಬಿಗಿ ಭದ್ರತೆ

Published:
Updated:

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 9ರಂದು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದು, ಭದ್ರತೆಗೆ ಒಂದೂವರೆ ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರಧಾನಿ ಅವರು ಚಿತ್ರದುರ್ಗದಿಂದ ವಿಶೇಷ ವಿಮಾನದ ಮೂಲಕ ಸಂಜೆ 3 ಗಂಟೆಗೆ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಅಲ್ಲಿಂದ ರಸ್ತೆ ಮಾರ್ಗದಲ್ಲಿ ಮಹಾರಾಜ ಕಾಲೇಜು ಮೈದಾನಕ್ಕೆ ಬರಲಿದ್ದಾರೆ. ಈ ವೇಳೆ ಸಂಚಾರ ವ್ಯವಸ್ಥೆಯಲ್ಲಿ ಸಾಕಷ್ಟು ಮಾರ್ಪಾಟು ಮಾಡಲಾಗಿದೆ.

ಪ್ರಧಾನಿಯವರ ವಿಶೇಷ ‌ಭದ್ರತಾ ಪಡೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಇಡೀ ಮೈದಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. 7 ಮಂದಿ ಎಸ್‌.ಪಿ ದರ್ಜೆಯ ಅಧಿಕಾರಿಗಳು, 22 ಮಂದಿ ಎಸಿಪಿ, 50ಕ್ಕೂ ಹೆಚ್ಚು ಇನ್‌ಸ್ಪೆಕ್ಟರ್‌ಗಳು ಸೇರಿದಂತೆ 1,500 ಸಿಬ್ಬಂದಿ ಇರಲಿದ್ದಾರೆ.

ಪಾರ್ಕಿಂಗ್ ವ್ಯವಸ್ಥೆ ಎಲ್ಲೆಲ್ಲಿ?

* ಗೀತಾ ರಸ್ತೆ, ಕೆ.ಆರ್. ಬುಲೇವಾರ್ಡ್ ರಸ್ತೆಯಲ್ಲಿ ಜಿ.ಪಂ.ಕಚೇರಿಯಿಂದ ಏಕಲವ್ಯ ವೃತ್ತದವರೆಗೆ

* ಮಹಾರಾಜ ಜೂನಿಯರ್ ಕಾಲೇಜು ಮೈದಾನ (ಜೆ.ಎಲ್.ಬಿ.ರಸ್ತೆ), ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ

* ಮಹಾರಾಜ ಪದವಿ ಮತ್ತು ಯುವರಾಜ ಪದವಿ ಕಾಲೇಜು ಮೈದಾನಗಳು (ಶತಮಾನೋತ್ಸವ ಭವನದ ದ್ವಾರದ ಮೂಲಕ)

* ಸರಸ್ವತಿಪುರಂ ಈಜುಕೊಳದ ರಸ್ತೆ, ಕುಕ್ಕರಹಳ್ಳಿ ರಸ್ತೆ

ಬಸ್‍ಗಳು, ಮ್ಯಾಕ್ಸಿಕ್ಯಾಬ್, ಇತರೆ ವಾಹನಗಳು:

* ವಿಲೇಜ್ ಹಾಸ್ಟೆಲ್ ಮೈದಾನ, ಮಹಾಬೋದಿ ಶಾಲಾ ಆವರಣ, ಹೊಟೇಲ್ ಏರ್‌ಲೈನ್ಸ್‌ ಮುಂಭಾಗದ ರಸ್ತೆಯಲ್ಲಿ ನಿಲುಗಡೆ, ನರಸರಾಜ ರಸ್ತೆ, ಎಂ.ಜಿ ರಸ್ತೆ, ದೊಡ್ಡಕೆರೆ ಮೈದಾನ

ವಾಹನಗಳು ಸಂಚರಿಸಬೇಕಾದ ಬದಲಿ ಮಾರ್ಗಗಳು:

* ನಂಜನಗೂಡಿನಿಂದ ಮೈಸೂರು ನಗರದ ಕಡೆಗೆ ಬರುವ ಎಲ್ಲಾ ವಾಹನಗಳು ನಂಜನಗೂಡು ಕಬಿನಿ ನದಿ ಸೇತುವೆ ಬಳಿ ಡೀಯೇಷನ್ ಪಡೆದು ಬಸವನಪುರ-ಕೆಂಪಸಿದ್ದನಹುಂಡಿ ಮೂಲಕ ಹದಿನಾರು ಗ್ರಾಮ ಸುತ್ತೂರು ಗ್ರಾಮ- ವರುಣ ಮೂಲಕ ತಿ.ನರಸೀಪುರ ಮುಖ್ಯ ರಸ್ತೆಯನ್ನು ಸೇರಿ ಎಡ ತಿರುವು ಪಡೆದು ತಿ.ನರಸಿಪುರ ರಸ್ತೆ ಮುಖಾಂತರ ಮೈಸೂರು ರಸ್ತೆ ಸೇರುವುದು

* ನಂಜನಗೂಡು ರಸ್ತೆ ಕಡಕೊಳ ಗ್ರಾಮದಿಂದ ಸಿಂಧುವಳ್ಳಿ - ತಳೂರು- ಉದ್ಬೂರು- ಮೂಲಕ ಮಾನಂದವಾಡಿ ರಸ್ತೆ ಸೇರಿ ಬಲ ತಿರುವು ಪಡೆದು ಮೈಸೂರು ನಗರ ಸೇರಬೇಕು

* ಮೈಸೂರು ನಗರದಿಂದ ನಂಜನಗೂಡು ಕಡೆಗೆ ಹೋಗುವ ಎಲ್ಲಾ ಸಾರ್ವಜನಿಕ ವಾಹನಗಳು ಮೈಸೂರು ನಗರದ ಮಾನಂದವಾಡಿ ರಸ್ತೆ ಮೂಲಕ ಉದ್ಬೂರು ಗ್ರಾಮ - ತಳೂರು ಗ್ರಾಮ - ಸಿಂಧುವಳ್ಳಿ- ಮೂಲಕ ಕಡಕೊಳ ತಲುಪಿ ನಂತರ ನಂಜನಗೂಡು ಕಡೆಗೆ ಮುಂದೆ ಸಾಗಬೇಕು

* ಬೆಂಗಳೂರು ರಸ್ತೆ ಕಡೆಯಿಂದ ನಂಜನಗೂಡು ಕಡೆಗೆ ಹೋಗುವ ಎಲ್ಲ ಸಾರ್ವಜನಿಕ ವಾಹನಗಳು ಬೆಂಗಳೂರು ರಿಂಗ್ ರಸ್ತೆ ಜಂಕ್ಷನ್‍ನಲ್ಲಿ (ಕೊಲಂಬಿಯ ಏಷಿಯಾ ಆಸ್ಪತ್ರೆ ಜಂಕ್ಷನ್) ಎಡ ತಿರುವು ಪಡೆದು ರಿಂಗ್ ರಸ್ತೆ ಮೂಲಕ ಬನ್ನೂರು ರಿಂಗ್ ರಸ್ತೆ ಜಂಕ್ಷನ್- ತಿ.ನರಸೀಪುರ ರಸ್ತೆ ರಿಂಗ್ ರಸ್ತೆ ಜಂಕ್ಷನ್-ಎಡತಿರುವು ಪಡೆದು ಮುಂದೆ ಸಾಗಿ ವರುಣ ಗ್ರಾಮದ ಮೂಲಕ ನಂಜನಗೂಡಿಗೆ ಹೋಗಬೇಕು.

* ನಗರ ಬಸ್ ನಿಲ್ದಾಣದಿಂದ ಚಾಮರಾಜ ಜೋಡಿ ರಸ್ತೆ ಮೂಲಕ ಪಶ್ಚಿಮ ಭಾಗದ ಊರುಗಳಿಗೆ ಹೋಗುವ ಎಲ್ಲಾ ಸಾರಿಗೆ ಬಸ್ಸುಗಳನ್ನು ಬಿ.ಎನ್.ರಸ್ತೆ ಆರ್ಚ್‍ಗೇಟ್-ಇರ್ವಿನ್ ರಸ್ತೆ- ಜೆ.ಕೆ.ಮೈದಾನ ಜಂಕ್ಷನ್-ರೈಲ್ವೆ ನಿಲ್ದಾಣ-ದಾಸಪ್ಪ ವೃತ್ತ-ಬಲ ತಿರುವು-ಕೆ.ಆರ್.ಎಸ್ ರಸ್ತೆ-ವಾಲ್ಮೀಕಿ ರಸ್ತೆ ಮೂಲಕ ಹುಣಸೂರು ರಸ್ತೆ ತಲುಪಿ ಮುಂದೆ ಸಾಗಬೇಕು.

* ಹುಣಸೂರು ರಸ್ತೆ ಮೂಲಕ ಹೊರ ಊರುಗಳಿಂದ ಮೈಸೂರು ನಗರಕ್ಕೆ ಬಂದು ಬಸ್ ನಿಲ್ದಾಣಕ್ಕೆ ಹೋಗುವ ಸಾರಿಗೆ ಸಂಸ್ಥೆಯ ಎಲ್ಲಾ ಬಸ್ಸುಗಳನ್ನು ಹಿನಕಲ್ ರಿಂಗ್ ರಸ್ತೆ ಜಂಕ್ಷನ್‌ನಲ್ಲಿ ಪ್ಲೈಓವರ್‌ಗಿಂತ ಮೊದಲು ರಿಂಗ್ ರಸ್ತೆಯನ್ನು ತಲುಪಿ, ರಿಂಗ್ ರಸ್ತೆಯಲ್ಲಿ ಎಡಕ್ಕೆ ತಿರುವು ಪಡೆದು -ರಿಂಗ್ ರಸ್ತೆಗೆ ಮುಂದುವರೆದು-ಬೆಂಗಳೂರು ರಿಂಗ್ ರಸ್ತೆ ಜಂಕ್ಷನ್ ಬಳಿ ಬಲ ತಿರುವು ಪಡೆದು ಹಳೆ ಮೈಸೂರು ಬೆಂಗಳೂರು ರಸ್ತೆ ಮೂಲಕ ಬಿ.ಎನ್.ರಸ್ತೆ-ಎ.ಟಿ.ಎಸ್ ವೃತ್ತ- ಬಿ.ಎನ್.ರಸ್ತೆ ಮೂಲಕ ಮುಖಾಂತರ ಬಸ್ ನಿಲ್ದಾಣಕ್ಕೆ ಬರಬೇಕು.
 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !