ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಕಾರಿ ಮನೆಯಲ್ಲಿ ಮತದಾರರ ಜಾಗೃತಿ

ಮುಸ್ಲಿಂ ದಂಪತಿಯಿಂದ ಜನರಿಗೆ ಮತದಾನದ ಅರಿವು
Last Updated 25 ಏಪ್ರಿಲ್ 2018, 10:42 IST
ಅಕ್ಷರ ಗಾತ್ರ

ಹಾಸನ: ಮತದಾನ ಜಾಗೃತಿಗೆ ಕೈ ಜೋಡಿಸಿರುವ ತರಕಾರಿ ವ್ಯಾಪಾರಿಯೊಬ್ಬರು, ವಿಭಿನ್ನವಾಗಿ ಜಾಗೃತಿ ಅಭಿಯಾನ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ನಗರದ ಎಪಿಎಂಸಿ ಆವರಣದಲ್ಲಿ ತರಕಾರಿ ಅಂಗಡಿ ತೆರೆದಿರುವ ಜಾಫರ್ ಮತ್ತು ಅಮ್ರಾನ್ ದಂಪತಿ, ತಮ್ಮ ಅಂಗಡಿಯಿಂದ ತರಕಾರಿಯನ್ನು ನೇರವಾಗಿ ಖರೀದಿಸುವ
ಅಥವಾ ಮನೆ ಮನೆಗೆ ತರಿಸಿಕೊಳ್ಳುವ ಗ್ರಾಹಕರೆಲ್ಲರಿಗೂ ಮತದಾನದ ಮಹತ್ವದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

‘ಮತದಾನಕ್ಕಾಗಿ ಮಮತೆಯ ಕರೆಯೋಲೆ. ತಪ್ಪದೇ ಮತ ಚಲಾಯಿಸಿ. ನಿಮ್ಮ ಕರ್ತವ್ಯ ನಿರ್ವಹಿಸಿ. ಸರ್ವ ಮತದಾರರಿಗೂ ತರಕಾರಿ ಮನೆ ಹೃತ್ಪೂರ್ವಕ ಸ್ವಾಗತ ಕೋರುತ್ತಿದೆ. ಸ್ಥಳ: ನಿಮ್ಮ ಮತಗಟ್ಟೆ. ಸಮಯ: ಬೆಳಿಗ್ಗೆ 7ರಿಂದ ಸಂಜೆ 7 ಗಂಟೆವರೆಗೆ, ದಿನಾಂಕ ಮೇ 12’ ಎಂದು ಮುದ್ರಿಸಿದ ಪೇಪರ್ ಕವರ್‌ ಮತ್ತು ಬಟ್ಟೆ ಬ್ಯಾಗ್‌ನಲ್ಲಿ ತರಕಾರಿ ವಿತರಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

ತರಕಾರಿ ಮನೆಗೆ 1,700 ಕಾಯಂ ಗ್ರಾಹಕರಿದ್ದು, ಅವರ ಮೂಲಕವೂ ಮತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

‘ಉದ್ಯೋಗದ ಜತೆಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಬೇಕು. ಮತದಾನದಂತಹ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುವ ಚಟುವಟಿಕೆ ಬಗ್ಗೆ ಅರಿವು ಮೂಡಿಸುವ ಕಾರ್ಯ ಸಂತಸ ತಂದಿದೆ’ ಎನ್ನುತ್ತಾರೆ ನವಾಬ್.

ಮುದ್ರಿತ ಕವರ್‌ಗಳ ಜತೆಗೆ ಬಿಲ್ಲಿನ ಮೇಲೂ ಜಾಗೃತಿ ಮೂಡಿಸುವ ಘೋಷಣೆ ಮುದ್ರಿಸಿ ಪ್ರಚಾರ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT