ಶನಿವಾರ, ಡಿಸೆಂಬರ್ 14, 2019
21 °C

ಪೊಲೀಸರಿಂದಲೇ ಸಂಚಾರ ನಿಯಮ ಉಲ್ಲಂಘನೆ; ವ್ಯಾಪಕ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಸಂಚಾರ ನಿಯಮವನ್ನು ಉಲ್ಲಂಘಿಸಿದ ಪೊಲೀಸರ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ಕೇಳಿ ಬಂದಿದೆ.

ಸುಮಂತ್ ಎಂಬುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಡಿ. 8ರಂದು ಮಧ್ಯಾಹ್ನ 4.15ರ ಸಮಯದಲ್ಲಿ ದೇವರಾಜ ಪೊಲೀಸ್‌ ಠಾಣೆ ಎದುರಿನ ವಾಹನ ನಿಲುಗಡೆ ನಿಷೇಧಿತ ಪ್ರದೇಶ (ನೊ ಪಾರ್ಕಿಂಗ್‌) ಸ್ಥಳದಲ್ಲಿ ಪೊಲೀಸರ ಟೋಯಿಂಗ್‌ ವಾಹನವನ್ನು ನಿಲ್ಲಿಸಿರುವುದನ್ನು ಚಿತ್ರ ಸಮೇತ ಅಪ್‌ಲೋಡ್‌ ಮಾಡಿದ್ದಾರೆ. 

ಜತೆಗೆ, ‘ಸಾರ್ವಜನಿಕರು ಇಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ದಂಡ ವಿಧಿಸುತ್ತಾರೆ. ಈಗ ಪೊಲೀಸರೇ ತಮ್ಮ ಅಧಿಕೃತ ವಾಹನವನ್ನು ವಾಹನ ನಿಲುಗಡೆ ನಿಷೇಧಿತ ಪ್ರದೇಶದಲ್ಲಿ ನಿಲ್ಲಿಸಿದ್ದಾರೆ. ಈಗ ಇವರಿಗೆ ಯಾರು ದಂಡ ವಿಧಿಸುತ್ತಾರೆ, ಯಾವ ಕ್ರಮ ಕೈಗೊಳ್ಳುತ್ತಾರೋ ಎನ್ನುವುದು ತಿಳಿಯದು’ ಎಂದು ಬರೆಯುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಪೋಸ್ಟ್‌ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು, ಸಾರ್ವಜನಿಕರು ಪೊಲೀಸರ ವರ್ತನೆ ಬಗೆಗೆ ಕಿಡಿಕಾರಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು