ಗುರುವಾರ , ಡಿಸೆಂಬರ್ 12, 2019
26 °C

ಪೊಲೀಸ್‌ ಕ್ರೀಡಾಕೂಟ: ಸಿಇಎಆರ್‌ ಚಾಂಪಿಯನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ನಗರದಲ್ಲಿ ನಡೆದ ಮೈಸೂರು ನಗರ ಪೊಲೀಸ್ ವಾರ್ಷಿಕ ಕ್ರೀಡಾಕೂಟದಲ್ಲಿ ನಗರ ಸಶಸ್ತ್ರ ಮೀಸಲುಪಡೆ (ಸಿಎಆರ್) ತಂಡವು ಚಾಂಪಿಯನ್‌ಶಿಪ್ ಪಡೆದುಕೊಂಡಿತು.

ಪುರುಷರ ವಿಭಾಗದಲ್ಲಿ ಸಿಎಆರ್ ಕಾನ್‌ಸ್ಟೆಬಲ್ ಮೈಲಾರಿ ಹಾಗೂ ಮಹಿಳಾ ವಿಭಾಗದಲ್ಲಿ ನರಸಿಂಹರಾಜ ಉಪ ವಿಭಾಗದ ಕಾನ್‌ಸ್ಟೆಬಲ್ ಕೆ.ಪಿ.ಉಷಾ ‘ಸರ್ವೋತ್ತಮ ಪ್ರಶಸ್ತಿ’ ಪಡೆದರು.

ಶನಿವಾರ ಸಂಜೆ ನಡೆದ ಕ್ರೀಡಾಕೂಟ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಪೊಲೀಸ್ ಅಕಾಡೆಮಿ ನಿರ್ದೇಶಕ ವಿಪುಲ್‌ಕುಮಾರ್ ವಿಜೇತರಿಗೆ ಬಹುಮಾನ ವಿತರಿಸಿದರು. ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಮಣ್ಯೇಶ್ವರ ರಾವ್, ಡಿಸಿಪಿಗಳಾದ ಎನ್.ವಿಷ್ಣುವರ್ಧನ, ಡಾ.ವಿಕ್ರಂ ವಿ.ಅಮಟೆ, ಚೆನ್ನಯ್ಯ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)