ಶನಿವಾರ, ಅಕ್ಟೋಬರ್ 19, 2019
27 °C

ತಲುಪದ ‘ಮನಿ ಆರ್ಡರ್’ | ಅಂಚೆ ಇಲಾಖೆ ಅಧಿಕಾರಿಗಳಿಗೆ ₹ 8 ಸಾವಿರ ದಂಡ

Published:
Updated:

ಮೈಸೂರು: ‘ಮನಿ ಆರ್ಡರ್’ ತಲುಪಿಸದೇ ಸೇವಾ ನ್ಯೂನತೆ ಎಸಗಿದ ಅಂಚೆ ಇಲಾಖೆಯ ಹಿರಿಯ ಅಧೀಕ್ಷಕ ಹಾಗೂ ಚಾಮುಂಡಿಪುರಂ ಅಂಚೆ ಕಚೇರಿಯ ಸಬ್‌ಪೋಸ್ಟ್‌ಮಾಸ್ಟರ್‌ಗೆ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ ₹ 8 ಸಾವಿರ ದಂಡ ವಿಧಿಸಿದೆ.

ಇಲ್ಲಿನ ವಿದ್ಯಾರಣ್ಯಾಪುರಂ ನಿವಾಸಿ ಭೈರಯ್ಯ ಅವರು ಬೆಂಗಳೂರಿನ ಕೆಂಗೇರಿಯ ಅಂಚೆಪಾಳ್ಯದಲ್ಲಿನ ಯುಎಸ್‌ಎ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ತನ್ನ ಮೊಮ್ಮಗಳಿಗೆ 2018ರ ಜುಲೈ 18ರಂದು ₹ 500 ರೂಪಾಯಿಗಳನ್ನು ‘ಎಲೆಕ್ಟ್ರಾನಿಕ್ ಮನಿ ಆರ್ಡರ್’ ರೂಪದಲ್ಲಿ ಚಾಮುಂಡಿಪುರಂ ಅಂಚೆ ಕಚೇರಿಯಿಂದ ಕಳುಹಿಸಿದ್ದರು. ಆದರೆ, ಈ ಹಣ 12 ದಿನ ಕಳೆದರೂ ತಲುಪಿರಲಿಲ್ಲ.

ಈ ಕುರಿತು ಅಂಚೆ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲಿಲ್ಲ. ಇದರಿಂದ ಬೇಸರಗೊಂಡ ಅವರು 2018ರ ಆಗಸ್ಟ್ 14ರಂದು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ವೇದಿಕೆಯು ವಿಧಿಸಿದೆ.

ದೂರುದಾರ ಭೈರಯ್ಯ ಅವರ ಪರವಾಗಿ ವಕೀಲ ಡಿ.ಪ್ರದೀಪ್ ವಾದ ಮಂಡಿಸಿದ್ದರು.

Post Comments (+)