ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಿಧೆಡೆ ವಿದ್ಯುತ್ ವ್ಯತ್ಯಯ ನಾಳೆ

Last Updated 25 ಜೂನ್ 2019, 15:21 IST
ಅಕ್ಷರ ಗಾತ್ರ

ಮೈಸೂರು: ನಗರದ ವಿ.ವಿ. ಮೊಹಲ್ಲಾ ವಿಭಾಗದ ವಿದ್ಯುತ್ ವಿತರಣಾ ಕೇಂದ್ರದ ವತಿಯಿಂದ ಜೂನ್ 27ರ ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ, 66/11 ಕೆ.ವಿ. ಜಿ.ಐ.ಎಸ್ ಕಲಾಮಂದಿರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ವಿದ್ಯುತ್ ಸರಬರಾಜು ವ್ಯತ್ಯಯವಾಗಲಿದೆ.

ಈ ಸಂಬಂಧ ಸರಸ್ವತಿಪುರಂನ 1ರಿಂದ 5ನೇ ಮೇನ್, ನ್ಯೂ ಕಾಂತರಾಜ ಅರಸು ರಸ್ತೆ, ಕೆ.ಜಿ.ಕೊಪ್ಪಲು ಮುಖ್ಯ ರಸ್ತೆ, ಯುನಿವರ್ಸಿಟಿ ಕ್ವಾಟ್ರಸ್, ಮುಸ್ಲಿಂ ಹಾಸ್ಟೆಲ್, ವಿಶ್ವ ಮಾನವ ಜೋಡಿ ರಸ್ತೆ, ಮುರುಗನ್ ಮೆಡಿಕಲ್‍ನಿಂದ ಕುಕ್ಕರಹಳ್ಳಿ ಕೆರೆ ರಸ್ತೆವರೆಗೆ, ಸರಸ್ವತಿಪುರಂ 5ರಿಂದ 16ನೇ ಮೇನ್, ಪಡುವಾರಹಳ್ಳಿ, ಡಿಸಿ ರೆಸಿಡೆನ್ಸಿ, ರೀಜನಲ್ ಕಮಿಷನರ್ ಆಫೀಸ್, ಸಿ.ಎಫ್.ಟಿ.ಆರ್.ಐ ಕ್ಯಾಂಪಸ್, ವಾಲ್ಮೀಕಿ ರಸ್ತೆ, ಜಡ್ಜ್ ಕ್ವಾಟ್ರಸ್, ಒಂಟಿಕೊಪ್ಪಲು, ಹುಣಸೂರು ಮುಖ್ಯ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವಿ.ವಿ. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಎನ್.ಆರ್. ಮೊಹಲ್ಲಾ:ಎನ್.ಆರ್. ಮೊಹಲ್ಲಾ ವಿಭಾಗದ ವಿದ್ಯುತ್ ವಿತರಣಾ ಕೇಂದ್ರದ ವತಿಯಿಂದ ಜೂನ್ 27ರ ಗುರುವಾರ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೆ, 66/11 ಕೆ.ವಿ. ರಾಜೀವ್‍ನಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೊದಲನೇ ತ್ರೈಮಾಸಿಕ ನಿರ್ವಹಣಾ ಕೆಲಸದ ನಿಮಿತ್ತ ವಿದ್ಯುತ್ ಸರಬರಾಜು ವ್ಯತ್ಯಯವಾಗುವುದು.

ಈ ಸಂಬಂಧ ನಾರಾಯಣ ಹೃದಯಾಲಯ, ರಾಜೀವ್‍ನಗರ 2ನೇ ಹಂತ, ಅಲ್ಬದರ್ ಮಸೀದಿ, ಸೂರ್ಯನಾರಾಯಣ ದೇವಸ್ಥಾನ, ಕ್ರಿಶ್ಚಿಯನ್ ಕಾಲೊನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಎನ್.ಆರ್. ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT