ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವುಕರಾದ ಪ್ರಮೋದಾ ದೇವಿ ಒಡೆಯರ್

Last Updated 2 ಜೂನ್ 2019, 19:48 IST
ಅಕ್ಷರ ಗಾತ್ರ

ಮೈಸೂರು: ‘ಸ್ವಂತಕ್ಕಾಗಿ ಎಂದೂ ಚಿಂತಿಸದ ಪತಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಜೀವನದು ದ್ದಕ್ಕೂ ಕಷ್ಟದ ಹಾದಿ ತುಳಿದರು’ ಎಂದು ರಾಜ ವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಕಣ್ಣೀರಿಟ್ಟರು.

ಮೈಸೂರು ರಾಜವಂಶಸ್ಥರು ಸ್ಥಾಪಿಸಿರುವ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಪ್ರತಿಷ್ಠಾನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡುತ್ತ ಅವರು ಭಾವುಕರಾದರು.

‘ಪತಿಯೊಂದಿಗಿನ ನಲವತ್ತು ವರ್ಷ ಗಳ ಒಡನಾಟ ನನ್ನನ್ನು ಗಟ್ಟಿಗೊಳಿಸಿತು. ಅವರು ಕಲಾರಾಧಕರಾಗಿದ್ದರು. ಹೃದಯ ವೈಶಾಲ್ಯ ಹೊಂದಿದ್ದರು. ಯಾರಿಗೂ ಕೇಡು ಬಯಸಿರಲಿಲ್ಲ. ಆದರೆ, ರಾಜವಂಶಕ್ಕೆ ನ್ಯಾಯಬದ್ಧವಾಗಿ ಸಿಗಬೇಕಿದ್ದ ಆಸ್ತಿಯನ್ನು ಉಳಿಸಿಕೊಳ್ಳಲು ಕಾನೂನು ಹೋರಾಟ ನಡೆಸಿದ್ದು ಅವರನ್ನು ಬಳಲುವಂತೆ ಮಾಡಿತು’ ಎಂದು ಸ್ಮರಿಸಿದರು.

ಈಶ ಪ್ರತಿಷ್ಠಾನದ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್‌ ಪ್ರತಿಷ್ಠಾನ ಉದ್ಘಾಟಿಸಿದರು. ಇನ್ಫೊಸಿಸ್ ಸಹ ಸಂಸ್ಥಾಪಕ ಎನ್‌.ಆರ್.ನಾರಾಯಣ ಮೂರ್ತಿ ಭಾಗವಹಿಸಿದ್ದರು. ರಾಜ ವಂಶಸ್ಥ ಯದುವೀರ ಕೃಷ್ಣದತ್ತ ಚಾಮ ರಾಜ ಒಡೆಯರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT