ಸಂಪನ್ನಗೊಂಡ ಪ್ರತಿಭಾ ಕಾರಂಜಿ

7
ರಾಜ್ಯಮಟ್ಟದ ಸ್ಪರ್ಧೆಗಳ 2ನೇ ದಿನದ ವಿಶೇಷ

ಸಂಪನ್ನಗೊಂಡ ಪ್ರತಿಭಾ ಕಾರಂಜಿ

Published:
Updated:
Deccan Herald

ಮೈಸೂರು: ಇಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ ಹೊರಹೊಮ್ಮುತ್ತಿತ್ತು. ವಿದ್ಯಾರ್ಥಿಗಳ ನೃತ್ಯ, ನಾಟಕ, ರಂಗೋಲಿ, ಛದ್ಮವೇಷ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಜತೆಗೆ ಕಲೆಯನ್ನೂ ಮೇಳೈಸುವಂತೆ ಮಾಡಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿರುವ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳ 2ನೇ ದಿನ ವಿವಿಧ ಸ್ಪರ್ಧೆಗಳು ನಡೆದವು. ರಾಜ್ಯದ ಹಲವು ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ತಮ್ಮ ಪ್ರಾದೇಶಿಕತೆಯನ್ನು ಸಾರಿ ಪ್ರತಿಭಾ ಕಾರಂಜಿಯಲ್ಲಿ ಕಲೆಯ ಉತ್ಸವವನ್ನು ಸಂಪನ್ನಗೊಳಿಸಿದರು.

ಹಲವು ವಿಶೇಷಗಳು:

ಆಯಾ ಜಿಲ್ಲೆಗಳ ಸಂಸ್ಕೃತಿಯನ್ನು ಸಾರುವಂತಿದ್ದ ಸ್ಪರ್ಧೆಗಳು ವಿಶೇಷತೆಯಿಂದ ಕೂಡಿದ್ದವು. ದೃಶ್ಯಕಲೆ ವಿಭಾಗದಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಯ ಕಲೆಯನ್ನು ಸಾರುವ ಯಕ್ಷಗಾನ ವಿಶೇಷವಾಗಿತ್ತು. ಲಂಬಾಣಿಗಳ ಬದುಕು, ಹಾಡಿಗಳ ಚಿತ್ರಣ ಕಣ್ಣಿಗೆ ಕಟ್ಟುವಂತೆ ಇತ್ತು. ಅಂತೆಯೇ, ಹತ್ತು ತಲೆಯ ರಾವಣನ ಮಾದರಿಗಳು ಜೀವಂತಿಕೆ ಸಾರಿದವು. ಭಕ್ತಿಗೀತೆಗಳಿಗೆ ಹೆಣ್ಣುಮಕ್ಕಳು ವಿಶೇಷ ಉಡುಗೆ ತೊಟ್ಟು ಹೆಜ್ಜೆ ಹಾಕಿ ಮೆಚ್ಚುಗೆಗೆ ಪಾತ್ರರಾದರು.

2ನೇ ದಿನದ ಫಲಿತಾಂಶ

ರಂಗೋಲಿ ಸ್ಪರ್ಧೆ: ಎಂ.ಭೂಮಿಕಾ, ಎ.ಚೋಳೇನಹಳ್ಳಿ ಸರ್ಕಾರಿ ಪ್ರೌಢಶಾಲೆ, ಹಾಸನ (ಪ್ರ), ಜ್ಯೋತಿ ಎಸ್.ಮೋದಗಿ, ಸರ್ಕಾರಿ ಪ್ರೌಢಶಾಲೆ, ಬೆಳಗಾವಿ (ದ್ವಿ), ಧರಿತ್ರೀ, ಎಸ್.ಡಿ.ಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ದಕ್ಷಿಣ ಕನ್ನಡ (ತೃ).

ಮಿಮಿಕ್ರಿ ಸ್ಪರ್ಧೆ: ರಿತೇಷ್, ಸೇಂಟ್ ಕ್ಲಾರೆಟ್ ಶಾಲೆ, ಬೆಂಗಳೂರು (ಪ್ರ), ತೊರೆಹಡ್ಲು ಸಂತೋಷ್, ಸರ್ಕಾರಿ ಪ್ರೌಢಶಾಲೆ, ಚಿಕ್ಕಮಗಳೂರು (ದ್ವಿ), ಉಜ್ವಲ್‌ ಎಸ್‌.ಶೆಟ್ಟಿ, ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ದಕ್ಷಿಣ ಕನ್ನಡ (ತೃ)

ಕನ್ನಡ ಭಾಷಣ ಸ್ಪರ್ಧೆ: ನಂದಿನಿ ಪ್ರಶಾಂತ್ ಸಾವಂತ್, ಸೇಂಟ್ ಲೈಕಲ್ಸ್ ಕಾನ್ವೆಂಟ್, ಕಾರವಾರ (ಪ್ರ), ಪ್ರದ್ಯುಮ್ನ ಮೂರ್ತಿ, ರೋಟರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ದಕ್ಷಿಣ ಕನ್ನಡ (ದ್ವಿ), ಕೆ.ಎಂ.ಸುಪ್ರೀತಾ, ರಾಜೇಶ್ವರಿ ಪ್ರೌಢಶಾಲೆ, ಮಡಿಕೇರಿ (ತೃ).

ಇಂಗ್ಲಿಷ್ ಭಾಷಣ: ಇಂಚರಾ, ಜೈನ್ ವಿದ್ಯಾ ನಿಕೇತನ ಪ್ರೌಢಶಾಲೆ, ರಾಮನಗರ (ಪ್ರ), ಸ್ವಾತಿ ಎನ್.ಭಟ್, ವಿಶ್ವ ದರ್ಶನ ಆಂಗ್ಲ ಮಾಧ್ಯಮ ಶಾಲೆ, ಶಿರಸಿ (ದ್ವಿ), ಶ್ರೀಯಾ ಪೈ, ಆಳ್ವಾಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಮೂಡುಬಿದಿರೆ (ತೃ).

ಹಿಂದಿ ಭಾಷಣ ಸ್ಪರ್ಧೆ: ಸೈಯಿದಾ ಕೌನೇನ, ಪೂರ್ಣಪ್ರಜ್ಞ ಪ್ರೌಢಶಾಲೆ, ಶಿವಪುರ, ಮಂಡ್ಯ (ಪ್ರ), ಸಿಮ್ರಾನ್ ಬಿ.ಕೊಟ್ಟೂರ, ವೈಎಸ್‌ಬಿಎಂ ಪ್ರೌಢಶಾಲೆ, ಬೆಳಗಾವಿ (ದ್ವಿ), ಅಜ್ಮಿನ್ ಬಾನು, ರೋಟರಿ ಆಂಗ್ಲ ಮಾಧ್ಯಮ, ದಕ್ಷಿಣ ಕನ್ನಡ (ತೃ).

ಸಂಸ್ಕೃತ ಭಾಷಣ: ವಿಭಾ, ಸರ್ಕಾರಿ ಪಿ.ಯು ಕಾಲೇಜು, ಚಿಕ್ಕಮಗಳೂರು (ಪ್ರ), ವೈಷ್ಣವಿ ಜಯಪ್ರಕಾಶ್, ಪ್ರೆಸೆಂಟೇಷನ್ ಪ್ರೌಢಶಾಲೆ, ಧಾರವಾಡ (ದ್ವಿ), ಎಲ್.ನಾಗಶ್ರೀ, ಶಾರದಾ ವಿಲಾಸ ಬಾಲಕಿಯ ಪ್ರೌಢಶಾಲೆ, ಮೈಸೂರು (ತೃ).

ಉರ್ದು ಭಾಷಣ: ನುಸರತ್ ಯಳವಟ್ಟಿ, ಅಲ್ಮಿರಾಜ್ ಪ್ರೌಢಶಾಲೆ, ಹಾವೇರಿ (ಪ್ರ), ಖುಬೇಬ ಅಹ್ಮದ್, ಇಸ್ಲಾಮಿಯಾ ಪ್ರೌಢಶಾಲೆ, ಉತ್ತರ ಕನ್ನಡ (ದ್ವಿ), ರುಕ್ಸನಾ ಬೇಗಂ, ಸರ್ಕಾರಿ ಪಿ.ಯು ಕಾಲೇಜು, ಬೀದರ್ (ತೃ).

ಮರಾಠಿ ಭಾಷಣ ಸ್ಪರ್ಧೆ: ಹೆಗಡೆ ಕಟ್ಟಾ ಮಹಾಲಸಾ ನಾಗೇಂದ್ರ ಪೈ, ಗಜಾನನ ಸೆಕೆಂಡರಿ ಸ್ಕೂಲ್, ಶಿರಸಿ (ಪ್ರ), ಬಿ.ವೈಷ್ಣವಿ, ಎಂ.ಎಚ್.ಎಸ್.ಶಾಲೆ, ಬೆಳಗಾವಿ (ದ್ವಿ), ಧರಿತ್ರೀ, ಎಸ್‌ಡಿಎಂ ಆಂಗ್ಲ ಮಾಧ್ಯಮ ಪ್ರೌಢಶಾಲೆ, ದಕ್ಷಿಣ ಕನ್ನಡ (ತೃ).

ಭಾವಗೀತೆ ಸ್ಪರ್ಧೆ: ಭೂಮಿ ದಿನೇಶ್ ಹೆಗ್ಡೆ, ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಶಿರಸಿ (ಪ್ರ), ಚೈತ್ರಾ ಉಮಾಕಾಂತ ಹೆಬ್ಬಾರ್, ಶಿವಶಾಂತಿಕ ಪರಮೇಶ್ವರಿ ಪ್ರೌಢಶಾಲೆ, ಉತ್ತರ ಕನ್ನಡ (ದ್ವಿ), ಡಿ.ಆರ್.ರಕ್ಷಾ ರಮೇಶ್, ಚಿನ್ಮಯ ವಿದ್ಯಾಲಯ, ಕೋಲಾರ (ತೃ).

ಆಶುಭಾಷಣ ಸ್ಪರ್ಧೆ: ಅಭಿಮಾನಿ, ಜಿ.ವಿ.ಗೌಡ ಪ್ರೌಢಶಾಲೆ, ದೊಡ್ಡಿಂದುವಾಡಿ, ಚಾಮರಾಜನಗರ (ಪ್ರ), ಡಿ.ಎ.ಸೃಷ್ಟಿ, ಪ್ರಶಾಂತ ಪ್ರೌಢಶಾಲೆ, ಕೆ.ಎಂ.ದೊಡ್ಡಿ, ಮಂಡ್ಯ(ದ್ವಿ), ಆರ್.ಕುಸುಮಾ ಬಾಯಿ, ಸರ್ಕಾರಿ ಪ್ರೌಢಶಾಲೆ, ಕನಕಗಿರಿ, ಮೈಸೂರು (ತೃ).

ಗಜಲ್ ಸ್ಪರ್ಧೆ: ಶ್ರಿವಿದ್ಯಾ ಪಡೇಕಲ್, ಜಿ.ಪಂ.ಮಾದರಿ ಹಿ.ಪ್ರಾ.ಶಾಲೆ, ದಕ್ಷಿಣ ಕನ್ನಡ (ಪ್ರ), ಅದಿತಿ ಉದಯ್, ಸೇಂಟ್ ಥಾಮಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಉತ್ತರ ಕನ್ನಡ (ದ್ವಿ), ಆವಂತಿ ಸುಬ್ರಾಯ ಹೆಗ್ಡೆ, ಪ್ರೆಸೆಂಟೇಷನ್ ಪ್ರೌಢಶಾಲೆ, ಧಾರವಾಡ (ತೃ).

ಚರ್ಚಾ ಸ್ಪರ್ಧೆ: ಗೌತಮಿ ಅಂದಾನಿ ದೊಡ್ಡಮನಿ, ಕುಮಾರೇಶ್ವರ ಪ್ರೌಢಶಾಲೆ ರಟ್ಟಹಳ್ಳಿ, ಹಾವೇರಿ (ಪ್ರ), ಜಿ.ಎಸ್.ವರ್ಷಿತಾ, ಮಯೂರ ಕಾನ್ವೆಂಟ್, ಹಾವೇರಿ (ದ್ವಿ), ಮೌನಿಕಾ, ಸಹನಾ ಕಾನ್ವೆಂಟ್, ಮಧುಗಿರಿ, ತುಮಕೂರು (ತೃ).

ಜನಪದ ಗೀತೆ ಸ್ಪರ್ಧೆ: ಕೆ.ಎಸ್.ಸಿಂಚನಾ, ವಾಗ್ದೇವಿ ಪ್ರೌಢಶಾಲೆ, ತೀರ್ಥಹಳ್ಳಿ, ಶಿವಮೊಗ್ಗ (ಪ್ರ), ಕೀರ್ತಿನಾಯ್ಕ, ಸರ್ಕಾರಿ ಆದರ್ಶ ಶಾಲೆ ಕೋಡಿಹಳ್ಳಿ, ರಾಮನಗರ (ದ್ವಿ), ಕೆ.ಅಶ್ವಿಜಾ ಉಡುಪ, ವೆರಿವೆಲ್ ಪ್ರೌಢಶಾಲೆ, ಕಿನ್ನಿಗೋಳಿ, ದಕ್ಷಿಣ ಕನ್ನಡ (ತೃ).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !