ಶನಿವಾರ, ಏಪ್ರಿಲ್ 17, 2021
27 °C
ರಾಜ್ಯ ಸರ್ಕಾರದ ನೀತಿ; ಮಠಾಧೀಶರ ನಡೆಗೆ ಕಿಡಿ

ಮೀಸಲಾತಿ | ಮುಖ್ಯಮಂತ್ರಿಯಿಂದ ಜಾತೀಯತೆ ಪೋಷಣೆ: ಪ್ರೊ.ರವಿವರ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಕರ್ನಾಟಕದಲ್ಲಿ ಜಾತೀಯತೆ ಪೋಷಿಸುವ ಕೆಲಸವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಹಳ ಚೆನ್ನಾಗಿ ಮಾಡುತ್ತಿದ್ದಾರೆ. ‘ಜನರಿಂದ, ಜನರಿಗಾಗಿ, ಜನರಿಗೋಸ್ಕರ’ ಎಂಬ ಘೋಷವಾಕ್ಯದಡಿ ಸರ್ಕಾರ ನಡೆಯುತ್ತಿಲ್ಲ. ‘ಲಿಂಗಾಯತರಿಂದ, ಲಿಂಗಾಯತರಿಗಾಗಿ, ಲಿಂಗಾಯತರಿಗೋಸ್ಕರ’ ಇರುವ ಸರ್ಕಾರ ಇದು’ ಎಂದು ಮಾಜಿ ಅಡ್ವೊಕೇಟ್‌ ಜನರಲ್ ಪ್ರೊ.ರವಿವರ್ಮ ಕುಮಾರ್‌ ಟೀಕಿಸಿದರು.

ಮೈಸೂರು ವಿಶ್ವವಿದ್ಯಾಲಯ ಡಾ.ಬಿ.ಆರ್‌.ಅಂಬೇಡ್ಕರ್‌ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಶನಿವಾರ ನಡೆದ, ಅಂತರರಾಷ್ಟ್ರೀಯ ಸಾಮಾಜಿಕ ನ್ಯಾಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಯಡಿಯೂರಪ್ಪ ಅವರು 16 ಜಾತಿಗಳ ಅಭಿವೃದ್ಧಿ ಮಂಡಳಿ ರಚಿಸಿ, ರಾಜ್ಯದ ಬೊಕ್ಕಸದಿಂದ ಸಾಕಷ್ಟು ಹಣ ಕೊಟ್ಟಿದ್ದಾರೆ. ಅವರ ಜಾತಿಗೆ ₹ 500 ಕೋಟಿ ಮೀಸಲಿಟ್ಟಿದ್ದಾರೆ. ಜಾತೀಯತೆಯನ್ನು ರಾಜಾರೋಷವಾಗಿ ಪೋಷಿಸುತ್ತಿದ್ದಾರೆ. ಸಂವಿಧಾನ ವಿರೋಧಿ ಚಟುವಟಿಕೆ ನಡೆಯುತ್ತಿದೆ’ ಎಂದು ಕಿಡಿಕಾರಿದರು.

ಒಂದೊಂದು ಜಾತಿಯ ಮಠಗಳಿಗೆ ಇಂತಿಷ್ಟು ಹಣ ನೀಡಲಾಗಿದೆ. ಜನರ ದುಡ್ಡನ್ನು ಜಾತಿಗಳಿಗಾಗಿ ಮುಡುಪಾಗಿಟ್ಟಿರುವ ರಾಜ್ಯ ಸರ್ಕಾರದ ನೀತಿಯೇ ಇಂದು ನಡೆಯುತ್ತಿರುವ ಮೀಸಲಾತಿ ಚಳವಳಿಗಳಿಗೆ ಕಾರಣ. ಜಾತ್ಯತೀತ ಸರ್ಕಾರ ಇದ್ದಿದ್ದರೆ ಇಂತಹ ಚಳವಳಿಯೇ ನಡೆಯುತ್ತಿರಲಿಲ್ಲ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು